ಗಣೇಶೋತ್ಸವಕ್ಕೆ ನಿಯಮ :ಅಝಾನ್ ಗೆ ವಿನಾಯಿತಿ? ಸದನದಲ್ಲಿ ಡಿ.ಎಸ್.ಅರುಣ್ ಆಕ್ರೋಶ-Rules for Ganesh Chaturthi: Exemption for Azan? D.S. Arun's outcry in the House

SUDDILIVE || BELAGAVI

ಗಣೇಶೋತ್ಸವಕ್ಕೆ ನಿಯಮ :ಅಝಾನ್  ಗೆ ವಿನಾಯಿತಿ? ಸದನದಲ್ಲಿ ಡಿ.ಎಸ್.ಅರುಣ್ ಆಕ್ರೋಶ-Rules for Ganesh Chaturthi: Exemption for Azan? D.S. Arun's outcry in the House

Azan, exemption


ವಿಧಾನಪರಿಷತ್ ಅಧಿವೇಶನದಲ್ಲಿ ಮಾನ್ಯ ವಿಧಾನಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ಅಝಾನ್ ಸಮಯದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಮಸೀದಿಗಳಲ್ಲಿ ಡಿಸಿಬಲ್ ಮಿತಿಯನ್ನು ಮೀರಿ ಲೌಡ್‌ಸ್ಪೀಕರ್ ಬಳಕೆಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ಹಾಗೂ ಸರ್ಕಾರದ ಪಕ್ಷಪಾತಿ ನಿಲುವನ್ನು ತೀವ್ರವಾಗಿ ಖಂಡಿಸಿದರು.

Noise Pollution Rules ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಬೆಳಗ್ಗೆ 6ರಿಂದ ರಾತ್ರಿ 10ರೊಳಗೆ ಮಾತ್ರ ಶಬ್ದಕ್ಕೆ ಅವಕಾಶವಿದ್ದರೂ, ರಾಜ್ಯದಲ್ಲಿ ಈ ನಿಯಮಗಳನ್ನು ಸಮಾನವಾಗಿ ಜಾರಿಗೊಳಿಸಲಾಗುತ್ತಿಲ್ಲ ಎಂದು ಅವರು ಹೇಳಿದರು. ಗಣೇಶೋತ್ಸವದ ವೇಳೆ ಡಿಜೆ ನಿಷೇಧಿಸುವ ಸರ್ಕಾರ, ದಿನನಿತ್ಯ ನಡೆಯುವ ಅಝಾನ್ ವೇಳೆ ಶಬ್ದ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ದ್ವಂದ್ವ ನೀತಿಯಾಗಿದೆ ಎಂದು ಡಿ.ಎಸ್. ಅರುಣ್ ಆಕ್ಷೇಪ ವ್ಯಕ್ತಪಡಿಸಿದರು.

ಸಾರ್ವಜನಿಕರು ಭಯದಿಂದ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗುತ್ತಿಲ್ಲ ಎಂಬ ವಾಸ್ತವವನ್ನು ಉಲ್ಲೇಖಿಸಿದ ಅವರು, ಪರಿಸರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ಸ್ವಯಂಪ್ರೇರಿತವಾಗಿ ಶಬ್ದ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಬ್ದ ಮಾಲಿನ್ಯದಿಂದ ಮಕ್ಕಳು, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ಇತರೆ ಶಾಸಕರು  ಡಿ.ಎಸ್. ಅರುಣ್ ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲ ಧರ್ಮಗಳಿಗೆ ಸಮಾನವಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಆದರೆ ಸರ್ಕಾರದಿಂದ ಸ್ಪಷ್ಟ ಉತ್ತರ ಮತ್ತು ಕಠಿಣ ಕ್ರಮಗಳ ಭರವಸೆ ಸಿಗದಿರುವುದು, ಒಂದು ಸಮುದಾಯದ ಪರವಾಗಿ ಪಕ್ಷಪಾತ ತೋರುತ್ತಿರುವಂತೆ ಕಂಡುಬಂದಿದೆ ಎಂದು ಟೀಕಿಸಲಾಯಿತು

ಕಾನೂನು ಎಲ್ಲರಿಗೂ ಒಂದೇ ಆಗಬೇಕು, ಧರ್ಮದ ಹೆಸರಿನಲ್ಲಿ ಶಬ್ದ ಮಾಲಿನ್ಯಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬುದು ಸರ್ಕಾರ ಸ್ಪಷ್ಟಪಡಿಸಬೇಕೆಂದು ಡಿ.ಎಸ್. ಅರುಣ್ ಸರ್ಕಾರವನ್ನು ಆಗ್ರಹಿಸಿದರು

Rules for Ganesh Chaturthi: Exemption for Azan? D.S. Arun's outcry in the House


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close