SUDDILIVE || SHIVAMOGGA
ವಿಜಯ್ ಮರ್ಚೆಂಟ್ ಟ್ರೋಫಿ-Vijay Merchant Trophy
ನಗರದ ಕೆಎಸ್‌ಸಿಎ ಹಾಗೂ ಜೆಎನ್ಎನ್‌ಸಿಇ ಕ್ರೀಡಾಂಗಣದಲ್ಲಿ ಡಿ.8ರಿಂದ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಬಿಸಿಸಿಐ ಮೂರನೇ ಬಾರಿಗೆ ಇಲ್ಲಿ ಪ್ರಮುಖ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ.
16 ವರ್ಷದೊಳಗಿನ ಪ್ರತಿಭೆಗಳನ್ನು ಗುರುತಿಸಲು ಪಂದ್ಯಾವಳಿ ಅತ್ಯಂತ ಮಹತ್ವದ್ದೆನಿಸಿದೆ. ದೇಶದ ವಿವಿಧ ರಾಜ್ಯಗಳ 36 ತಂಡಗಳು ಹಲವು ಕಡೆಗಳಲ್ಲಿ ಆಯೋಜಿಸಿರುವ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ತಲಾ ಆರು ತಂಡಗಳ ಆರು ಗುಂಪುಗಳನ್ನು ರಚಿಸಲಾಗಿದೆ.
ಎ ಗುಂಪಿನ ಎಲ್ಲ ಪಂದ್ಯಗಳು ಶಿವಮೊಗ್ಗದ ಮೂರು ಕ್ರೀಡಾಂಗಣದಲ್ಲಿ ನಡೆಯಲಿವೆ. ಎ ಗುಂಪಿನಲ್ಲಿ ಚಂಡೀಗಢ, ಗುಜರಾತ್, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ ಹಾಗೂ ವಿದರ್ಭ ತಂಡಗಳಿವೆ. ಕರ್ನಾಟಕ ತಂಡವು ಡಿ ಗುಂಪಿನಲ್ಲಿ ಛತ್ತೀಸ್‌ಗಢದಲ್ಲಿ ಆಡಲಿದೆ. ಈ ಗುಂಪಿನಲ್ಲಿ ಮಧ್ಯಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಗೋವಾ ಹಾಗೂ ಬರೋಡ ತಂಡಗಳಿವೆ.
Vijay Merchant Trophy
