ಛಲ ಬಿಡದ ಚೆನ್ನಿ-The unyielding Chennabasappa

SUDDILIVE || BELAGAVI

ಛಲ ಬಿಡದ ಚೆನ್ನಿ-The unyielding Chennabasappa   

Unyielding, Channabasappa

ಶಿವಮೊಗ್ಗದ ಕಾನೂನು ವ್ಯವಸ್ಥೆಯ ಬಗ್ಗೆ ಶಾಸಕ ಚೆನ್ನಬಸಪ್ಪ ಬೆಳಗಾವಿ ಸದನದಲ್ಲೂ ಗುಡುಗಿದ್ದಾರೆ. ಗೃಹ ಸಚಿವ ಡಾ.ಪರಮೇಶ್ವರ್ ಅವರ ಗಮನ ಸೆಳೆದು ಇತ್ತೀಚೆಗೆ ಗಾಂಜಾ ಹಾವಳಿಯಿಂದ ನಗರ ತತ್ತರಿಸುತ್ತಿದೆ. ಕಮಿಷನರೇಟ್ ಕಚೇರಿ ಕೊಡಿ ಎಂದಿದ್ದಾರೆ. ಠಾಣೆಗೆ ಬೇಟಿ ನೀಡಿದ ವೇಳೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ನವರು ಸಿಬ್ಬಂದಿಗಳ ಕೊರತೆಯಿದೆ ಎಂಬ ಮಾತನ್ನೇ ಸದನದವರೆಗೂ ತೆಗೆದುಕೊಂಡು ಹೋಗಿ ಹುದ್ದೆಗಳ ನೇಮಕಾತಿಯ ಬಗ್ಗೆಯೂ ಗೃಹಸಚಿವರಿಂದ ಸ್ಪಷ್ಟನೆ ಪಡೆದುಕೊಂಡು ಬಂದಿದ್ದಾರೆ. 

ಸದಸನದಲ್ಲೂ ಈ ವಿಷಯವನ್ನ ಕೈ ಬಿಡದ ಚೆನ್ನಬಸಪ್ಪ, ಗೃಹಸಚಿವರ ಬಾಯಿಯಿಂದಲೇ ಇನ್ನೆರಡು ತಿಂಗಳಲ್ಲಿ ಪೊಲೀಸ್ ಸಿಬ್ಬಂದಿಗಳ ನೇಮಕಾತಿ, ಸಬ್ ಇನ್ ಸ್ಪೆಕ್ಟರ್ ನೇಮಕಾತಿಯನ್ನ ಭರಿಸುವ ಭರವಸೆಯನ್ನ ಪಡೆದುಕೊಂಡಿದ್ದಾರೆ. 

ಆರ್ ಎಂ ಎಲ್ ನಗರದಲ್ಲಿ ನಡೆದ ಹಲ್ಲೆ

ಆರ್ ಎಂ ಎಲ್ ನಗರದಲ್ಲಿ ಹರೀಶ್ ಎಂಬುವರಿಗೆ ಹಲ್ಲೆಯ ಘಟನೆ ನಡೆದ ಮರುದಿನವೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಪೊಲೀಸರನ್ನ ತರಾಟೆಗೆ ತೆಗೆದುಕೊಂಡಿದ್ದರು. ಘಟನೆಯಲ್ಲಿ ಕೋಮುವಾದದ ಆರೋಪವೂ ಕೇಳಿ ಬಂದಿತ್ತು. ಆದರೆ ಗಲಾಟೆಯಲ್ಲಿ ಹೊಡೆತ ತಿಂದವನು ಮತ್ತು ಹೊಡೆತ ಹೊಡೆದವನ ಕೋಮು ಒಂದೆ ಆಗಿದೆ ಮತ್ತೊಬ್ಬ ಆರೋಪಿ ಬೇರೆ ಕೋಮಿನವನು ಎಂದು ಹೇಳಲಾಗಿತ್ತು. 

ಅದನ್ನೂ ಚಾಣಾಕ್ಷತನದಿಂದ ನಿಬಾಯಿಸಿದ ಶಾಸಕರು ಧರ್ಮ ಕೇಳಿ ಹೊಡೆದಿದ್ದಾರೆ. ಧರ್ಮ ಕೇಳುವ ನಿಶಾ ಎಂತಹದ್ದು ಹಾಗಾದರೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲದಂತಾಗಿತ್ತು. ಇದಾದ ಬಳಿಕ ನಡೆದಿದ್ದೇ ಆಪರೇಷನ್ ಗಾಂಜಾ, ಶಾಸಕರು ಗೃಹಸಚಿವರು, ಐಜಿಡಿಜಿ, ಎಡಿಜಿಪಿ, ಐಜಿ ಕಚೇರಿಯ ಕೋಣೆಯನ್ನ ತಟ್ಟಿದ್ದರು. ಅದರ ಪರಿಣಾಮ ದೊಡ್ಡಪೇಟೆ ಪೊಲೀಸ್ ಠಾಣೆಯ ನಿದ್ದೆ ಕೆಡೆಸಿತ್ತು. 

