ಶಿಷ್ಠಾಚಾರದ ಆರೋಪ, ಸಂಸದರು ಮತ್ತು ನಾಗರಾಜ್ ಗೌಡರ ನಡುವಿನ ಮಾತಿನ ಚಕಮಕಿ ವಿಡಿಯೋ ವೈರಲ್

SUDDILIVE || SHIVAMOGGA

ಶಿಷ್ಠಾಚಾರದ ಆರೋಪ, ಸಂಸದರು ಮತ್ತು ನಾಗರಾಜ್ ಗೌಡರ ನಡುವಿನ ಮಾತಿನ ಚಕಮಕಿ ವಿಡಿಯೋ ವೈರಲ್-Video of verbal altercation between MP and Nagaraj Gowda goes viral, alleging misconduct

MP, verbal

ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಕೊರತೆ ಹಿನ್ನಲೆಯಲ್ಲಿ ಬಿಜೆಪಿ ಸಂಸದರು ಮತ್ತು ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟನೆ ವೇಳೆ ಘಟನೆ ನಡೆದಿದೆ. 

ತಾಲ್ಲೂಕಿನಲ್ಲಿ ವಿದ್ಯಾರ್ಥಿ ನಿಲಯದ ಉದ್ಘಾಟನ ಕಾರ್ಯಕ್ರಮದ  ಗ್ಯಾರೆಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ನಾಗರಾಜ್ ಗೌಡರ ಹೆಸರನ್ನ ಹೇಳದೆ ಅವಮಾನಿಸಿರುವ ಹಿನ್ನಲೆಯಲ್ಲಿ  ಅಧಿಕಾರಿಗಳು ಶಿಷ್ಟಾಚಾರ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಕಾಂಗ್ರೇಸ್ ಕಾರ್ಯಕರ್ತರ ಅರೋಪಿಸಿದ್ದಾರೆ. 

ಎಲ್ಲವೂ ಬಿಜೆಪಿ ಕಚೇರಿಯಲ್ಲಿ ನಿರ್ಣಯಗೊಳ್ಳುತ್ತಿದೆ. ಬಹಿರಂಗವಾಗಿಯೇ ಕಾಂಗ್ರೇಸ್ ಮುಖಂಡ  ನಾಗರಾಜ್ ಗೌಡ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡರ ಹೆಸರನ್ನ ಹೇಳದ ಅಧಿಕಾರಿಗಳು ಸಂಸದರ ಮನೆಗೆ ಹೋಗಿ ಎಂದು ಅವಾಜ್ ಹಾಕಿದ್ದಾರೆ.  ಬಿ.ವೈ.ರಾಘವೇಂದ್ರ ಪ್ರತ್ಯುತ್ತರಿಸಿ ಅಧಿಕಾರಿಗಳ ಹಿತ ಕಾಯುವ ಭರವಸೆ ನೀಡಿದ್ದಾರೆ. ಈ ಘಟನೆ ಕಾರ್ಯಕ್ರಮದಲ್ಲಿ ಇದ್ದ ಬಿಜೆಪಿ, ಕಾಂಗ್ರೆಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

ಪರಸ್ಪರರ ಏಕವಚನ ಪ್ರಯೋಗ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಗಲಾಟೆಯಾಗಿದೆ. ಬಿಸಿಎಂ ಇಲಾಖೆ ವತಿಯಿಂದ 5ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಗಲಾಟೆ ನಡೆದಿದೆ. ಈ ಕಾರ್ಯಕ್ರಮ ನ.25 ಕ್ಕೆ ನಡೆದ ಕಾರ್ಯಕ್ರಮದ ವಿಡಿಯೋ ಈಗ ವೈರಲ್ ಆಗುತ್ತಿದೆ. 

Video of verbal altercation between MP and Nagaraj Gowda goes viral

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close