ಮೆಗ್ಗಾನ್ ಆಸ್ಪತ್ರೆಯ ಸಮಗ್ರ ತನಿಖೆಗೆ ಎಸ್ ಡಿಪಿಐ ಆಗ್ರಹ-SDPI demands a comprehensive investigation into Meggan Hospital

 SUDDILIVE || SHIVAMOGGA

ಮೆಗ್ಗಾನ್ ಆಸ್ಪತ್ರೆಯ ಸಮಗ್ರ ತನಿಖೆಗೆ ಎಸ್ ಡಿಪಿಐ ಆಗ್ರಹ-SDPI demands a comprehensive investigation into Meggan Hospital    

SDPI, MEGGAN

ಜಿಲ್ಲಾ ಮೆಗ್ಗನ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಗರ್ಭಿಣಿ ಮಹಿಳೆಯರ ಸಾವು ಹಾಗೂ ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಎಸ್ ಡಿಪಿಐ ಸಂಘಟನೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

 ಜಿಲ್ಲಾ ಮೆಗ್ಗನ್ ಆಸ್ಪತ್ರೆಗೆ ಪ್ರತಿ ದಿನ ಸಾವಿರಾರು ಜನರು ಚಿಕಿತ್ಸೆಗಾಗಿ ಬರುತ್ತಾರೆ. ಆಸ್ಪತ್ರೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸವಲತ್ತುಗಳು ದೊರೆಯುತ್ತಿದೆ.  ಆದರೆ  ಸಮರ್ಪಕವಾದ ಸಂಪನ್ಮೂಲದ ಬಳಕೆಯ ಕೊರತೆ ಎದ್ದು ಕಾಣುತ್ತಿದೆ. ಇತ್ತೇಚಿಗೆ ಪ್ರತೀ ದಿನ ಒಂದಲ್ಲಾ ಒಂದು ರೀತಿ ಜಿಲ್ಲೆಯ ಮೆಗ್ಗನ್ ಆಸ್ಪತ್ರೆ ಮತ್ತು ಅಲ್ಲಿನ ವೈದ್ಯರು ಸುದ್ದಿಯಾಗುತ್ತಾ ಬರುತಿದ್ದಾರೆ. ನ.28 ರಂದು ಶ್ರೀಮತಿ. ನೂರ್ ಅಫ್‌ಶಾ ಎಂಬ ಗರ್ಭಿಣಿಯು ವೈದ್ಯರ ನಿರ್ಲಕ್ಷ್ಯ ದಿಂದ ಸಾವಿಗೀಡಾಗಿದ್ದಾರೆ. ನ.26 ರಂದು ಲೋಕಾಯುಕ್ತರು ಬೇಟಿ ನೀಡಿ ಪರಿಶೀಲನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಸಂಘಟನೆ ಬೇಸರ ವ್ಯಕ್ತಪಡಿಸಿದೆ.  

ಸಾರ್ವಜನಿಕರು ಹೆರಿಗೆ ವಿಭಾಗದಲ್ಲಿ ಹೆಣ್ಣು ಮಗು ಜನಿಸಿದರೆ ರೂ.1000/-, ಗಂಡು ಮಗು ಜನಿಸಿದರೆ ರೂ.2000/- ಲಂಚ ಕೋಟ್ಟರೆ ಮಾತ್ರ ಮಗುವನ್ನು ಕುಟುಂಬಕ್ಕೆ ಕೊಡುವ ಪದ್ಧತಿಯನ್ನು ಅಲ್ಲಿನ ವೈದ್ಯರು ಹಾಗೂ ಅಲ್ಲಿನ ಸಿಬ್ಬಂದಿಗಳು ಮಾಡಿಕೊಂಡಿರುತ್ತಾರೆ. ಸದರಿ ಭ್ರಷ್ಟಾಚಾರದ ವಿಷಯವನ್ನು ಇದೇ ತಿಂಗಳು ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿ ಚೌದ್ರಿಯವರ ಬಳಿ ತಮ್ಮ ಅಹವಾಲನ್ನು ತಿಳಿಸಿಲಾದರೂ ಆಸ್ಪತ್ರೆಯ ಭ್ರಷ್ಟಾಚಾರಕ್ಕೆ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. 

ಮೆಡಿಕಲ್ ವಿಭಾಗದಲ್ಲಿ ಜನಸಾಮಾನ್ಯರಿಗೆ ವೈದ್ಯರು ಬರೆದಿರುವ ಔಷಧಿಗಳು ಲಭ್ಯವಾಗುವುದಿಲ್ಲ.  ಬದಲು ಬೇರೆಯಾವುದೊ ಸಂಬಂಧವಿಲ್ಲದ ಔಷಧಿಯನ್ನು ರೂಗಿಗಳಿಗೆ ನೀಡಲಾಗುತ್ತಿದೆ. ಈ ವಿಷಯವನ್ನ ಯುವತಿಯೊಬ್ವರು ಒಂದು ವೀಡಿಯೊ ಸಹಾ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.‌ 

ವೈದ್ಯರು ಬರೆದಿರುವ ಔಷಧಿಯನ್ನು ಅರ್ಧ ಕೊಟ್ಟು ಇನ್ನುಳಿದ ಔಷಧಿಯನ್ನು ಹೋರಗಡೆ ಖರೀದಿಸಲು ಅಲ್ಲಿನ ಸಿಬ್ಬಂಧಿಗಳು ಹೇಳುವುದು ಸಾಮಾನ್ಯವಾಗಿರುತ್ತದೆ. ಆಸ್ಪತ್ರೆಯಲ್ಲಿ ಜನಸಾಗರ ಹರಿದುಬರುವ ಕಾರಣ ಪ್ರತೀದಿನ ರೋಗಿಗಳು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದ್ದರಿಂದ ಆಸ್ಪತ್ರೆಯಲ್ಲಿ ನೋದಣಿ ವಿಭಾಗ ಹಾಗೂ ಔಷಧಿ ವಿಭಾಗ ವಿಸ್ತರಿಸಿ ಇನ್ನು ಹೆಚ್ಚು ಸಿಬ್ಬಂಧಿ ನೇಮಿಸುವ ಅವಶ್ಯಕತೆ ಇದೆ ಸಂಘಟನೆ ಆಗ್ರಹಿಸಿದೆ. 

ಅದ್ದರಿಂದ ಮೃತ ಶ್ರೀಮತಿ.ನೂರ್ ಅಫ್‌ಶಾಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಆಸ್ಪತೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಬೇಕು ಹಾಗೂ ಅಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ಜನ ಸಾಮಾನ್ಯರಿಗೆ ಒಳ್ಳೆಯ ಆರೋಗ್ಯವನ್ನು ನೀಡಬೇಕೆಂದು ತಮ್ಮಲ್ಲಿ ಜಿಲ್ಲಾ ಸಮೀತಿಯು ಆಗ್ರಹಿಸಿದೆ. ಮನವಿ ನೀಡುವ ಸಂಬಧರ್ಭದಲ್ಲಿ ಎಸ್ ಡಿ ಪಿಐ ನ ಜಿಲ್ಲಾಧ್ಯಕ್ಷ ಜಿಲಾನ್ ಖಾನ್, ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು. 

SDPI demands a comprehensive investigation into Meggan Hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close