ಜಯನಗರ, ವೆಂಕಟೇಶ ನಗರ, ನವುಲೆ, ಕೋಟೆ ಆಂಜನೇ ಸ್ವಾಮಿ ದೇವಸ್ಥಾನದಲ್ಲಿ ಮುಕ್ಕೋಟಿ ಏಕಾದಶಿ-Mukkoti Ekadashi at Jayanagar, Venkateswara Nagar, Navule, Kote Anjana Swamy Temple

 SUDDILIVE || SHIVAMOGGA

ಜಯನಗರ, ವೆಂಕಟೇಶ ನಗರ, ನವುಲೆ, ಕೋಟೆ ಆಂಜನೇ ಸ್ವಾಮಿ ದೇವಸ್ಥಾನದಲ್ಲಿ ಮುಕ್ಕೋಟಿ ಏಕಾದಶಿ-Mukkoti Ekadashi at Jayanagar, Venkateswara Nagar, Navule, Kote Anjana Swamy Temple    

Mukkoti, Ekadashi

ಪುಷ್ಯ ಮಾಸದ 11 ನೇ ದಿನವೇ ವೈಕುಂಠ ಏಕಾದಶಿ ಅಥವ ಮುಕ್ಕೋಟಿ ಏಕಾದಶಿ. ಈ ದಿನ 33 ಕೋಟಿ ದೇವತೆಗಳು ಬಂದು ತಿರುಪತಿಯ ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡುತ್ತಾರೆ ಎಂಬುದು ಹಿಂದೂ ಧರ್ಮದಲ್ಲಿ ನಂಬಿಕೆಯಿದೆ. ಹಾಗಾಗಿ ಈ ದಿನ ಹಿಂದೂಗಳಿಗೆ ಶ್ರೇಷ್ಠವಾದ ದಿನ ಎನಿಸಿಕೊಂಡಿದೆ.

ಮುಕ್ಕೋಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಡಿ.29 ರಂದು ಬೆಳಗ್ಗಿನ ಜಾವ 3-29 ಕ್ಕೆ ಆರಂಭವಾದರೆ ಡಿ.30 ರಂದು ರಾತ್ರಿ 1-17 ರವರೆಗೆ  ತಿಥಿ ಮುಕ್ತಾಯವಾಗುತ್ತದೆ. ಈ ಹಿನ್ನಲೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಜಯನಗರದ ಸೀತಾರಾಮ ಕಲ್ಯಾಣ ಮಂದಿರ, ಗೌಡಸಾರಸ್ವತ ಕಲ್ಯಾಣ ಮಂದಿರದ ವೆಂಟಕೇಟಶ್ವರ ದೇವಸ್ಥಾನ, ನವುಲೆ ವೆಂಕಟೇಶ್ವರ, ವೆಂಕಟೇಶ ನಗರದ ವೆಂಕಟರಮಣ ದೇವಸ್ಥಾನ ಹೀಗೆ ನಗರದ ವೈಷ್ಣವ ಹಾಗೂ ಶ್ರೀ ವೈಷ್ಣವ ಸಂಪ್ರದಾಯವನ್ನ ಪಾಲಿಸುವ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ದಿವಸ ದೇವರಿಗೆ ವಿಶೇಷ ಪೂಜೆ ನಡೆಯಲಿದೆ.

ಮುರಾಸುರನನ್ನ ಸೋಲಿಸಿ ವೈಕುಂಠದ ದ್ವಾರಗಳನ್ನ ವಿಷ್ಣು ದೇವನು ತೆಗೆಯುವುದೇ ಈ ದಿನ ವಿಶೇಷವಾಗಿದೆ. ದೂರ್ವಾಸ ಮುನಿ ಮತ್ತು ಅಂಬರೀಷನ ಕಥೆಗಳನ್ನ ಹಿಂದೂ ಧರ್ಮದಲ್ಲಿ ಹೇಳುತ್ತದೆ. ಇಂದು ವೈಕುಂಠದ ಬಾಗಿಲುಗಳನ್ನ ತೆಗೆಯುತ್ತವೆ ಎಂಬ ನಂಬಿಕೆಯಿದೆ. 

ಜಯನಗರದ ರಾಮಮಂದಿರದಲ್ಲಿ ವಿಷ್ಣು ದೇವನು ಶೇಷಶಯನನಾಗಿರುವ ಅಲಂಕಾರ ಒಂದು ಕಡೆ ಮಾಡಲಾಗಿದೆ. ಮತ್ತೊಂದೊಡೆ ಮೂಲರಾಮನಿಗೆ ಪಟ್ಟಾಭಿರಾಮನ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದಲೇ ಭಜನೆ, ಮೆರವಣಿಗೆ, ಕಾರ್ಯಕ್ರಮಗಳು ಜರುಗಿದೆ. 

Mukkoti Ekadashi at Jayanagar, Venkateswara Nagar, Navule, Kote Anjana Swamy Temple

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close