ಕಾಂಗ್ರೆಸ್ ನ್ನ ಅಧಿಕಾರಕ್ಕೆ ತಂದ ರಾಜ್ಯದ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ-ಈಶ್ವರಪ್ಪ-The people of the state who brought Congress to power are regretting it - Eshwarappa

 SUDDILIVE || SHIVAMOGGA

ಕಾಂಗ್ರೆಸ್ ನ್ನ ಅಧಿಕಾರಕ್ಕೆ ತಂದ ರಾಜ್ಯದ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ-ಈಶ್ವರಪ್ಪ-The people of the state who brought Congress to power are regretting it - Eshwarappa   


ರಾಜ್ಯದಲ್ಲಿ ಕಾಂಗ್ರೆಸ್ ನ್ನ ಅಧಿಕಾರಕ್ಕೆ ತಂದ ಜನ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಮತ್ತು ಡಿಸಿಎಂ ಅಧಿಕಾರದ ಹಂಚಿಕೆಯನ್ನ ಗೊಂದಲ ಮಾಡಿಕೊಂಡಿದ್ದಾರೆ ತಾಳ ಮತ್ತು ತಂತಿಯಿಲ್ಲ ಎಂಬುತಾಗಿ

Eshwarappa, congress

ದೆ. ಅಧಿಕಾರದ ಹಂಚಿಕೆ ಒಪ್ಪಂದ ಆಗಿದೆ ಎಂದು ಡಿಸಿಎಂ ಹೇಳಿದರೆ ಸಿಎಂ ಆಗಿಲ್ಲ ಎಂದಿದ್ದಾರೆ. ಡಿಸಿಎಂ ಮತ್ತು ಸಿಎಂ ಹೇಳಿಕೆಗಳಲ್ಲಿ ಯಾರದ್ದು ಸರಿ ಎಂಬುದು ಗೊತ್ತಾಗುತ್ತಿಲ್ಲ. 

ಅಧಿಕಾರದ ದಾಹಕ್ಕೆ ರಾಜ್ಯದಲ್ಲಿರುವ ಪೂಜ್ಯ ಶಾರ್ಮಿಕ ಗುರುಗಳ ಗೌರವ ಕಡಿಮೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಕುರುಬರ ಸ್ವಾಮಿಗಳು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿ ಎಂದರೆ ಒಕ್ಕಲಿಗ ಸ್ವಾಮಿಗಳು ಡಿಜೆಶಿ ಆಗಲಿ ಎಂದರೆ ದಲಿತ ಸ್ವಾಮಿಗಳು ದಲಿತರು ಸಿಎಂ ಆಗಲಿ ಎನ್ನುತ್ತಾ ಸ್ವಾಮಿಗಳಿಗೆ ಬೆಲೆಯಿಲ್ಲದಂತೆ ಮಾಡಲಾಗಿದೆ.

ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ‌ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ನೋಡುತ್ತೆ ಎನ್ನುತ್ತಾ ಪಕ್ಷವನ್ನ ಸೊನಿಯಾ ರಾಹುಲ್ ಗೆ ಒತ್ತೆಯಿಟ್ಟುಬಿಟ್ರಾ ಎಂದು ಪ್ರಶ್ನಿಸಿದ ಈಶ್ವಪ್ಪ ಡಿನ್ನರ್ ಮೀಟಿಂಗ್ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹಿಂದೂ ಕ್ರಿಶ್ಚಿಯನ್ ಮುಸ್ಲೀಂ ಒಂದೇ ಎನ್ನುತ್ತಿದ್ದಾರೆ. ಕಾಂಗ್ರೆಸ್ ನಾಯಕರೆ ಹಿಂದೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಮಸೀದಿಗೆ ಯಾಕೆ ಹೋಗುತ್ತಿಲ್ಲ. ಮತವೋಟ್ ಬ್ಯಾಂಕಿಗಾಗಿ ಬೂಟಾಟಿಕೆ ಜಾತ್ಯಾತೀತತೆಯ‌್ನ ಬಾಯಲ್ಲಿ ಹೇಳುತ್ತಿದ್ದಾರೆ. 

