OT ರಸ್ತೆ ಹಾಗೂ KR Puram ರಸ್ತೆಯಲ್ಲಿ ಆಪರೇಷನ್ ಫುಟ್ ಪಾತ್- Operation Footpath on OT Road and KR Puram Road

SUDDILIVE || SHIVAMOGGA

OT ರಸ್ತೆ ಹಾಗೂ KR  Puram ರಸ್ತೆಯಲ್ಲಿ ಆಪರೇಷನ್ ಫುಟ್ ಪಾತ್-   Operation Footpath on OT Road and KR Puram Road 

Operation, Footpath


ಈ‌ ದಿನ ಶಿವಮೊಗ್ಗ ನಗರದ OT ರಸ್ತೆ ಮತ್ತು K.R ಪುರಂ ರಸ್ತೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳ & ಸಿಬ್ಬಂದಿಯವರು ಸಹಕಾರದೊಂದಿಗೆ ಸಂಚಾರಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದಲ್ಲಿ ಪುಟ್ ಪಾತ್ ತೆರವು ಕಾರ್ಯಚರಣೆ ನಡೆದಿದೆ.  

ಪುಟ್ ಪಾತ್ ನಲ್ಲಿ ಇಟ್ಟಿದ ಅಂಗಡಿಯ ಬೋರ್ಡ್ ಮತ್ತು ಇತರೆ ವಸ್ತುಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ಪುಟ್ ಪಾತ್ ಮತ್ತು ರಸ್ತೆಯ ಮೇಲೆ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂದು ಕರ್ನಾಟಕ ಪೊಲೀಸ್ ಆಕ್ಟ್ ಅಡಿಯಲ್ಲಿ ನೋಟೀಸ್ ಜಾರಿ ಮಾಡಲಾಯಿತು.


ಖುದ್ದು ಸಿಪಿಐ ದೇವರಾಜ್ ಅವರೇ ಮೈಕ್ ಅನೌನ್ಸ್ ಮೆಂಟ್ ಮೂಲಕ ಜನರಿಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.  ಮತ್ತು ಸದರಿ ರಸ್ತೆಯಲ್ಲಿ ದಿನ ಬಿಟ್ಟು ದಿನ ಪಾರ್ಕಿಂಗ್ ವ್ಯವಸ್ಥೆ ( Alternate Parking ) ಜಾರಿಯಲ್ಲಿದ್ದು ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಯಿತು.

ಈ ವೇಳೆ ಪಿಎಸ್ಐ ಭಾರತಿ, ಸ್ವಪ್ನ ಮೊದಲಾದ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 

Operation Footpath on OT Road and KR Puram Road 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close