ಹೊಸ ವರ್ಷಕ್ಕೆ ಕುವೆಂಪು ಸ್ಮರಣೆ ʻಬಾ ಇಲ್ಲಿ ಸಂಭವಿಸುʼ ಪ್ರದರ್ಶನ- Kuvempu Memory for the New Year 'BAA ILLI SAMBHAVISU` Performance

SUDDILIVE || SHIVAMOGGA

ಹೊಸ ವರ್ಷಕ್ಕೆ ಕುವೆಂಪು ಸ್ಮರಣೆ ʻಬಾ ಇಲ್ಲಿ ಸಂಭವಿಸುʼ ಪ್ರದರ್ಶನ-Kuvempu Memory for the New Year 'BAA ILLI SAMBHAVISU` Performance

Kuvempu, sambhavisu


ರಾಷ್ಟ್ರಕವಿ ಕುವೆಂಪು ಅವರ ಸೃಷ್ಟಿಸಿ ಪಾತ್ರಗಳ ದರ್ಶನ ನೀಡುವ ಹಾಗೂ ಶಿವಮೊಗ್ಗದ ನೇಟಿವ್ ಥಿಯೋಟರ್ ಸಂಸ್ಥೆಯ ಅರ್ಪಿಸುವ  ʻʻಬಾ ಇಲ್ಲಿ ಸಂಭವಿಸುʼʼ ವಿಭಿನ್ನ ರಂಗ ಪ್ರಯೋಗ ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ  ಜನವರಿ  1 ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಹಾಲಸ್ವಾಮಿ ಆರ್.ಎಸ್. ನಿರ್ದೇಶನದ ಈ ಪ್ರಯೋಗವನ್ನು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣಗಳು ಆಯೋಜಿಸಿವೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್  ಈ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. 

ಕುಪ್ಪಳಿಯಲ್ಲಿ ಈಗಾಗಲೇ ಎರಡು ಪ್ರದರ್ಶನ ಕಂಡಿರುವ ಈ ಪ್ರಯೋಗಕ್ಕೆ ತೀರ್ಥಹಳ್ಳಿಯ ಶ್ರೀಪಾದ್ ಹಾಗೂ ಶಿವಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಂಕರ ಬೆಳಲಕಟ್ಟೆ ಅವರು ರಂಗಸಜ್ಜಿಕೆ  ಹಾಗೂ ಬೆಳಕು ನಿರ್ವಹಸಲಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಡಾ. ಹೆಚ್.ಎಸ್. ನಾಗಭೂಷಣ್, ಡಾ. ಪಿ. ಭಾರತೀದೇವಿ, ಭಾಗ್ಯ ಎಂ.ಟಿ, ಚೇತನ್ ರಾಯನಹಳ್ಳಿ, ಮಲ್ಲಿಕಾರ್ಜುನ ತುರವನೂರು, ಡಾ. ಹರ್ಷಿತಾ, ಕೀರ್ತನಾ ಇದ್ದಾರೆ. ಕಾನೀನ,  ಸ್ಮಶಾನ ಕುರುಕ್ಷೇತ್ರ, ರಾಮಾಯಣ ದರ್ಶನಂ, ಜಲಗಾರ, ಮಲೆಗಳಲ್ಲಿ ಮದುಮಗಳು ಕೃತಿಗಳ ಪ್ರಮುಖ ಭಾಗಗಳ ವಾಚಿಕಾಭಿನಯ ಈ ಪ್ರದರ್ಶನದಲ್ಲಿ ಇರಲಿದೆ.

Kuvempu Memory for the New Year 'BAA ILLI SAMBHAVISU` Performance

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close