ರಾಗಿಗುಡ್ಡಕ್ಕೆ KSRTC ಬಸ್ ನಗರ ಸಾರಿಗೆ ಬಿಡುವಂತೆ ಮನವಿ-Request to release KSRTC buses to Ragigudda for city transport

SUDDILIVE || SHIVAMOGGA

ರಾಗಿಗುಡ್ಡಕ್ಕೆ KSRTC ಬಸ್ ನಗರ ಸಾರಿಗೆ ಬಿಡುವಂತೆ  ಮನವಿ-Request to release KSRTC buses to Ragigudda for city transport    

City, bus

ಶಿವಮೊಗ್ಗ ನಗರದ ಶಾಂತಿನಗರ (ರಾಗಿಗುಡ್ಡ) ಪ್ರದೇಶಕ್ಕೆ ಹಾಗೂ ಶಿವಮೊಗ್ಗ ನಗರದಲ್ಲಿ ಬಡವರ ನಿವಾಸ ಪ್ರದೇಶಗಳಿಗೆ ಸರ್ಕಾರಿ ನಗರ ಸಾರಿಗೆ (KSRTC ಸಿಟಿ ಬಸ್) ಬಸ್ ಸೇವೆ ಒದಗಿಸುವಂತೆ ಕೋರಿ  

ಇಂದು AIMIM ಶಿವಮೊಗ್ಗ ನಗರ ಘಟಕದ ವತಿಯಿಂದ ಜಿಲ್ಲಾಧಿಕಾರಿ ಶ್ರೀ ಗುರುದತ್ತ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಖಾಸಗಿ ಬಸ್‌ಗಳು ತಮ್ಮ ಇಷ್ಟಕ್ಕೆ ಸೇವೆ ನಿಲ್ಲಿಸುತ್ತಿದ್ದು, ಬಡ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.  

DC ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ತಕ್ಷಣವೇ KSRTC ಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದಾರೆ.ಮನವಿ ಸಲ್ಲಿಕೆಯಲ್ಲಿ ಪಕ್ಷದ ನಗರ ಅಧ್ಯಕ್ಷ ಮೊಹಮ್ಮದ್ ವಸೀಕ್, ಜಿಲ್ಲಾ ಯುವ ಅಧ್ಯಕ್ಷ ಮೊಹಮ್ಮದ್ ರಫೀ, ಕಾರ್ಯಾಧ್ಯಕ್ಷ ಮುನವ್ವರ್ ಪಾಷಾ, ಕಾರ್ಯದರ್ಶಿ ಷಾಹಬಾಜ್ ಖಾನ್, ವಸೀಂ, ಶಬ್ಬೀರ್ ಅಹ್ಮದ್, ಅಬ್ದುಲ್ ರಜಾಕ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಬಡವರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತೇವೆ!  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close