KFD: ಬಿಳ್ಳೋಡಿ ಗ್ರಾಮದಲ್ಲಿ ಐವರಿಗೆ ಪಾಸಿಟಿವ್‌- KFD: Five people test positive in Billodi village

SUDDILIVE || HOSANAGARA

KFD: ಬಿಳ್ಳೋಡಿ ಗ್ರಾಮದಲ್ಲಿ ಐವರಿಗೆ ಪಾಸಿಟಿವ್‌- KFD: Five people test positive in Billodi village    

KFD, Hosanagara

ಮಂಗನ ಕಾಯಿಲೆ (ಕೆಎಫ್‌ಡಿ) ಈ ಬಾರಿ ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗುವ ಮನ್ಸೂಚನೆ ನೀಡಿದೆ. ಕಳೆದ ವಾರ ಹೊಸನಗರ ತಾಲ್ಲೂಕಿನ ಬಿಳ್ಳೋಡಿ ಗ್ರಾಮದಲ್ಲಿ 55 ವರ್ಷದ ಮಹಿಳೆಯಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಅದೇ ಊರಿನ ಮತ್ತಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇನ್ನೂ ನಾಲ್ವರಿಗೆ ಪಾಸಿಟಿವ್‌ ಬಂದಿದೆ. 


ಬಿಳ್ಳೋಡಿ ಗ್ರಾಮದಲ್ಲಿ ಪಾಸಿಟಿವ್‌ ಬಂದಿರುವ ಐವರಲ್ಲಿ ನಾಲ್ವರು ಮಹಿಳೆಯರು, ಓರ್ವ ಪುರುಷ ಇದ್ದು ಎಲ್ಲರೂ ಆರೋಗ್ಯವಾಗಿದ್ದಾರೆ. ಜನವರಿ ಆರಂಭದಲ್ಲಿ ಹೆಚ್ಚಿನ ಪಾಸಿಟಿವ್‌ ಪ್ರಕರಣಗಳು ಕಂಡುಬರುತ್ತಿದ್ದವು. ಈ ಬಾರಿ ನವೆಂಬರ್‌ನಿಂದಲೇ ಸರ್ವೇಕ್ಷಣೆ ಆರಂಭಿಸಿರುವುದರಿಂದ ಆರೋಗ್ಯ ಇಲಾಖೆ ನಿರೀಕ್ಷೆ ಮಾಡದ ರೀತಿಯಲ್ಲಿ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದೆ. ಮಂಗನ ಕಾಯಿಲೆಗೆ ಲಸಿಕೆ ನಿಲ್ಲಿಸಿ ಮೂರು ವರ್ಷ ಕಳೆದಿದ್ದು ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಎಷ್ಟೋ ಕಡೆ ಉಣುಗು, ಸತ್ತ ಮಂಗಗಳಲ್ಲಿ ಪಾಸಿಟಿವ್‌ ಕಂಡುಬರದೇ ಇದ್ದರೂ ಮನುಷ್ಯರಿಗೆ ಪಾಸಿಟಿವ್‌ ಬಂದಿದೆ.


ಜಿಲ್ಲೆಯಾದ್ಯಂತ ಹಾಗೂ ಮಲೆನಾಡು ಪ್ರದೇಶಗಳಿಗೆ ಈಗ ಅಡಕೆ ಕೊಯ್ಲು ಆರಂಭವಾಗಿದ್ದು ಚಟುವಟಿಕೆ ಗರಿಗೆದರಿದೆ. ಬಿಳ್ಳೋಡಿ ಗ್ರಾಮದಲ್ಲಿ ಪಾಸಿಟಿವ್‌ ಬಂದಿದರುವ ಐವರಲ್ಲಿ ನಾಲ್ವರು ಅಡಕೆ ತೋಟ ಹಾಗೂ ಕಾಡಿನ ಸಂಪರ್ಕ ಹೊಂದಿದವರೆ. ಕಳೆದ ಅವಧಿಯಲ್ಲೂ ಕೂಡ ಅಡಕೆ ತೋಟದ ಕೆಲಸಕ್ಕೆ ಹೋದವರಿಗೆ ಪಾಸಿಟಿವ್‌ ಬಂದಿತ್ತು. ಕಾಡಂಚಿನ ತೋಟಗಳಲ್ಲಿ, ಕಾಡಿನ ಸಂಪರ್ಕ ಹೊಂದಿರುವ ಕೃಷಿಕುಟುಂಬಗಳಿಗೆ ಸೋಂಕಿತ ಉಣುಗು ಕಚ್ಚಿ ವೈರಸ್‌ ಹರಡುತ್ತಿದೆ. ಕಳೆದ ಅವಧಿಯಲ್ಲಿ ಇಬ್ಬರೂ ಮೃತಪಟ್ಟಿದ್ದರು. ಈ ಬಾರಿ ಅವಧಿಗೆ ಮುನ್ನವೇ ಕೆಎಫ್‌ಡಿ ಭೀತಿ ಹುಟ್ಟಿಸಿದೆ.

