ಶ್ರೀ ಸೀತಾಕಲ್ಯಾಣ ಶತಮಾನೋತ್ಸವ ವೈಭವ ಹಾಗೂ ಕೋಟಿತ್ರಯ ರಾಮನಾಮಾರ್ಚನ ಮಹೋತ್ಸವ-The grandeur of Sri Seetha Kalyana Centenary and the celebration of the Kotitraya Ramanamarchna

SUDDILIVE || SHIVAMOGGA

ಶ್ರೀ ಸೀತಾಕಲ್ಯಾಣ ಶತಮಾನೋತ್ಸವ ವೈಭವ ಹಾಗೂ ಕೋಟಿತ್ರಯ ರಾಮನಾಮಾರ್ಚನ ಮಹೋತ್ಸವ-The grandeur of Sri Seetha Kalyana Centenary and the celebration of the Kotitraya Ramana marchna

Seetha, kalyana


ನಗರದ ಕೋಟೇ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಡಿ.೦೭ರ ಭಾನುವಾರದಿಂದ ಜ.೦೫ರ ಸೋಮವಾರದ ವರೆಗೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾನಾಮಾರ್ಚನ ಮಹೋತ್ಸವವನ್ನು ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿಯ ಭಾರ್ಗವ ರಾಮನ್ ಇದರ ಅಂಗವಾಗಿ ಒಂದು ತಿಂಗಳ ಪರ್ಯಂತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ೦೭ರ ಬೆಳಿಗ್ಗೆ ಮಹಾ ಸಂಕಲ್ಪ ಹಾಗೂ ನವಗ್ರಹ ಪೂಜೆಯ ಮೂಲಕ ಚಾಲನೆ ನೀಡಲಾಗುತ್ತಿದೆ ಎಂದರು. 

ಡಿ. ೦೮ರಿಂದ ೧೭ರವರೆಗೆ ಶ್ರೀ ಭಾಗವತ ಮಹಾ ಪುರಾಣ ಹೋಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಚ್. ಆರ್. ಶ್ರೀಧರ್‌ರವರಿಂದ ಪ್ರತಿನಿತ್ಯ ಸಂಜೆ ೦೬.೩೦ಕ್ಕೆ ಭಾಗವತ ಸಪ್ತಾಹ ಉಪನ್ಯಾಸ ನಡೆಯಲಿದೆ. ಡಿ.೧೫ರಿಂದ ೧೭ರವರೆಗೆ ಕಲ್ಲಾಪುರದ ಪವಮಾನ ಆಚಾರ್‌ರವರಿಂದ ವಿಷ್ಣುವಿನ ದಶಾವತಾರ ಕುರಿತು ಉಪನ್ಯಾಸ ಹಾಗೂ ದಶಾವತಾರ ಉತ್ಸವ ನಡೆಯಲಿದೆ ಎಂದು ತಿಳಿಸಿದರು. 

Seetha, kalyana

ಡಿ. ೧೮ರಂದು ಸಪ್ತ ಚಿರಂಜೀವಿಗಳ ಪೂಜೆ ಹೋಮ ನಡೆಯಲಿದ್ದು, ಸಂಜೆ ಮತ್ತೂರು ಸನತ್‌ಕುಮಾರ್, ಅಚ್ಯುತ ಅವಧಾನಿಯವರಿಂದ ಸೀತಾ ಕಲ್ಯಾಣ ಗಮಕ ವಾಚನ ವ್ಯಾಖ್ಯಾನ, ಡಿ. ೧೯ರಂದು ಎಳ್ಳು ಅಮಾವಾಸ್ಯೆ ಭಾಗವಾಗಿ ಶಕ್ತಿದೇವತೆಗಳ ಸಮಾವೇಶ, ೨೦ರಂದು ಮಾರುತಿ ಹೋಮ, ಸಂಜೆ ಉಸ್ತಾದ್ ಹುಮಾಯೂನ್ ಹರ್ಲಾಪುರ, ನೌಷಾದ್ ಹರ್ಲಾಪುರ, ನಿಷದ್ ಹರ್ಲಾಪುರರವರಿಂದ ಹಿಂದೂಸ್ಥಾನೀ ಸಂಗೀತ, ದಾಸವಾಣಿ ಕಾಯಕ್ರಮ ನಡೆಯಲಿದೆ ಎಂದರು. 

