ಜಿಲ್ಲಾಧಿಕಾರಿಗಳ ಇನ್ನೋವ ಕಾರು ಜಪ್ತಿಗೆ ಆದೇಶ ನಡೆದಿದ್ದೇನು?What happened to the order to seize another car of the District Magistrate?

 SUDDILIVE || SHIVAMOGGA

ಜಿಲ್ಲಾಧಿಕಾರಿಗಳ ಇನ್ನೋವ ಕಾರು ಜಪ್ಪಿಗೆ ಆದೇಶ ನಡೆದಿದ್ದೇನು?What happened to the order to seize another car of the District Magistrate?   

Dc, seize

 ಇಂದು ಜಿಲ್ಲಾಧಿಕಾರಿ ಕಚೇರಿಯ ಕಾರನ್ನ ಜಪ್ತಿ ಮಾಡಲು ಬಂದಿರುವುದು ಕುತೂಹಲ ಮೂಡಿಸಿದೆ. ಪರಿಹಾರ ನೀಡುವ ಪ್ರಕರಣ ಒಂದರಲ್ಲಿ ಜಿಲ್ಲಾಧಿಕಾರಿಗಳ ಕಾರನ್ನ ಜಪ್ತಿ ಮಾಡಲು ಬಂದಿದ್ದರು. 

ಹರಮಘಟ್ಟದ ನಂದ್ಯಪ್ಪ ಸರ್ವೇ ನಂಬರ್ 101 ನಲ್ಲಿರುವ ತಮ್ಮ ಒಂದು ಎಕರೆ ಜಮೀನನ್ನ ಆಶ್ರಮ ಮನೆಯ ಯೋಜನೆಗೆ 1992 ರಲ್ಲಿ ಗ್ರಾಮಂಚಾಯಿತಿಗೆ ಬಿಟ್ಟುಕೊಟ್ಟಿದ್ದರು. ಆ ವೇಳೆ 22 ಲಕ್ಷ‌ ಕೊಡಬೇಕೆಂದು ಮಾತುಕತೆಯಾದರೂ ಕೇವಲ 9 ಲಕ್ಷ ರೂ. ಬಂದಿತ್ತು. ಈ ಬಗ್ಗೆ ನಂದ್ಯಪ್ಪ ನ್ಯಾಯಾಲಯಕ್ಕೆ ಹೋಗಿದ್ದರು. ಐದು ವರ್ಷಗಳಿಂದ ರೀಜನಲ್ ಕೋರ್ಟ್ ಜಿಲ್ಲಾಧಿಕಾರಿಗಳು 95 ಲಕ್ಷ 88 ಸಾವಿರ 283 ರೂ. ಕೊಡಬೇಕು ಎಂದು ಆದೇಶಿಸಲಾಗಿತ್ತು. 

ಕಳೆದ ಐದು ವರ್ಷದಿಂದ ಹಣಕೊಡಲಿಲ್ಲ ಎಂದು ನಂದ್ಯಪ್ಪ ವಿಧಾನಸೌಧ, ಜಿಪಂ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ತಿರುಗಿದರೂ ಹಣ ಬಂದಿರಲಿಲ್ಲ. ಮತ್ತೆ ನಂದ್ಯಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು. ಈ ನ್ಯಾಯಾಲಯಯ ಪರಿಹಾರ ನೀಡಲು ಮತ್ತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ  ಅಮೀನ್ ವೆಂಕಟೇಶ್ ಜಪ್ತಿ ಮಾಡಲು ಬಂದಿದ್ದರು. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಅವರಿಗೆ ಏನು ಸಿಗಬೇಕಿದೆಯೋ ಆ ಮೊತ್ತವನ್ನು ನೀಡಲಾಗುವುದು ನಮ್ಮ ಬಳಿ 5000ಕ್ಕೂ ಹೆಚ್ಚು ಭೂ ಪರಿಹಾರದ ಪ್ರಕರಣಗಳಿವೆ ಎಂದ ಅವರು ಇದು ಯಾವ ಭೂ ಪರಿಹಾರದ ಪ್ರಕರಣಗಳು ಅಂತ ತಿಳಿದು ನಂತರ ಪ್ರತಿಕ್ರಿಯೆಸಲಾಗುವುದು ಎಂದರು.

ಡಿಸಿ ಕಚೇರಿಯಲ್ಲಿ ಅಮೀನ್ ಅವರು ಡಿಸಿ ಭೇಟಿಗಾಗಿ ಕಾಯುತ್ತಿರುವುದು ಕಂಡು ಬಂದಿದೆ. ಭೂ ಪರಿಹಾರ ಪಡೆದುಕೊಂಡು ಹೋಗುವ ನಿರೀಕ್ಷೆ ಇದೆ.

What happened to the order to seize another car of the District Magistrate

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close