ಮೆಕ್ಕೆ ಜೋಳ ಮತ್ತು ಭತ್ತಕ್ಕೆ ಖರೀದಿ ಕೇಂದ್ರ ಆರಂಭ-ಕೃಷಿ ಸಮಾಜದ ನಗರದ ಮಹದೇವಪ್ಪ ಹೇಳಿಕೆ-Purchase center for maize and rice to be opened - statement by Nagar Mahadevappa of Krishi Samaj

 SUDDILIVE || SHIVAMOGGA

ಮೆಕ್ಕೆ ಜೋಳ ಮತ್ತು ಭತ್ತಕ್ಕೆ ಖರೀದಿ ಕೇಂದ್ರ ಆರಂಭ-ಕೃಷಿ ಸಮಾಜದ ನಗರದ ಮಹದೇವಪ್ಪ ಹೇಳಿಕೆ-Purchase center for maize and rice to be opened - statement by Nagar Mahadevappa of Krishi Samaj    

Purchase, center

ಕೃಷಿ ಸಮಾಜಕ್ಕೆ ಪ್ರತಿ ತಾಲೂಕಿನಲ್ಲೂ ಸಂಘಟನೆಯಿದೆ. ಜಂಟಿ ನಿರ್ದೇಶಕರು ಜಿಲ್ಲೆಯಲ್ಲಿ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಚುನಾವಣೆಯಾಗುತ್ತದೆ. ತಾಲೂಕಿನಿಂದ ಬರುವ ಎರಡು ಜನ ಸದಸ್ಯರು ಜಿಲ್ಲೆಗೆ ಬರ್ತಾರೆ ಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ ಎಂದು ಕೃಷಿ ಸಮಾಜದ ಹಾಗೂ ಮಾಜಿ ಶಾಸಕ ನಗರದ ಮಹಾದೇವಪ್ಪ ತಿಳಿಸಿದರು. 

ಕೃಷಿ ಸಮಾಜ ಪ್ರಗತಿಪರ ರೈತರನ್ನ ಗುರುತಿಸುವುದು. ರಾಜ್ಯ ವ್ಯಾಪಿ ಪ್ರವಾಸ ಮಾಡುವುದು, ಕೃಷಿಕರ ಸಮಸ್ಯೆ ಅರಿತು ಸರ್ಕಾರದ ಗಮನಕ್ಕೆ ತರುವುದು ಇದರ ಉದ್ದೇಶವಾಗಿದೆ.  ಕೃಷಿ ಸಮಾಜದಲ್ಲಿ ಸರ್ಕಾರದ ವತಿಯಿಂದ  ಆಯ್ಕೆಯಾಗುತ್ತಾರೆ. ಮಲೆನಾಡು ಶಿವಮೊಗ್ಗದಿಂದ ನಗರದ ಮಹಾದೇವಪ್ಪನವರನ್ನ ಆಯ್ಕೆ ಮಾಡಲಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಮಹದೇವಪ್ಪ ಶಿವಮೊಗ್ಗದಲ್ಲಿ ಗೊಬ್ಬರದ ಸಮಸ್ಯೆಯಾಗಿಲ್ಲ. ದ್ವಿದಳ ಬೆಳೆ ಸಂಪೂರ್ಣ ನಾಶವಾಗಿದೆ. ಹೆಸರು ಬೆಳೆಯಿಲ್ಲ. ಮೆಕ್ಕೆ ಜೋಳಕ್ಕೂ ಸಮಸ್ಯೆ ಉಂಟಾಗಿದೆ. 

ರೈತರ ಸಂಕಷ್ಟದಲ್ಲಿದ್ದು ಎಂಎಸ್ಪಿಗಿಂತ ಕಡಿಮೆ ದರಕ್ಕೆ ಜೋಳ ಮತ್ತು ಭತ್ತ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಲಾಗಿದೆ. ಇದಕ್ಕಾಗಿ ಮೆಕ್ಕೆ ಜೋಳ ಖರೀದಿ ಕೇಂದ್ರ ಅರಂಭವಾಗಿದೆ. ಜಿಲ್ಲೆಯಲ್ಲಿ 9 ಕೇಂದ್ರವನ್ನ ಆರಂಭವಾಗಿದೆ. ಕೇಂದ್ರ ಸರ್ಕಾರಕ್ಕೆ ಎಂಎಸ್ಪಿ ಬೆಲೆ ನಿಗದಿ ಮಾಡಬೇಕಿದೆ ಎಂದರು. 

ಭತ್ತಕ್ಕೆ 2300 ಜೋಳಕ್ಕೆ 2400 ಎಂಎಸ್ಪಿ ಬೆಲೆ ನಿಗದಿಪಡಿಸಲಾಗಿದೆ. ಭತ್ತ ಬೆಳೆಯುವ ಸ್ಥಿತಿಯಲ್ಲಿ ರೈತರಿಲ್ಲ. ಯಾವುದು ಲಾಭದಾಯಕವಿರುತ್ತದೆಯೋ ಅದನ್ನ ಮಾಡಲಾಗುತ್ತದೆ. ಕೃಷಿ ಸಮಾಜ ಕಟ್ಟಡ ಶಿವಮೊಗ್ಗದ ಕೃಷಿ ಇಲಾಖೆಯಲ್ಲಿದೆ. ಅಡಿಕೆ ರೋಗಕ್ಕೆ ಔಷಧಿಯಿಲ್ಲ. ಅಡಿಕೆಗೆ ಪರಿಹಾರ ನೀಡಬೇಕಿತ್ತು ಕೊಡಲಿಲ್ಲ. ಕೇಂದ್ರ ಸರ್ಕಾರ ಅಡಿಕೆ ಪರಿಹಾರಕ್ಕೆ ಸಂಶೋಧನಾ ಕೇಂದ್ರ ತೆರೆದು ಪರಿಹಾರ ನೀಡಬೇಕೆಂದರು. 

ಹವಮಾನ ಆಧಾರಿತ ಬೆಳೆ ವಿಮೆ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಮಳೆ ಮಾಪನ ಇಲ್ಲದಿರುವುದರಿಂದ ಹಣ ಸಿಗುತ್ತಿಲ್ಲ. ಡಿಸಿ ಇದನ್ನ ಬೇಗ ಸರಿಪಡಿಸಿ ವಿಮೆ ಹಣ ಅಡಿಕೆಗೆ ಹೆಚ್ಚು ಸಿಗುವಂತಾಗಬೇಕು ಎಂದರು. 

ಮಲೆನಾಡಿನಲ್ಲಿ ಮೆಕ್ಕೆಜೋಳವನ್ನ ಹೆಚ್ಚು ಬೆಳೆಯಲಾಗುತ್ತಿದೆ ಆದರೆ ಬೆಳೆಯಿಲ್ಲ. ಕೃಷಿ ಸಚಿವರು ಆವರ್ತನಿಧಿ  ನಿಗದಿ ಪಡಿಸಬೇಕು. ಕೇಂದ್ರ ಸರ್ಕಾರ ಗೊಬ್ಬರದಿಂದ ಎಲ್ಲಾ ಬೆಂಬಲ ಬೆಲೆಯಲ್ಲೂ ರಾಜಕಾರಣ ಮಾಡುತ್ತದೆ. ಖರೀದಿ ಕೇಂದ್ರದಲ್ಲಿ ಕೃಷಿ ಸಮಾಜದ ಸದಸ್ಯರು ನಿಂತು ಖರೀದಿ ಮಾಡುವಂತಾಗಬೇಕು ಎಂದರು.

Purchase center for maize and rice to be opened - statement by Nagar Mahadevappa of Krishi Samaj

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close