ಜನವರಿ 3 ರವರೆಗೆ ಕಾಯುತ್ತೇವೆ-ಕಾಂತೇಶ್ ಗಡುವು-We will wait until January 3rd - Kantesh deadline

 SUDDILIVE || SHIVAMOGGA

ಜನವರಿ 3 ರವರೆಗೆ ಕಾಯುತ್ತೇವೆ-ಕಾಂತೇಶ್ ಗಡುವು-We will wait until January 3rd - Kantesh deadline

Kantesh, deadline

ಮಹಾನಗರ ಪಾಲಿಕೆಯ ವೈಫಲ್ಯತೆಯನ್ನ ಖಂಡಿಸಿ ರಾಷ್ಟ್ರಭಕ್ತರ ಬಳಗ ಜ.3 ರಂದು ರಾಮಣ್ಣ ಶ್ರೇಷ್ಠಿಪಾರ್ಕ್ ನಿಂದ ಪಾಲಿಕೆಯ ವರೆಗೆ ಪ್ರತಿಭಟಬಾ ಮೆರವಣಿಗೆ ನಡೆಸಲು ತೀರ್ಮಾನಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಕೆ.ಈ.ಕಾಂತೇಶ್, ನಗರದಲ್ಲಿರುವ ಕಾಮಾಕ್ಷಿ ಬೀದಿ, ವಿನೋಬ ನಗರ, ಬಹುಮಹಡಿ ಕಟ್ಟಡಗಳ ಮಳಿಗೆಗಳು ಮಹಾನಗರ ಪಾಲಿಕೆಗೆ ಸೇರಿದ್ದು ಮಳಿಗೆ ಹಂಚಿಕೆ ಸರಿಯಾಗಿ ಆಗಿಲ್ಲ.  

ಡಿಸಿ ಕಚೇರಿ ಎದುರಿನ ಆಟದ ಮೈದಾನಕ್ಕೆ ನ್ಯಾಯಾಲಯ ಸೂಕ್ತ ವರದಿ ನೀಡುವಂತೆ ಕೇಳಿದರೂ ಪಾಲಿಕೆ ನ್ಯಾಯಾಲಯದ ಆದೇಶವನ್ನೇ ಪಾಲಿಸಿಲ್ಲ.  ಗೋವಿಂದಾಪುರ ಮತ್ತು ಗೋಪಿಶೆಟ್ಟಿ ಕೊಪ್ಪದಲ್ಲಿರುವ ಆಶ್ರಯ ಮನೆಗಳನ್ನ ಹಂಚಿಕೆ ಮಾಡಿಲ್ಲ. ರೋಟರಿ ಚಿತಾಗಾರದಲ್ಲಿ ದುರಸ್ತಿಕಾರ್ಯವಾಗಿಲ್ಲ. ಕೊಳಚೆ ಪ್ರದೇಶದ ನಿವಾಸಿಗೆ ಹಕ್ಕುಪತ್ರ ನೀಡದೆ ಹಿನ್ನಲೆಯಲ್ಲಿ ಜನವರಿ 3 ರವರೆಗೆ ರಾಷ್ಟ್ರಭಕ್ತರ ಬಳಗ ಪಾಲಿಕೆಯ ಬಗ್ಗೆ ತೀರ್ಮಾನವನ್ನ ಕಾಯಲಿದೆ. 

ಇ-ಸ್ವತ್ತಿನಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನ ನಿಯಂತ್ರಿಸಬೇಕು. ಗುಂಡಿ ಬಿದ್ದಿರುವ ರಸ್ತೆಯನ್ನ ದುರಸ್ಥಿಪಡಿಸಬೇಕು. 24/7 ಕುಡಿಯುವ ನೀರಿನ ಯೋಜನೆಯನ್ನ ಸೂಕ್ತವಾಗಿ ಜಾರಿಗೊಳಿಸಬೇಕು. ಈ ಎಲ್ಲಾ ಸಮಸ್ಯೆಗಳನ್ನ ಜನವರಿ 3 ರ ಒಳಗೆ ಆಗದಿದ್ದರೆ  ಪಾಲಿಕೆ ವಿರುದ್ಧ ಪ್ರತಿಭಟಿಸಲಾಗುವುದು ಎಂದರು.

We will wait until January 3rd - Kantesh deadline

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close