ಜಾಮೀನಿನ ಮೇಲೆ ಬಿಡುಗಡೆಯಾದವರ ಸ್ಟೇಟಸ್ ನಲ್ಲಿ ಇದೆಂತಹ ಹಾಡು?What song is in the status of those released on bail?

 SUDDILIVE || SHIVAMOGGA

ಜಾಮೀನಿನ ಮೇಲೆ ಬಿಡುಗಡೆಯಾದವರ ಸ್ಟೇಟಸ್ ನಲ್ಲಿ ಇದೆಂತಹ ಹಾಡು?What song is in the status of those released on bail?      

Status, Bail


ಜಾಮೀನಿನ ಮೇಲೆ ಬಿಡುಗಡೆಯಾದ  ಗೋಪಾಳದ ಮಂಜು  ವಾಟ್ಸಪ್ ಸ್ಟೇಟಸ್ ನಲ್ಲಿ ಇವರಿಬ್ವರನ್ನ ಯಾರೂ ಮುಟ್ಟಲ್ಲ ಮುಟ್ಟೋದು ಇಲ್ಲ ಎಂದು ಸಿನಿಮಾ ಹಾಡು ಹಾಕಿಕೊಂಡು ಬೈಕ್ ನಲ್ಲಿ ಸಾಗುತ್ತಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ. 

ನ.12 ರಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಳಿ 22 ವರ್ಷದ ಯುವಕನ ಮೇಲೆ ಹಲ್ಲೆ ನಡೆದ ಘಟನೆಯಲ್ಲಿ ಅಂದರ್ ಆಗಿದ್ದ ಗಗನ್ ಯಾನೆ ಕೋಟೆಗಂಗೂರಿನ ಸಲಗ ಮತ್ತು ಮಂಜು ಯಾನೆ ಗೋಪಾಳದ ಮಂಜು ಎರಡು ಮೂರು ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಿನ್ನೆ ಟಗರು ಸಿನಿಮಾ ಹಾಡಿನ ವಿಡಿಯೋವನ್ನ ಸ್ಟೇಟಸ್ ಗೆ ಹಾಕಿಕೊಂಡಿರುವುದು ವಿವಾದಕ್ಕೆ ಈಡಾಗಿದೆ.


ಇವರನ್ನಂತೂ ಯಾರೂ ಮುಟ್ಟಲ್ಲ, ಮುಟ್ಟೋದಿಲ್ಲ ಎಂಬ ಸಂಭಾಷಣೆಯೊಂದಿಗೆ ವಿಡಿಯೋ ಅಪ್ಲೋಡ್ ಆಗಿರುವುದು ವಿವಾದಕ್ಕೆ ಕಾರಣವಾಗಿದೆ. 


ಘಟನೆ ಏನು 


ನ.12 ರಂದು ಜಗಳ ಬಿಡಿಸಲು ಹೋದ ಯುವಕನ ಮೇಲೆ ಇಬ್ಬರು ಹಲ್ಲೆ ನಡೆಸಿದ್ದು ಈ ಹಲ್ಲೆಗೆ ಹುಡುಗರನ್ನ ಕಳುಹಿಸಿಕೊಟ್ಟಿದ್ದು ಕೋಟೆಗಂಗೂರಿನ ಸಲಗ (ಗಗನ್) ಎಂದು ಆರೋಪಿಸಲಾಗಿತ್ತು. 

ಸಹ್ಯಾದ್ರಿ ಕಾಲೇಜಿನ ಬಳಿ 22 ವರ್ಷದ ಯುವಕ ಚಹಕುಡಿಯುವಾಗ ಕೋಟೆಗಂಗೂರಿನ ಸಲಗ ಕರೆ ಮಾಡಿ ಕೌಶಿಕ್ ಮತ್ತೋರ್ವನ ನಡುವೆ ನಡೆದ ಗಲಾಟೆ ಬಗ್ಗೆ ವಿಚಾರಿಸಿದ್ದಾನೆ. ನಂತರ ಬೈಕ್ ನಿಂದ ಹೊರಡುವಾಗ ಗೋಪಾಳದ ಮಂಜು ಮತ್ತು ಚೇತು ಅಡ್ಡಹಾಕಿ ತಡೆದಿದ್ದರು. 

ಕೌಶಿಕ್ ಗೆ ಹೊಡೆದಿದ್ದೇಕೆ ಎಂದು ಯುವಕನನ್ನ ಪ್ರಶ್ನಿಸಿದ್ದಾರೆ. ಕೌಶಿಕ್ ಗೆ ಹೊಡೆದಿಲ್ಲ. ಜಗಳ ಬಿಡಿಸಿದ್ದು ಎಂದು ಯುವಕ ಹೇಳಿದರೂ ಆತನ ಮೇಲೆ ಚಾಕುವಿನಂತಹ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ. ನಂತರ ಆತನ ಮುಖಕ್ಕೆ ಹಲ್ಲೆ ನಡೆಸಲಾಗಿದೆ. ಅಲ್ಲಿಗೆ ಬಂದ ಸ್ನೇಹಿತನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಆತ ತಪ್ಪಿಸಿಕೊಂಡಿದ್ದನು. 

ಈ ವೇಳೆ ಜನರು ಬರುವುದನ್ನ ಗೋಪಾಳದ ಮಂಜ ಮತ್ತು ಚೇತು ಬೆದರಿಕೆ ಹಾಕಿ ಹೋಗಿದ್ದರು. 22 ವರ್ಷದ ಯುವಕ ಮೆಗ್ಗಾನ್ ಗೆ ದಾಖಲಾಗಿದ್ದು ಗೋಪಾಳದ ಮಂಜ, ಚೇತು ಮತ್ತು ಕೋಟೆಗಂಗೂರಿನ ಸಲಗ (ಗಗನ್)  ನ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವಕ ಲಕ್ಕಿನ್ ಕೊಪ್ಪದ ನಿವಾಸಿಯಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಇಂಟರ್ವ್ಯೂ ಗೆ ಹೋಗಬೇಕಿದ್ದ ಯುವಕ ರಿಪ್ಪನ್ ಪೇಟೆಗೆ ಬರಲು ಹೇಳಲಾಗಿತ್ತು.

ರಿಪ್ಪನ್ ಪೇಟೆಗೆ ಹೋಗಲು ನಿರಾಕರಿಸಿದ ಯುವಕನಿಗೆ ಸ್ನೇಹಿತನೊಬ್ಬ ಮತ್ತೂರು ಮೋಟಾಳ್ ಚೌಡಮ್ಮ ದೇವಸ್ಥಾನದ ಬಳಿ ಬರಲು ಹೇಳಿದ್ದರಿಂದ ಅಲ್ಲಿಗೆ ಹೋದಾಗ ಕೌಶಿ ಮತ್ತು ಸ್ನೇಹಿತನ ಜೊತೆ ಮಾತಿಗೆ ಮಾತು ಜೋರಾಗಿ ನಡೆಯುತ್ತಿತ್ತು. ಇದನ್ನ ಬಿಡಿಸಿ ಸಹ್ಯಾದ್ರಿ ಕಾಲೇಜಿನ ಬಳಿ ಟೀ ಕುಡಿಯುವಾಗ ಈ ಘಟನೆ ನಡೆದಿತ್ತು. ನ.15 ರಂದು ಗಗನ್ ಮತ್ತು ಮಂಜು ಅರೆಸ್ಟ್ ಆಗಿದ್ದರು. 

What song is in the status of those released on bail

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close