ಬನ್ನಿಕೆರೆ ಗ್ರಾಮದಲ್ಲಿ ಮಾರಕಾಸ್ತಗಳಿಂದ ವ್ಯಕ್ತಿಗೆ ಹಲ್ಲೆ- Man attacked with deadly weapon in Bannikere village

 SUDDILIVE || SHIVAMOGGA

ಬನ್ನಿಕೆರೆ ಗ್ರಾಮದಲ್ಲಿ ಮಾರಕಾಸ್ತಗಳಿಂದ ವ್ಯಕ್ತಿಗೆ ಹಲ್ಲೆ- Man attacked with deadly weapon in Bannikere village    

Man, attack

ಶಿವಮೊಗ್ಗ ತಾಲೂಕು ಬನ್ನಿಕೆರೆ ಗ್ರಾಮದಲ್ಲಿ ವ್ಯಕ್ತಿಯನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು ಹಲ್ಲೆಗೊಳಗಾದ ವ್ಯಕ್ತಿ ತೀವ್ರಗಾಯಗೊಂಡಿದ್ದು ಆತನನ್ನ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ. 

ಶಿವಮೊಗ್ಗದ ಬನ್ನಿಕೆರೆಯಲ್ಲಿ ಹರೀಶ್ ಎಂಬಾತನಿಗೆ ಶಿವನಾಯ್ಕ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಮಚ್ಚೇಟಿನ ಬಗ್ಗೆ ಕಾರಣ ತಿಳಿದು ಬರಬೇಕಿದೆ. 

ಆದರೆ ಸ್ಥಳೀಯ ಮೂಲಗಳ ಪ್ರಕಾರ ಶಿವನಾಯ್ಕನ ಪತ್ನಿ ಜೊತೆ ಹರೀಶ್ ಗೆ ಅನೈತಿಕ ಸಂಬಂಧದ  ಹಿನ್ನಲೆಯಲ್ಲಿ ಈ ಕೃತ್ಯ ನಡೆದಿರುವ ಶಂಕೆ ಕೇಳಿ ಬರುತ್ತಿದೆ. ಹರೀಶ್  ಗೆ 38-40 ಇರಬಹುದು ಎಂದು ಹೇಳಲಾಗುತ್ತಿದೆ. ಇಂದು ಬೆಳಿಗ್ಗೆ ಹರೀಶ್ ಶಿವನಾಯ್ಕನ ಪತ್ನಿ ಜೊತೆ ಕಂಡ ಬಂದ ಹಿನ್ನಲೆಯಲ್ಲಿ ಶಿವನಾಯ್ಕ ಮಚ್ಚಿನೇಟು ಬೀಸಿರುವ ಶಂಕೆ ಸಹ ವ್ಯಕ್ತವಾಗಿದೆ.

ಸಧ್ಯಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿಯನ್ನ ಅವಲೋಕಿಸಿದ್ದಾರೆ.

Man attacked with deadly weapon in Bannikere village    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close