23 ದಿನಗಳ ಬಳಿಕ ಚಿನ್ನಯ್ಯನಿಗೆ ಬಿಡುಗಡೆಯ ಭಾಗ್ಯ- Chinnaiah is fortunate to be released after 23 days

 SUDDILIVE || SHIVAMOGGA

23 ದಿನಗಳ ಬಳಿಕ ಚಿನ್ನಯ್ಯನಿಗೆ ಬಿಡುಗಡೆಯ ಭಾಗ್ಯ- Chinnaiah is fortunate to be released after 23 days   

 

Chinnaiah, released

ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಶಿವಮೊಗ್ಗ ಕಾರಾಗೃಹದ ಒಳಗಿರುವ ಚಿನ್ನಯ್ಯನಿಗೆ ಕೊನೆಗೂ ಜಾಮೀನು ದೊರೆತಿದೆ.  ನ್ಯಾಯಾಲಯ 12 ಅಂಶದ ಜಾಮೀನು ಮಂಜೂರು ನೀಡಿ 23 ದಿನಗಳ ಬಳಿಕ ಜಾಮೀನು ದೊರೆತಿದ್ದು ನಾಳೆ  ಬೆಳಿಗ್ಗೆ 7-30 ಕ್ಕೆ ಬಿಡುಗಡೆಯಾಗುತ್ತಿದ್ದಾನೆ. 

ಆಗಸ್ಟ್ 23 ರಂದು ಸುಧೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್ ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯ ಬಂಧನವಾಗಿತ್ತು. ಸೆಪ್ಟೆಂಬರ್ 6 ರಂದು ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.

1 ಲಕ್ಷ ರೂ. ಬಾಂಡ್ ಸೇರಿ 12 ಷರತ್ತು ವಿಧಿಸಿ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.ವಿಶೇಷ ತನಿಖಾ ತಂಡ ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿ ಬೆನ್ನಲ್ಲೇ ಚಿನ್ನಯ್ಯ ಜಾಮೀನಿಗೆ  ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಪುರಸ್ಕರಿಸಿದ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಸೆ.6 ಕ್ಕೆ ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗಿದ್ದ. ಭದ್ರತಾ ದೃಷ್ಠಿಯಿಂದ ಆತನನ್ನ ಶಿವಮೊಗ್ಗದ ಸೋಗಾನೆಯಲ್ಲಿರುವ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಎರಡು ವರೆ ತಿಂಗಳ ಬಳಿಕ ಆತನಿಗೆ ಜಾಮೀನು ಮಂಜೂರಾಗಿದೆ.

Chinnaiah is fortunate to be released after 23 days

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close