ಈ ಸಂತ್ರಸ್ತೆಯ ವಿಷಯದಲ್ಲಿ ಕಾನೂನು ಮತ್ತು ಆಯೋಗ ಎರಡೂ ಕಣ್ಣುಮುಚ್ಚಿ ಕುಳಿತುಕೊಂಡಿದೆಯಾ?Have both the law and the commission turned a blind eye to this victim's case?

 SUDDILIVE || BHADRAVATHI

ಈ ಸಂತ್ರಸ್ತೆಯ ವಿಷಯದಲ್ಲಿ ಕಾನೂನು ಮತ್ತು ಆಯೋಗ ಎರಡೂ ಕಣ್ಣುಮುಚ್ಚಿ ಕುಳಿತುಕೊಂಡಿದೆಯಾ?Have both the law and the commission turned a blind eye to this victim's case?

Law, commission


ಭದ್ರಾವತಿ ತಾಲೂಕು ಬಿಆರ್ ಪಿಯ ಶಾಂತಿನಗರದಲ್ಲಿರುವ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಮೂವರ ವಿರುದ್ಧ ಜಾತಿ ನಿಂದನೆ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿ 8 ದಿನಗಳು ಕಳೆದರೂ ಸಂತ್ರಸ್ತೆಯ ನೆರವಿಗೆ ಕಾನೂನು ದಾವಿಸದೆ ಇರುವುದು ತಿಳಿದುಬಂದಿದೆ.

ಕಾಲೇಜಿನ ಪ್ರಾಂಶುಪಾಲರು ಒಬ್ಬರು ಅತಿಥಿ ಉಪನ್ಯಾಸಕಿ ಒಬ್ಬರಿಗೆ ಕಾರಿನಲ್ಲಿ ಡ್ರಾಪ್ ಮಾಡುವ ವೇಳೆ ಲೈಂಗಿಕ ದೌರ್ಜನ್ಯ ನೀಡಿರುವ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿ.22 ರಂದು ದೂರು ದಾಖಲಾಗಿದ್ದರೂ ಮಹಿಳ ಆಯೋಗವಾಗಲಿ, ಕಾನೂನಾಗಲಿ ಸಂತ್ರಸ್ತೆಯ ನೆರವಿಗೆ ಬಾರದಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆ ಅಕ್ಷರಶಃ ಕಣ್ಣೀರು ಹಾಕಿದ್ದರೂ ಇತರೆ ಪ್ರಕರಣದಲ್ಲಿ ಆರಂಭದಲ್ಲಿ ಏನು ಆಗಬೇಕು ಅದು ನಡೆಯುತ್ತಿಲ್ಲವೆಂಬುದು ಸಂತ್ರಸ್ತೆಯ ಆರೋಪವಾಗಿದೆ. 


ಭದ್ರಾವತಿಯ ಬಿಆರ್ ಪ್ರಾಜೆಕ್ಟ್ ನ ಶಾಂತಿನಗರದಲ್ಲಿರುವ ಇರುವ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉನ್ಯಾಸಕರಾಗಿದ್ದ 40 ವರ್ಷದ ಮಹಿಳೆ ಶಿವಮೊಗ್ಗದಿಂದ ಓಡಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲರು ಕಾರಿನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನೀಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ನಿಮ್ಮ ಜಾತಿಯವರು ಲೈಂಗಿಕ ಕ್ರಿಯೆಗೆ ಸಹಕರಿಸುವುದಾಗಿ ಮಹಿಳೆಗೆ ಪ್ರಾಂಶುಪಾಲರೆ ಪ್ರಚೋದಿಸಿದ್ದಾರೆ ಎಂದು ದೂರುದಾಖಲಾಗಿದೆ. 

ಶ್ರೀಪಾದ ಹೆಗ್ಡೆ, ಮಂಗಳ ವಸುಂಧರ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಡಿ.19 ರಂದು ಮಂಜುಳ ಮತ್ತು ವಸುಂಧರರವರು ಡ್ಯಾನ್ಸ್ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಬೈಯುವಾಗ ಪ್ರಶ್ನಿಸಿದ ಅತಿಥಿ ಉಪನ್ಯಾಸಕಿಗೆ ಥಳಿಸಿದ್ದಾರೆ. ಅಲ್ಲೇ ಇದ್ದ ಪ್ರಾಂಶುಪಾಲ ಶ್ರೀಪಾದ ಹೆಗ್ಡೆ ಜಾತಿ ಬುದ್ದಿ ಬಿಡಬೇಕು ಎಂದು ಹೇಳಿ ನಿಂದಿಸಿರುವ ಬಗ್ಗೆ ದೂರಲಾಗಿದೆ. 

ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿದ ಸಸಂತ್ರಸ್ತೆ ಲೈಂಗಿಕ ದೌರ್ಜನ್ಯವಾಗಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ದೂರು ದಾಖಲಾದವರ ವಿರುದ್ಧ ಕಾನೂನು ಕ್ರಮದ ಅಡಿ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಸಂತ್ರಸ್ತೆಗೆ ಕಾಲೇಜಿನಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ. 

ಇಂತಹ ಆರೋಪ ಹೊತ್ತುಕೊಂಡು ಆ ಮಹಿಳೆ ಈಗ ಕೆಲಸಕೊಂಡಿದ್ದಾರೆ. ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿಯ ಮೌನ ಸಹ ಹೆಚ್ಚಿನ ಚರ್ಚೆಗೆ ಎಡವು ಮಾಡಿಕೊಟ್ಟಿದೆ. ಕೆಲವೊಂದು ಜಾತಿ ನಿಂದನೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಲು ಕಾನೂನು 150 ಕಿಮಿ ಸ್ಪೀಡ್ ನಲ್ಲಿ ಬರುತ್ತದೆ. ಆದರೆ ಈ ಮಹಿಳೆಗೆ ಮಹಿಳಾ ಆಯೋಗವಾಗಲಿ, ಕಾನೂನು ಸಹಾಯಕ್ಕೆ ಬಾರದೆ ಇರುವುದು ಹಲವು ಕೌತುಕವನ್ನ ಹುಟ್ಟಿಸುತ್ತಿದೆ. 

Have both the law and the commission turned a blind eye to this victim's case?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close