ಉರುಳಿಗೆ ಸಿಲುಕಿ ಚಿರತೆ ಸಾವು- Leopard dies after getting caught in a snare

SUDDILIVE || SHIKARIPURA

ಉರುಳಿಗೆ ಸಿಲುಕಿ ಚಿರತೆ ಸಾವು- Leopard dies after getting caught in a snare  

Leopard, snare

ಉರುಳಿಗೆ ಚಿರತೆಯೊಂದು ಸಿಲುಕಿ ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ. ಶಿರಾಳಕೊಪ್ಪ ಅರಣ್ಯ ವಲಯ, ತಾಳಗುಂದ ಬಳಿಯ ಕಾಡಿನಂಚಿನ ಹೊಲದಲ್ಲಿ ನಡೆದಿದೆ.

ತಾಳಗುಂದ ರಾಜ್ಯ ಅರಣ್ಯ, ಖಾಸಗಿ ಜಮೀನಿನ ಅಂಚಿನಲ್ಲಿ ಕಾಡುಪ್ರಾಣಿಗಳಿಗೆ ಹಾಕಿದ ಉರುಳಿಗೆ ಚಿರತೆ ಬಿದ್ದಿರುವುದು ಪತ್ತೆಯಾಗಿದೆ. ಕಾಡಿನಲ್ಲೆ ಉರುಳು ಹಾಕಿರುವ ಸಾಧ್ಯತೆಕಂಡು ಬಂದಿದ್ದು, ಕೊಳೆತ ಸ್ಥಿತಿಯಲ್ಲಿ ಚಿರತೆ ಮೃತದೇಹ ಪತ್ತೆಯಾಗಿದೆ. 

ಚಿರತೆಯ ಕತ್ತಿನಲ್ಲೇ ಉರುಳು ಇರುವುದು ಕಂಡು ಬಂದಿದೆ, ಉರುಳಿಗೆ ಬಿದ್ದ ಚಿರತೆ ಎಳೆದುಕೊಂಡು ಸ್ವಲ್ಪ ದೂರ ಬಂದು ನರಳಿ ಸತ್ತಿರುವ ಸಾಧ್ಯತೆ ಕಂಡುಬಂದಿದೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ತೆರಳಿ RFO ಜಾವೀದ್ ಪರಿಶೀಲನೆ ನಡೆಸಿದ್ದಾರೆ.ಪಶುವೈದ್ಯರ ಸಹಾಯದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 

Leopard dies after getting caught in a snare

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close