ಪೊಲೀಸರನ್ನ ತುದಿಗಾಲಿನಲ್ಲಿ ನಿಲ್ಲಿಸಿದ್ದ ಶಾಸಕರು

ತುದಿಗಾಲಿನಲ್ಲಿ ಶಾಸಕರು ಪೊಲೀಸರನ್ನ ನಿಲ್ಲಿಸಿಬಿಟ್ಟಿದ್ದರು. ಪರಿಣಾಮ ದೊಡ್ಡಪೇಟೆ ಒಂದರಲ್ಲೇ ನೂರಾರು ಗಾಂಜಾ ಪ್ರಕರಣವನ್ನ ದಾಖಲು ಮಾಡುವಂತೆ ಮಾಡಿತ್ತು. ಇದರ ಜೊತೆ ಮಹಿಳಾ ಆಯೋಗ ಅಧ್ಯಕ್ಷೆಯೂ ಸಹ ಜಿಪಂ ಸಭೆಯಲ್ಲಿ ಎಸ್ಪಿ ಅವರ ಗಮನ ಸೆಳೆದಿದ್ದರಿಂದ ಗಾಂಜಾ ಡ್ರೈವ್ ಜಿಲ್ಲೆಯಲ್ಲಿ ದೊಡ್ಡಮಟ್ಟದ ಸುದ್ದಿ ಪಡೆದುಕೊಂಡಿದೆ. ಗಾಂಜಾ ಸಾಗಾಣಿಕೆಗೆ ಎಲ್ಲೂ ಹೊಡೆತ ಬಿದ್ದಿಲ್ಲ. ಆದರೆ ಗಾಂಜಾ ಸೇವನೆ, ಮಾರಾಟಕ್ಕೆ ದೊಡ್ಡಪೆಟ್ಟು ಬಿದ್ದಿದೆ ಎನ್ನಬಹುದು. 

ಇಷ್ಟಕ್ಕೆ ಶಾಸಕರು ಸುಮ್ಮನೆ ಕೂರಲಿಲ್ಲ. ಶಾಸಕರ ಇಂದು ಸದನದಲ್ಲೂ ಗುಡುಗಿದ್ದಾರೆ. ಹರೀಶ್ ಮೇಲೆ ಹಲ್ಲೆ ನಡೆದಾಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಹೊದಾಗ ಪಿಐ ಹೇಳಿದ ಮಾತೊಂದು ಶಾಸಕರನ್ನ ಎಡಬಿಡದೆ ಕಡಿದಂತೆ ಕಾಣುತ್ತೆ. ಅದನ್ನ ಸದನದಲ್ಲೂ ಉಲ್ಲೇಖಿಸಿರುವ ಅವರು ಸಿಬ್ಬಂದಿಗಳ ಕೊರತೆಯಿದೆ ಸಾರ್ ಎಂದಿದ್ದಾರೆ. ಶಿವಮೊಗ್ಗ ಬೆಳೆಯುತ್ತಿರುವ ನಗರ ಅಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಭರ್ತಿ ಮಾಡಿಕೊಡಿ ಎಂದಿದ್ದಾರೆ. 

ಠಾಣೆಯಲ್ಲಿ ಸಿಬ್ಬಂದಿಗಳು ಖಾಲಿ

ಒಂದು ಠಾಣೆಯಲ್ಲಿ ಕನಿಷ್ಠ 70 ಜನರಿರ ಬೇಕಾದ ಸಿಬ್ಬಂದಿಗಳಲ್ಲಿ 30-40 ಜನ ಮಾತ್ರ ಇದ್ದಾರೆ. ಕಳವು ಮತ್ತು ಇತರೆ ಅಪರಾಧ ಘಟನೆಯಿಂದ ದೂರು ತೆಗೆದುಕೊಳ್ಳಲು ಸಿಬ್ಬಂದಿಗಳಿಲ್ಲ ಎನ್ನುವಂತ ಸ್ಥಿತಿಯಿದೆ. ವ್ಯವಸ್ಥೆ ಬದಲಾಗುತ್ತಿದೆ. ನನ್ನ ಮನವಿಯ ಮೇಲೆ ಅಧಿಕಾರಿಗಳು ಬಂದು ಹೋಗಿದ್ದಾರೆ. ಭದ್ರಾವತಿಯಲ್ಲಂತೂ ದೇವರೇ ಕಾಪಾಡುವ ಸ್ಥಿತಿಯಿದೆ. ಕಮಿಷನರೇಟ್ ಕಚೇರಿ ಬೇಕಿದೆ ಎಂದು ಸದನದ ಅದರಲ್ಲೂ ಗೃಹ ಸಚಿವರ ಗಮನ ಸೆಳೆದಿದ್ದಾರೆ. 

