ಕೋಣಂದೂರಿನಲ್ಲಿ ಬೈಕ್ ಅಪಘಾತ - ರಿಪ್ಪನ್ ಪೇಟೆ ಯುವಕ ಸಾವು , ಇನ್ನೋರ್ವ ಗಂಭೀರ-Bike accident in Konandur - Riponpet youth dies, another seriously injured

SUDDILIVE || SHIVAMOGGA

ಕೋಣಂದೂರಿನಲ್ಲಿ ಬೈಕ್ ಅಪಘಾತ - ರಿಪ್ಪನ್ ಪೇಟೆ ಯುವಕ ಸಾವು , ಇನ್ನೋರ್ವ ಗಂಭೀರ-Bike accident in Konandur - Riponpet youth dies, another seriously injured    

Bike, accident


ತೀರ್ಥಹಳ್ಳಿಯ ಎಳ್ಳಮಾವಸೆ ಜಾತ್ರೆ ಮುಗಿಸಿಕೊಂಡು ಹಿಂದಿರುಗುವಾಗ ಕೋಣಂದೂರಿನ ಬಳಿಯಲ್ಲಿ ಬೈಕ್ ಅಪಘಾತವಾಗಿ ರಿಪ್ಪನ್ ಪೇಟೆ ಸಮೀಪದ ಬಿಳಕಿ ಗ್ರಾಮದ ಯುವಕನೊಬ್ಬ ಸಾವನ್ನಪ್ಪಿ ಇನ್ನೊಬ್ಬ ಯುವಕ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಬಿಳಿಕಿ ಗ್ರಾಮದ ಅವಿನಾಶ್ (25) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇವರು ಮೂಲತಃ ಶಿವಮೊಗ್ಗದ ತುಪ್ಪೂರು ಸಮೀಪದ ಸನ್ನಿವಾಸ ಗ್ರಾಮದ ಯೋಗೇಶ್ ಎಂಬುವವರ ಪುತ್ರನಾಗಿದ್ದು ಬಿಳಿಕಿ ಗ್ರಾಮದಲ್ಲಿ ತಮ್ಮ ದೊಡ್ಡಪನ ಮನೆಯಲ್ಲಿ ವಾಸವಿದ್ದು ರಿಪ್ಪನ್ ಪೇಟೆ ಕಾಲೇಜಿನಲ್ಲಿ ತನ್ನ ವ್ಯಾಸಾಂಗ ಪೂರ್ಣಗೊಳಿಸಿದ್ದನು.

ಇನ್ನೊಬ್ಬ ಬಿಳಿಕಿ ಗ್ರಾಮದ ಯುವಕ ನಿತ್ಯಾನಂದ ಎಂಬಾತನಿಗೆ ಗಂಭೀರ ಪೆಟ್ಟಾಗಿದ್ದು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನಲೆ : 

ತೀರ್ಥಹಳ್ಳಿಯ ಎಳ್ಳಮಾವಸೆ ಜಾತ್ರೆ ಮುಗಿಸಿಕೊಂಡು ಭಾನುವಾರ ತಡರಾತ್ರಿ ಹಿಂದಿರುಗುವಾಗ ಕೋಣಂದೂರಿನ ಎನ್ ಆರ್ ಎಸ್ ಶಾಲೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಅವಿನಾಶ್ ಮೃತಪಟ್ಟು ಬೈಕ್ ಸವಾರ ನಿತ್ಯಾನಂದ ಎಂಬಾತನಿಗೆ ಗಂಭೀರ ಗಾಯಗಳಾಗಿವೆ.

ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Bike accident in Konandur - Riponpet youth dies, another seriously injured

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close