ಉಣುಗುಗಳ ಶಿಪ್ರ ಬೆಳವಣಿಗೆ

ನವೆಂಬರ್‌ ತಿಂಗಳನಿಂದಲೇ ಉಣುಗುಗಳ ಸಂಗ್ರಹ ಮಾಡುತ್ತಿರುವ ಆರೋಗ್ಯ ಇಲಾಖೆಗೆ ಆಶ್ವರ್ಯಕರ ಬೆಳವಣಿಗೆ ಕಂಡುಬಂದಿದೆ. ಉಣುಗುಗಳು ನಾಲ್ಕ ಹಂತಗಳಲ್ಲಿ ಅಂದರೆ ಮೊಟ್ಟೆ, ಲಾರ್ವಾ, ನಿಂಪ್‌, ಪ್ರೌಢಾವಸ್ಥೆಯಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ 

ಜನವರಿ, ಫೆಬ್ರವರಿ ತಿಂಗಳಲ್ಲಿ ನಿಂಪ್‌ ಹಂತದಲ್ಲಿ ಕಾಣಸಿಗುತ್ತಿದ್ದ ಉಣುಗುಗಳು ನವೆಂಬರ್‌, ಡಿಸೆಂಬರ್‌ ತಿಂಗಳಲ್ಲೇ ಯೌವಾನಾವಸ್ಥೆ ತಲುಪಿದೆ. ರಕ್ತ ಹೀರಿ ಬದುಕುವ ಈ ಜೀವಿಗಳಿಗೆ ಉತ್ತಮ ಆಹಾರ ಸಿಕ್ಕರೆ ಬೇಗನೆ ಬೆಳವಣಿಗೆ ಹೊಂದುತ್ತದೆ. ಹಿಂದಿನ ಅವಧಿಗೆ ಹೋಲಿಸಿದರೆ ಈ ಬಾರಿ ಬೇಗನೆ ವೈರಸ್‌ ಹರಡುಬಹುದು. ಜೂನ್‌ಗೆ ಮೊದಲೇ ಅಂತ್ಯವಾಗುವ ನಿರೀಕ್ಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉಣುಗುಗಳು ಲಾರ್ವಾ ಹಂತದಲ್ಲಿವೆ.

ಮಂಗಗಳ ಸಾವು ಹೆಚ್ಚಳ

ಜಿಲ್ಲೆಯಲ್ಲಿ ನವೆಂಬರ್‌ ತಿಂಗಳಲ್ಲಿ 9, ಡಿಸೆಂಬರ್‌  ತಿಂಗಳಲ್ಲಿ ಮೇ 11ರವರೆಗೆ 19 ಮಂಗಗಳು ಸಾವಿಗೀಡಾಗಿದ್ದವು. ಡಿಸೆಂಬರ್‌ ಸಾವಿಗೀಡಾಗಿರುವ 19 ಮಂಗಗಳಲ್ಲಿ 6ರಲ್ಲಿ ಮಾತ್ರ ಕಳೇಬರದ ಸ್ಯಾಂಪಲ್‌ ಪಡೆಯಲು ಸಾಧ್ಯವಾಗಿದೆ. ಅದನ್ನು ಪುಣೆಗೆ ಕಳುಹಿಸಲಾಗಿದ್ದು ಪರೀಕ್ಷಾ ವರದಿ ಬರಬೇಕಿದೆ.  

ಅದೇ ರೀತಿ ನವೆಂಬರ್‌ ತಿಂಗಳಲ್ಲಿ ಉಣುಗುಗಳ 92 ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು ಯಾವುದೇ ಪಾಸಿಟಿವ್‌ ಬಂದಿಲ್ಲ. ಡಿಸೆಂಬರ್‌ ತಿಂಗಳಲ್ಲಿ ಮೇ 11ರವರೆಗೆ 76 ಮಾದರಿ ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿದೆ. ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಚಿಕ್ಕಮಗಳೂರಿನಲ್ಲೂ ಮೊದಲ ಪ್ರಕರಣ ಪತ್ತೆ

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಕೊಪ್ಪ ತಾಲ್ಲೂಕಿನ ಕಮ್ಮರಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ಬಂದಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಮೊದಲ ಪ್ರಕರಣವಾಗಿದೆ. ಪಾಸಿಟಿವ್‌ ಬರುತ್ತಿದ್ದಂತೆ ಆರೋಗ್ಯ ಇಲಾಖೆ ಸರ್ವೇಕ್ಷಣೆ ಹೆಚ್ಚಿಸಿದೆ.

KFD: Five people test positive in Billodi village

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close