ಡಿ.11 ರಂದು ಗ್ರಾಮಾಂತರ ಮತ್ತು ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ವ್ಯತ್ಯಯ- Power outage in rural areas and around Gandhi Bazaar on December 11

SUDDILIVE || SHIVAMOGGA

ಡಿ.11 ರಂದು ಗ್ರಾಮಾಂತರ ಮತ್ತು ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ವ್ಯತ್ಯಯ- Power outage in rural areas and around Gandhi Bazaar on December 11    

Power, Outage

ಡಿ.11 ರಂದು ಶಿವಮೊಗ್ಗದಲ್ಲಿ ಹಲವಾರು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.  ಗ್ರಾಮಾಂತರ ಭಾಗದಲ್ಲಿ ನಿರ್ವಾಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮತ್ತು ತ್ರೈಮಾಸಿಕ ನಿರ್ವಹಣೆಯಿಙದಾಗಿ ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ. 

ದಿನಾಂಕ 11.12.2025 ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಶಿವಮೊಗ್ಗ ತಾಲ್ಲೂಕಿನ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗ್ರಾಮಾಂತರ ಪ್ರದೇಶಗಳಾದ ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಅಗಸವಳ್ಳಿ, ಹೊಸೂರು, ಮತ್ತೂರು, ಲಕ್ಷ್ಮೀಪುರ, ಹೊನ್ನಾಪುರ, ಈಚಲವಾಡಿ, ಹಾಯ್‌ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿಕಾಲೋನಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಕೋರಿದೆ.

ಶಿವಮೊಗ್ಗ ನಗರ 110/11 ಕೆ.ವಿ. ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಡಿ. 11 ರಂದು ಬೆಳ್ಳಗ್ಗೆ 9:00 ರಿಂದ 06:00 ರವರೆಗೆ ಈ ವ್ಯಾಪ್ತಿಯ ಗಾಂಧಿಬಜಾರ್, ಓ ಟಿ ರಸ್ತೆ, ಎಲೆರೇವಣ್ಣ ಕೇರಿ, ಕುಂಬಾರಗುಂಡಿ, ತಿರುಪಳಯ್ಯನ ಕೇರಿ, ಸಿದ್ದಯ್ಯರಸ್ತೆ, ತಿಮ್ಮಪ್ಪನಕೊಪ್ಪಲು, ಎಂಕೆಕೆ ರಸ್ತೆ, ಉಪ್ಪಾರಕೇರಿ, ಕಸ್ತೂರಿಬಾ ರಸ್ತೆ, ಕೆಆರ್.ಪ್ಮರಂ, ಭರ್ಮಪ್ಪನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power outage in rural areas and around Gandhi Bazaar on December 11

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close