ಈ ಅಧಿವೇಶನದಲ್ಲಿ ದ್ವೇಷ ಭಾಷಣ ಕಾಯ್ದೆ ತರಲಾಯಿತು. ಇಡೀ ದೇಶವನ್ನ‌ಪ್ರಜಾಪ್ರಭುತ್ವದ ವಿರೋಧಿಯಾಗಿ ತುರ್ತುಸ್ಥಿತಿಯನ್ನ‌ಘೋಷಿಸಲಾಯಿತು.ವಂದೇ ಮಾತರಂ ಮತ್ತು ಭಾರತ್ ಮಾತಾಕಿ ಜೈ ಎನ್ನುವರನ್ನ ಜೈಲಿಗೆ ಹಾಕಲಾಗಿತ್ತು. ಈಗ ದ್ವೇಷ ಭಾಷಣ ಕಾಯ್ದೆ ತರಲಾಗಿದೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಹಿಂದುತ್ವದ ಪರ ಮತ್ತು ವಿರೋಧಿಗಳ ವಿಚಾರದಲ್ಲಿ ಚುನಾವಣೆ ಎದುರಿಸಲಾಗುತ್ತದೆ ಎಂದರು. 

ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುದವರಿಗೆ ಶಿಕ್ಷಯಿಲ್ಲ. ನಾನು ಬಾಂಗ್ಲಾದಲ್ಲಿ ಹಿಂದೂ ಮೇಲೆ ಹಲ್ಲೆ ಮಾಡಿದಾಗ 7 ಎಫ್ಐಆರ್ ಹಾಕಲಾಗಿದೆ. ಇಂತಹ ಒಂದು ಕೆಟ್ಟ  ದ್ವೇಷ ಭಾಷಣದ ಕಾಯ್ದೆ ತರಲಾಗಿದೆ. ಪ್ರಜಾ ಪ್ರಭುತ್ವ ಉಳಿಸಲು ಶ್ರಮಿಸಲಾಗುವುದು. ಇಈ ಕಾಯ್ದೆಯನ್ನ ಕೂಡಲೇ ಹಿಂಪಡೆಯಬೇಕು. ರಾಜ್ಯಪಾಲರು ದ್ವೇಷ ಭಾಷಣದ ಬಿಲ್ ಪಾಸ್ ಮಾಡಬಾರದು ಎಂದರು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸ್ಥಾನ ಹಂಚಿಕೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದವರು ನಿನ್ನೆ ನೀವೇ ಬಗೆಹರಿಸಿ ಎಂದು ಹೇಳಿದ್ದಾರೆ. ಸೈಚನೆ ಕೊಡುವ ಶಕ್ತಿಯನ್ನ ಕಾಂಗ್ರೆಸ್ ಹೈಕಮಾಂಡ್ ಕಳೆದುಕೊಂಡಿದೆ. ಕಾಂಗ್ರೆಸ್ ನ ಕರ್ನಾಟಕ ಉಸ್ತುವಾರಿ ನಾಪತ್ತೆಯಾಗಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಅರುಣಾಚಲ, ಕೇರಳದಲ್ಲಿ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿಲ್ಲ. 

ಕರ್ನಾಟಕದಲ್ಲಿ ಸಿಎಂ ಡಿಸಿಎಂ ಕಚ್ಚಾಟದಲ್ಲಿ ಯಾವಾಗ ಸರ್ಕಾರ ಕಳೆದುಕೊಳ್ಳಲಿದೆ. ದೇಶದ ಬಗ್ಗೆ ಮಾತನಾಡಿದರೆ ಎಂಬುದರ ಬಗ್ಗೆ ನಿರ್ದಿಷ್ಟವಾದ ವಿವರಣೆಯಿಲ್ಲ. ವ್ಯಕ್ತಿ ಬೇಡಬೆಂದರೆ ಜೈಲಿಗೆ ಹಾಕೋದೆ ಎಂದು ವ್ಯಂಗ್ಯವಾಡಿದರು. 

ಪ್ರಪಂಚ ಆಶ್ಚಯರ್ಯ ಪಡುವಂತೆ ಬಾಂಗ್ಲಾದಲ್ಲಿ ಹಿಂದೂ ಯುವಕನನ್ನ ಜೀವಂತ ಸುಟ್ಟುಹಾಕಲಾಗಿದೆ. ಯಾವ ಕಾಂಗ್ರೆಸ್ ಸಹ ಈ ಘಟನೆಯನ್ನ ಖಂಡಿಸಿಲ್ಲ. ಪ್ರಧಾನಿ ಮೋದಿ ಇದನ್ನ ಖಂಡಿಸಿದ್ದಾರೆ ನಾನು ಖಂಡಿಸುವೆ ಬಾಂಗ್ಲಾದೇಶ ಘಟನೆ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. 

The people of the state who brought Congress to power are regretting it - Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close