ಅಮ್ಮ ಮಗಳು ಎಂಗೇಜ್ ಮೆಂಟ್ ಗೆ ಹೋದರು ನಾಪತ್ತೆ, ಮತ್ತೊಂದೆಡೆ ಅಸ್ಸಾಂ ಮಹಿಳೆ ಮಿಸ್ಸಿಂಗ್-Mother and daughter go missing after going to engagement, on the other hand, Assam woman goes missing

 SUDDILIVE || SHIVAMOGGA|| BHADRAVATHI

ಅಮ್ಮ ಮಗಳು ಎಂಗೇಜ್ ಮೆಂಟ್ ಗೆ ಹೋದರು ನಾಪತ್ತೆ, ಮತ್ತೊಂದೆಡೆ ಅಸ್ಸಾಂ ಮಹಿಳೆ ಮಿಸ್ಸಿಂಗ್-Mother and daughter go missing after going to engagement, on the other hand, Assam woman goes missing    

Missing, assam


ಶಿವಮೊಗ್ಗ ಗ್ರಾಮಾಂತರ ಭಾಗದಿಂದ ಅಮ್ಮ‌ಮತ್ತು ಮಗಳು ಕಳೆದ 20 ದಿನಗಳ ಹಿಂದೆ ಮನೆ ಬಿಟ್ಟವರು ವಾಪಾಸಾಗಿಲ್ಲ ಎಂದು ದೂರು ದಾಖಲಾದರೆ, ಭದ್ರಾವತಿಯಲ್ಲಿ ಪತ್ನಿ ಮಿಸ್ಸಿಂಗ್ ಎಂದು ಪತಿ ಓಲ್ಡ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ, ಚಿಲಕಾದ್ರಿ ವಾಸಿ ಅವಿನಾಶ್ ಎಂಬುವವರ ಪತ್ನಿ 32 ವರ್ಷದ ವೀಣಾ ಎಂಬುವವರು ತನ್ನ 7 ವರ್ಷದ ಮಗಳು ಚೈತನ್ಯಳನ್ನು ಕರೆದುಕೊಂಡು ಡಿ. 03 ರಂದು ಮನೆಯಿಂದ ಎಂಗೆಜ್‌ಮೆಂಟ್‌ಗೆ ಹೋದವರು ಈವರೆಗೆ ಮನೆಗೆ ವಾಪಾಸ್ಸಾಗಿರುವುದಿಲ್ಲ. 

ವೀಣಾರ ಚಹರೆ; 5 ಅಡಿ ಎತ್ತರ, ದುಂಡುಮುಖ, ಬಿಳಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಎಡಕಣ್ಣಿನ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಆಕಾಶ್ ನೀಲಿ ಬಣ್ಣದ ಡ್ರೆಸ್ ಧರಿಸಿರುತ್ತರೆ. ಕನ್ನಡ ಭಾಷೆ ಮಾತನಾಡುತ್ತಾರೆ.

ಚೈತನ್ಯಾಳ ಚಹರೆ: 3.5 ಅಡಿ ಎತ್ತರ, ಕೋಲುಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಫ್ರಾಕ್ ಧರಿಸಿರುತ್ತಾರೆ.]

ಈ ತಾಯಿ-ಮಗಳ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸುವುದು.


ಸಮೀರುನ್ನೀಸಾ ಮಿಸ್ಸಿಂಗ್ 


 ಭದ್ರಾವತಿ ಹಳೆಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ಅಮೀರ್‌ಜಾನ್ ಕಾಲೋನಿ ಹೊಳೆಹೊನ್ನರು ರಸ್ತೆಯಲ್ಲಿರುವ ಹೈದರ್ ಆಲಿ ಮನೆಯ ಆಲೆಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀರುನ್ನೀಸಾ ಕೋಂ ಅಹದ್ ಆಲಿ ಎಂಬುವವರು ಡಿ. 16 ರಂದು ಹೊರಗಡೆ ಹೋದವರು ಈತನಕ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ 4.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಡ ಮೊಣಕೈ ಹತ್ತಿರ ಗೋಲಿ ಗಾತ್ರದ ಗಂಟು ಇದೆ. ಉರ್ದು, ಹಿಂದಿ, ಅಸ್ಸಾಂ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.

ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಭದ್ರಾವತಿ ಹಳೆಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9620348689 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Mother and daughter go missing after going to engagement, on the other hand, Assam woman goes missing

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close