ಹೊಸವರ್ಷಕ್ಕೆ ರೈಲು ಪರಿಷ್ಕೃತ ವೇಳಾಪಟ್ಟಿ- The train has been revamped for the New Year

SUDDILIVE || SHIVAMOGGA

ಹೊಸವರ್ಷಕ್ಕೆ ರೈಲು ಪರಿಷ್ಕೃತ ವೇಳಾಪಟ್ಟಿ- The train has been revamped for the New Year     

Train, revamped



ನೈಋತ್ಯ ರೈಲಿನ ನೂತನ ವೇಳಾಪಟ್ಟಿ ಪ್ರಕಟಿಸಿದೆ. ಜನವರಿ 1ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದೆ. ಅದರಂತೆ ಶಿವಮೊಗ್ಗದ ಕೆಲವು ರೈಲುಗಳ ಪ್ರಯಾಣ ಅವಧಿ ಕಡಿತವಾಗಲಿದೆ. ನಿಗದಿಗಿಂತಲು ಕೆಲವು ನಿಮಿಷ ಬೇಗ ನಿಲ್ದಾಣಗಳನ್ನು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈಲುಗಳ ಪ್ರಯಾಣ ಅವಧಿ ಕಡಿತ

ನೈಋತ್ಯ ರೈಲ್ವೆ ವ್ಯಾಪ್ತಿಯ 123 ರೈಲುಗಳು ಸ್ಪೀಡ್‌ ಆಗಲಿವೆ. ಈ ಪೈಕಿ ಶಿವಮೊಗ್ಗ ಜಿಲ್ಲೆಗೆ ಸೇರಿದ ರೈಲುಗಳು ಇವೆ. ಅವುಗಳ ಪಟ್ಟಿ ಇಲ್ಲಿದೆ.

ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 16581) : ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 25 ನಿಮಿಷ ಕಡಿತವಾಗಲಿದೆ. ಈವರೆಗು 6 ಗಂಟೆ 10 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 5 ಗಂಟೆ 45 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ.

ಎಂಜಿಆರ್‌ ಚೆನ್ನೈ – ಶಿವಮೊಗ್ಗ (ರೈಲು ಸಂಖ್ಯೆ 12691): ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 25 ನಿಮಿಷ ನಿಮಿಷ ಕಡಿತವಾಗಲಿದೆ. ಈವರೆಗು 12 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 12 ಗಂಟೆ 30 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ.

ಶಿವಮೊಗ್ಗ – ಯಶವಂತಪುರ (ರೈಲು ಸಂಖ್ಯೆ 16582): ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 15 ನಿಮಿಷ ನಿಮಿಷ ಕಡಿತವಾಗಲಿದೆ. ಈವರೆಗು 5 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 50 ನಿಮಿಷದಲ್ಲಿ ಯಶವಂತಪುರ ತಲುಪಲಿದೆ.

ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 20689 (16579)): ಜನವರಿ 1 ರಿಂದ ಈ ರೈಲು 10 ನಿಮಿಷ ಸ್ಪೀಡ್‌ ಆಗಲಿವೆ. ಈವರೆಗು 5 ಗಂಟೆ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 50 ನಿಮಿಷದಲ್ಲಿ ಯಶವಂತಪುರ ತಲುಪಲಿದೆ.

ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (ರೈಲು ಸಂಖ್ಯೆ 12089): ಜನವರಿ 1 ರಿಂದ ಈ ರೈಲು 5 ನಿಮಿಷ ಸ್ಪೀಡ್‌ ಆಗಲಿವೆ. ಈವರೆಗು 4 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 20 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ. (Shivamogga Trains)

ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227): ಜನವರಿ 1 ರಿಂದ ಈ ರೈಲು 10 ಮುಂಚಿತವಾಗಿ ನಿಗದಿತ ನಿಲ್ದಾಣ ತಲುಪಲಿದೆ. ಈವರೆಗು ಪ್ರಯಾಣದ ಅವಧಿ 12 ಗಂಟೆ 20 ನಿಮಿಷ ಇತ್ತು. ಇನ್ಮುಂದೆ 12 ಗಂಟೆ 10 ನಿಮಿಷದಲ್ಲಿ ಪ್ರಯಾಣ ಮುಗಿಸಲಿದೆ.

The train has been revamped for the New Year  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close