ಜಿಲ್ಲೆಯಲ್ಲಿ 155 ಹುದ್ದೆ ಖಾಲಿ

ಗೃಹ ಸಚಿವರು ಸಹ ಶಾಸಕರ ಮನವಿಯನ್ನ ಗನಕ್ಕೆ ಪಡೆದುಕಪಂಡಂತಿದೆ. ಉತ್ತರಿಸಿದ ಅವರು ಜಿಲ್ಲೆಯಲ್ಲಿ 33 ಪೊಲೀಸ್ ಠಾಣೆಗಳಿವೆ. 33 ಠಾಣೆಗಳಲ್ಲಿ ಮಂಜೂರಾದ  ಹುದ್ದೆಗಳು 1549 ಹುದ್ದೆಗಳಿವೆ. ಇರಲ್ಲಿ ಈಗ 1394 ಹುದ್ದೆಗಳು ಭರ್ತಿಯಿವೆ. 155 ಹುದ್ದೆಗಳು ಖಾಲಿಯಿವೆ. ಪೊಲೀಸ್ ನೇಮಕಾತಿಗಳು ಬಹಳ ವರ್ಷದಿಂದ ನೇಮಕಾತಿಯಾಗಿಲ್ಲ. ಈಗ 947 ಸಬ್ ಇನ್ಸ್ಪೆಕ್ಟರ್ ಹುದ್ದೆಯನ್ನ ಭರ್ತಿ ಮಾಡಲಾಗಿದೆ. ಶಿವಮೊಗ್ಗದಲ್ಲಿ ಖಾಲಿಯಿರುವ 42 ಸಬ್ ಇನ್ ಸ್ಪೆಕ್ಟರ್ ಗಳಲ್ಲಿ ಶಿವಮೊಗ್ಗಕ್ಕೆ 32 ಕೊಡಲಾಗಿದೆ. ಅವರೆಲ್ಲ ತರಬೇತಿಯಲ್ಲಿದ್ದಾರೆ. ತರಬೇತಿ ಎರಡು ಮೂರು ತಗಳಿವೆ ಮುಗಿಸಿಕೊಂಡು ಬರಲಿದ್ದಾರೆ. 

ಕಮಿಷನರೇಟ್ ಮಾಡಿ ಎಂದು ಶಾಸಕರು ಪರಿಶೀಲಿಸುವುದಾಗಿ ಭರವಸೆ ನೀಡಿದ ಗೃಹ ಸಚಿವರು

10 ಸಬ್ ಇನ್ ಸ್ಪೆಕ್ಟರ್ ಗಳು ಉಳಿದುಕೊಂಡಿದ್ದಾರೆ. ಅದನ್ನ‌ಮುಂದಿನ ನೇಮಕಾತಿಯಲ್ಲಿ ಭರ್ತಿ ಮಾಡಲಾಗುವುದು. 600 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ ಭರ್ತಿ ಮಾಡಲಾಗುವುದು. ಹಾಲಿಯಿರುವ ಸಿಬ್ಬಂದಿಗಳಿಗೆ ಡ್ಯೂಟಿ ಮಾಡಲು ಆಗುತ್ತಿಲ್ಲ ಎಂಬ ದೂರುಗಳಿವೆ. ಅದಕ್ಕೆ 103 ಗೃಹರಕ್ಷಕದಳ ಸಿಬ್ಬಂದಿಗಳನ್ನ ನೇಮಿಸಿಕೊಳ್ಳಲಾಗಿದೆ. 155 ಹುದ್ದೆಗಳನ್ನೂ ಭರ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಕಮಿಷನರೇಟ್ ನ್ನ ಒಂದೊಂದು ಜಿಲ್ಲೆಗೆ ಕೊಡಲು ಸಾಧ್ಯವಿಲ್ಲ. ಕಮಿಷನರೇಟ್ ಮಾಡುವ ಮಾನದಂಡದ ಒಳಗೆ ಶಿವಮೊಗ್ಗ ಬರುವುದಾದರೆ ಅದನ್ನ ಪರಿಶೀಲಿಸೋಣ, ರೋಜಿನಲ್ ಹೆಡ್ ಕ್ವಾಟ್ರಸ್ ಆಗಿದೆ ಮುಂದಿನ ದಿನಗಳಲ್ಲಿ ನೋಡೋಣ ಎಂದರು. ಇದಕ್ಕೂ ಸುಮ್ಮನಾಗದ ಶಾಸಕರು, ಶಿವಮೊಗ್ಗದಲ್ಲಿ ನಡೆಯುತ್ತಿರುವ ಘಟನೆ ಸಾರ್ವಜನಿಕರನ್ನ‌ ಭಯ ಬೀಳಿಸುತ್ತಿದೆ. ವಿಭಾಗೀಯ ಮಟ್ಟದ ಜಿಲ್ಲಾ ಕೇಂದ್ರವಾಗಿದೆ ಯಾವುದನ್ನಾದರೂ ಸೇರಿಸಿ ಮಾಡುವಂತೆ ಮನವಿ ಮಡಿದ್ದಾರೆ.

The unyielding Chennabasappa   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close