ಕಾರು ಜಪ್ತಿಗೆ ಕಾಲಾವಕಾಶ-Time taken for car impoundment

 SUDDILIVE || SHIVAMOGGA

ಕಾರು ಜಪ್ತಿಗೆ ಕಾಲಾವಕಾಶ-Time taken for car impoundment

Car, impoundment

ಜಿಲ್ಲಾಧಿಕಾರಿಗಳ ಕಾರು ಜಪ್ತಿಗೆ ಕಾಲಾವಕಾಶ ದೊರೆತಿದೆ. ಮೂರುದಿನಗಳಲ್ಲಿ ರೈತ ನಂದ್ಯಪ್ಪ ಅವರ ಪರಿಹಾರ ನೀಡುವ ಭರವಸೆಯನ್ನ ಡಿಸಿ ನೀಡುವುದರ ಮೇರೆಗೆ  ಕಾರಿನ ಜಪ್ತಿ ಕಾರ್ಯ ಮುಂದೂಡಲ್ಪಟ್ಟಿದೆ.

ಹರಮಘಟ್ಟದ ನಂದ್ಯಪ್ಪ ಸರ್ವೇ ನಂಬರ್ 101 ರಲ್ಲಿರುವ ತಮ್ಮ ಒಂದು ಎಕರೆ ಜಮೀನನ್ನ ಆಶ್ರಮ ಮನೆಯ ಯೋಜನೆಗೆ 1992 ರಲ್ಲಿ ಗ್ರಾಮಂಚಾಯಿತಿಗೆ ಬಿಟ್ಟುಕೊಟ್ಟಿದ್ದರು. ಆ ವೇಳೆ 22 ಲಕ್ಷ‌ ಕೊಡಬೇಕೆಂದು ಮಾತುಕತೆಯಾದರೂ ಕೇವಲ 9 ಲಕ್ಷ ರೂ. ಬಂದಿತ್ತು. ಈ ಬಗ್ಗೆ ನಂದ್ಯಪ್ಪ ನ್ಯಾಯಾಲಯಕ್ಕೆ ಹೋಗಿದ್ದರು. ಐದು ವರ್ಷಗಳಿಂದ ರೀಜನಲ್ ಕೋರ್ಟ್ ಜಿಲ್ಲಾಧಿಕಾರಿಗಳು 95 ಲಕ್ಷ 88 ಸಾವಿರ 283 ರೂ. ಕೊಡಬೇಕು ಎಂದು ಆದೇಶಿಸಲಾಗಿತ್ತು. 

Car, Impoundment

ಕಳೆದ ಐದು ವರ್ಷದಿಂದ ಹಣಕೊಡಲಿಲ್ಲ ಎಂದು ನಂದ್ಯಪ್ಪ ವಿಧಾನಸೌಧ, ಜಿಪಂ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ತಿರುಗಿದರೂ ಹಣ ಬಂದಿರಲಿಲ್ಲ. ಮತ್ತೆ ನಂದ್ಯಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು. ಈ ನ್ಯಾಯಾಲಯಯ ಪರಿಹಾರ ನೀಡಲು ಮತ್ತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ  ಅಮೀನ್ ವೆಂಕಟೇಶ್ ಜಪ್ತಿ ಮಾಡಲು ಬಂದಿದ್ದರು. 

ಅಮೀನಿನ ಮೇಲಾಧಿಕಾರಿಗಳ ಜೊತೆ ಡಿಸಿ ಮಾತನಾಡಿದ ಹಿನ್ನಲೆಯಲ್ಲಿ ಜಪ್ತಿಕಾರ್ಯ ಮುಂದೂಡಲ್ಪಟ್ಟಿದೆ. 

Time taken for car impoundment   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close