ಕುರಿ ಕಾಳಗ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುವಾಗ ನದಿಗೆ ಇಳಿದ ಬಾಲಕ-ನೀರು ಪಾಲು- The boy who fell into the river while returning home after a sheep fight

 SUDDILIVE || SHIVAMOGGA

ಕುರಿ ಕಾಳಗ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುವಾಗ ನದಿಗೆ ಇಳಿದ ಬಾಲಕ-ನೀರು ಪಾಲು- The boy who fell into the river while returning home after a sheep fight 

Boy, river


ತುಂಗ ನದಿಯಲ್ಲಿ ಈಜಲು ತೆರಳಿದ್ದ 17 ವರ್ಷದ ಬಾಲಕ ನೀರು ಪಾಲಾಗಿರುವ ಘಟನೆ ನಿನ್ನೆ ಪಿಳ್ಳಂಗೇರಿಯಲ್ಲಿ ನಡೆದಿದೆ. 11 ಜನರ ಕೇರಿ ಹುಡುಗರ ಜೊತೆ ಕುರಿ ಕಾಳಗ ನೋಡಲು ತೆರಳಿದ್ದ ಬಾಲಕ  ವಾಪಾಸ್ ಮನೆಗೆ ಬರುವಾಗ ನದಿ ನೀರಿಗೆ ಇಳಿದಿದ್ದು ನೀರು ಪಾಲಾಗಿದ್ದಾನೆ. 

ಪ್ರೇಮ್ ಕುಮಾರ್ ಎಂಬ (17) ವರ್ಷದ ಬಾಲಕ ನೀರು ಪಾಲಾಗಿದ್ದು ಆತನ ಮೃತ ದೇಹ ನಿನ್ನೆನೆ ಪತ್ತೆಯಾಗಿದೆ. ಪ್ರೇಮ್ ಕುಮಾರ್ ಒಳ್ಳೆ ನೃತ್ಯ ಕಲಾವಿದನೂ ಆಗಿದ್ದನು.  ಪ್ರೇಮ್ ಕುಮಾರ್ ಕಾಮಾಕ್ಷಿ ಬೀದಿಯ ನಿವಾಸಿಯಾಗಿದ್ದಾನೆ. 

ನಿನ್ನೆ ಪ್ರೇಮ್ ಕುಮಾರ್ ಕುರಿ ಕಾಳಗ ನೋಡಿಕೊಂಡು ಮಧ್ಯಾಹ್ನ  ಸುಮಾರು 1 ಗಂಟೆಯ ವೇಳೆಗೆ ಪಿಳ್ಳಂಗೇರಿಯ ವೆಂಕಟರಮಣ ದೇವಸ್ಥಾನದ ಹಿಂಭಾಗದಲ್ಲಿ 11 ಜನ ಕೇರಿ ಹುಡುಗರ ಜೊತೆ ನೀರಿಗೆ ಇಳಿದಿದ್ದನು. ನೀರಿಗೆ ಇಳಿದ ಪ್ರೇಮ್ ವಾಪಾಸ್ ದಡಕ್ಕೆ ಬರಲೇ ಇಲ್ಲ. ನಂತರ ಸಂಜೆಯ ವೇಳೆಗೆ ಅಗ್ನಿಶಾಮಕ ದಳದ ಹುಡುಕಾಟದಿಂದಾಗಿ ಆತನ ಮೃತ ದೇಹ ಪತ್ತೆಯಾಗಿದೆ. 

ಪ್ರೇಮ್ ಕುಮಾರ್ ಡಿವಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದನು. ಆತನ ಅಕಾಲಿಕ ಅಗಲಿಕೆಯಿಂದಾಗ ಕುಟುಂಬ ಕಣ್ಣೀರಿನಲ್ಲಿ ಕೈತೊಳೆದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 The boy who fell into the river while returning home after a sheep fight 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close