ಆಗುಂಬೆ ಪೊಲೀಸ್ ಠಾಣೆ ವತಿಯಿಂದ ತೆರೆದ ಬಾಗಿಲು ಕಾರ್ಯಕ್ರಮ- Open Door Program by Agumbe Police Station

 SUDDILIVE || HONNETHAL

ಆಗುಂಬೆ ಪೊಲೀಸ್ ಠಾಣೆ ವತಿಯಿಂದ ತೆರೆದ ಬಾಗಿಲು ಕಾರ್ಯಕ್ರಮ-  Open Door Program by Agumbe Police Station   



ಈ ದಿನ ಹೊನ್ನೇತಾಳು ಶಾಲೆ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಠಾಣೆಯ ಕಾರ್ಯ ವೈಖರಿ, ಪೋಲೀಸರ ದೈನಂದಿನ ಕರ್ತವ್ಯಗಳು, ಪೊಲೀಸ್ ಠಾಣೆಯಲ್ಲಿ ಬಳಸುವ ಆಯುಧಗಳು, ಮಕ್ಕಳ ಹಕ್ಕುಗಳು, ಮಕ್ಕಳಿಗೆ ಇರುವ ಕಾನೂನುಗಳು, ಇತರೆ ಕಾನೂನಿನ ಅರಿವು ಮೂಡಿಸಲಾಯಿತು.ಪಿಎಸ್ಐ ಶಿವನ ಗೌಡ ಪಟೇಲ್  ಇವರು ಮಕ್ಕಳಿಗೆ ಕೂಲಂಕುಶವಾಗಿ ಠಾಣೆಯ ಕುರಿತು ಮಾಹಿತಿ ನೀಡಿದರು.  2008 ರಲ್ಲಿ  ತೀರ್ಥಹಳ್ಳಿ ಪೊಲೀಸ್ ಠಾಣೆಯ out post ಆಗಿ ಆಗುಂಬೆ ಠಾಣೆ ನಿರ್ಮಾಣವಾಯಿತು.PSI,  ಠಾಣಾಧಿಕಾರಿಗಳು ಸೇರಿದಂತೆ 30 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. 

PSI ಕೊಠಡಿ, ರಿಸೆಪ್ಶನ್, ರೆಕಾರ್ಡ್ ರೂಮ್, ಕಂಪ್ಯೂಟರ್ ಕೊಠಡಿ, ಮಕ್ಕಳ ಸ್ನೇಹಿ ಕೊಠಡಿ, ಮಹಿಳಾ ಬಂದಿಖಾನೆ, ಪುರುಷರ ಬಂದಿಖಾನೆ, ದಾಖಲೆ ಮತ್ತು ಕಡತೆಗಳ ಕೊಠಡಿ, ಶ್ರಸ್ತ್ರ ಗಾರ ಕೊಠಡಿ, ಹೀಗೆ ವಿವಿಧ ಕೊಠಡಿಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅಪರಾದಿಗಳ ದಾಖಲೆ ಸಂಗ್ರಹ, FIR, ಅಪರಾಧಿಗಳ ತೀವ್ರತೆ ಆಧರಿಸಿ ಕ್ರಮಜರುಗಿಸುವುದರ ಕುರಿತು ಮತ್ತು ಶ್ರಸ್ತ್ರಗಳ ಬಳಕೆ ಇವುಗಳ ಕುರಿತು ಮಾಹಿತಿ ನೀಡಿದರು. ಮನೆಯಲ್ಲಿರು ಶಸ್ತ್ರಾಸ್ತ್ರಗಳನ್ನು ಮಕ್ಕಳು ಬಳಸದಂತೆ ಎಚ್ಚರಿಕೆ ನೀಡಿದರು.  ಹಾಗೆ ಪೋಕ್ಸೋ ಕಾಯಿದೆ ಮತ್ತು ಮೊಬೈಲ್ ದುರ್ಬಳಕೆ, ರಸ್ತೆಯ ಸಂಚಾರಿ ನಿಯಮಗಳ ಕುರಿತು ಮಾಹಿತಿ ನೀಡಿದ್ದಲ್ಲದೆ, ಮಕ್ಕಳ ಪ್ರಶ್ನೆ ಗಳಿಗೆ ಸಮಂಜಸವಾದ ಉತ್ತರ ನೀಡುದರು. 

ಪೋಲಿಸ್ ಠಾಣೆ ಬಗ್ಗೆ ಮಕ್ಕಳಲಿದ್ದ ತಪ್ಪು ಕಲ್ಪನೆ ಗಳನ್ನು ದೂರ ಮಾಡಿ   ಮಕ್ಕಳಿಗೆ ಸಿಹಿ ನೀಡಿ ಕಳಿಸಿದರು. ಠಾಣೆಯ ಪಿಎಸ್ಐ  ಶಿವನ ಗೌಡ ಪಟೇಲ್ ಹಾಗು ಸಿಬ್ಬಂದಿ ವರ್ಗಕ್ಕೆ ಟೀಮ್ ಹೊನ್ನೆತಾಳ್  ವಂದನೆ ಗಳನ್ನ ತಿಳಿಸಿದೆ

Open Door Program by Agumbe Police Station

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close