ಡಿ. ೨೧ರಂದು ಶ್ರೀ ಗಾಯತ್ರಿ ಹೋಮ, ಸಂಜೆ ಅರುಣ್ ಕುಮಾರ್ ಮತ್ತು ಸಂಗಡಿಗರಿAದ ಭಕ್ತಿ ಸಂಕೀರ್ತನೆ, ೨೨ರಂದು ವಿಷ್ಣು ಸಹಸ್ರನಾಮ ಹೋಮ, ಮೈಸೂರಿನ ಎಂ.ಜಿ. ಶ್ರೀಧರ್ ಸಂಗಡಿಗರಿAದ ನಾಗಸ್ವರ, ೨೩ರಂದು ಲಲಿತಾ ಸಹಸ್ರನಾಮ ಹೋಮ, ಸಂಜೆ ನೃತ್ಯಗುರು ಸೌಮ್ಯ ರಂಗಸ್ವಾಮಿಯವರ ನವಭಾವ್ ಸ್ಕೂಲ್ ಆ-ï ಆರ್ಟ್ನ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ೨೪ರಂದು ಶ್ರೀಲಕ್ಷಿ ನರಸಿಂಹ ಹೋಮ, ಸಂಜೆ ಶೃಂಗೇರಿ ಹೆಚ್. ಎಸ್. ನಾಗರಾಜ್‌ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ,  ೨೫ರಂದು ಶ್ರೀ ಲಕ್ಷ್ಮೀ ಹಯಗ್ರೀವ ಹೋಮ ಸಂಜೆ ಸಹನಾ ಚೇತನ್ ತಂಡದವರಿಂದ ಭರತ ನಾಟ್ಯ, 

೨೬ರಂದು ಶ್ರೀ ಸೂಕ್ತ ಹೋಮ, ಸಂಜೆ ಬೆಂಗಳೂರಿನ ಸೂಕ್ತ ಪಟ್ಟಾಭಿರಾಮನ್, ವಾಸುಕಿ ವೈಭವ್ ತಂಡದವರಿಂದ ಸಂಗೀತ ಸಂಜೆ, ೨೭ರಂದು ಶ್ರೀ ವೈನತೇಯ ಮಂತ್ರ ಹೋಮ ಸಂಜೆ ವಿದುಷಿ ಸಂಭ್ರಮ ಹೆಚ್. ಎಸ್. ತಂಡದವರಿAದ ಕರ್ನಾಟಕ ಶಾಸ್ತ್ರೀಯ ಸಂಗೀತ, ೨೮ರಂದು ವರಾಹಸ್ವಾಮಿ ಮಂತ್ರ ಹೋಮ, ಸಂಜೆ ಗಜೇಂದ್ರ ಮೋಕ್ಷ, ೨೯ರಂದು ಉತ್ಸವ ರಾಮರಿಗೆ ಅಭಿಷೇಕ, ಸಂಜೆ ವೈಭವದ ಸೀತಾ ಕಲ್ಯಾಣ ಮಹೋತ್ಸವ, ೩೦ರಂದು ವೈಕುಂಠ ಏಕಾದಶೀ, ಆನೆ ಉತ್ಸವ ಸಂಜೆ ಕುಮಾರ ಸ್ವಾಮಿ ಸಂಗಡಿಗರಿಂದ ನಾದ ವೈಭವ-ಸ್ಯಾಕ್ಯೋ ಫೋನ್ ವಾದನ, 

೩೧ರಂದು ತೀರ್ಥ ಸ್ನಾನ, ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ, ಜ.೦೧ರಂದು ಸುದರ್ಶನ ಹೋಮ, ಉರುಟಣೆ, ೧೦೮ ಸತ್ಯನಾರಾಯಣ ವ್ರತ, ೦೨ರಂದು ಪಲ್ಲಕ್ಕಿ ಉತ್ಸವ ಶ್ರೀವತ್ಸ ಸಂಗಡಿಗರಿಂದ ವೇಣುವಾದನ, ಶಯನೋತ್ಸವ, ೦೩ರಂದು ಶ್ರೀ ಧನ್ವಂತರಿ ಹೋಮ, ಸಂಜೆ ತುಂಗಾ ತೀರದಲ್ಲಿ ತೆಪ್ಪೋತ್ಸವ, ೦೪ರಂದು ಮಹಾಭಿಷೇಕ, ಮೋಹಿನಿ ಅಲಂಕಾರ, ಕೋಟಿ ತ್ರಯ ನಾಮಾರ್ಚನೆ ಸಮಾರೋಪ ಮತ್ತು ೦೫ರಂದು ರಾಮತಾರಕ ಮಂತ್ರ ಹೋಮ, ಮಹಾಭಿಷೇಕ, ಕಿರೀಟ ಸಮರ್ಪಣೆ ಹಾಗೂ ಸಂಜೆ ಪ್ರಾಕಾರೋತ್ಸವ ನಡೆಯಲಿದೆ ಎಂದು ತಿಳಿಸಿದರು. 

ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ವಿನಂತಿಸಿದೆ.

The grandeur of Sri Seetha Kalyana Centenary and the celebration of the Kotitraya Ramana marchna

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close