ಡೆವಿಲ್ ಸಿನಿಮಾ ಬಿಡುಗಡೆಗೆ ಶಿವಮೊಗ್ಗದಲ್ಲಿ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ- Fans celebrate the release of Devil movie in Shivamogga

SUDDILIVE || SHIVAMOGGA

ಡೆವಿಲ್ ಸಿನಿಮಾ ಬಿಡುಗಡೆಗೆ ಶಿವಮೊಗ್ಗದಲ್ಲಿ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ- Fans celebrate the release of Devil movie in Shivamogga  

Devil, Darshan

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಅಭಿಮಾನಿಗಳು ಚಲನಚಿತ್ರ ಮಂದಿರದಲ್ಲಿ ಅಭಿಮಾನ ಮೆರೆದಿದ್ದಾರೆ. ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಎರಡು ವರ್ಷದ ಬಳಿಕ ಬಿಡುಗಡೆಯಾಗುತ್ತಿದ್ದು ಟ್ರೈಲರ್ ನಲ್ಲಿ ಧೂಳೆಬ್ಬಿಸಿತ್ತು.

ಡೆವಿಲ್ ಸಿನಿಮಾ ಟ್ರೈಲರ್ ಎರಡೇ ದಿನಗಳಲ್ಲಿ 11 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಎರಡು ವರ್ಷಗಳ ನಂತರ ದರ್ಶನ್ ಅವರನ್ನ ತೆರೆಮೇಲೆ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾವನ್ನ ಡಿ.25 ರಂದು ರಿಲೀಸ್ ಆಗುತ್ತಿರುವ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಜೊತೆ ವೀವ್ಸ್ ಲೆಕ್ಕಾಚಾರದಲ್ಲಿ ತುಲನೆ ಮಾಡಲಾಗಿತ್ತು. ಇಬ್ಬರು ನಟರ ಫ್ಯಾನ್ಸ್ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಇದೆ. 


ಇತ್ತ ಶಿವಮೊಗ್ಗದ ಎರಡು ಚಲನ ಚಿತ್ರಮಂದಿರ ಮತ್ತು ಒಂದು ಮಾಲ್ ನಲ್ಲಿ ನಾಳೆ ಬಿಡುಗಡೆಯಾಗಲಿದೆ. ನಾಳೆ ವೀರಭದ್ರ ಚಲನಚಿತ್ರದಲ್ಲಿ ಫ್ಯಾನ್ಸ್ ಶೋ ಇದಾವೆ. ಈಗಾಗಲೇ ಚಲನಚಿತ್ರ ಮಂದಿರದ ಎದುರು ಕಟೌಟ್ ಹಾಕಿ ದೀಪದ ಅಲಂಕಾರ ಮುಗಿಸಲಾಗಿದೆ. ಚಲನಚಿತ್ರಮಂದಿರವನ್ನ ದರ್ಶನ್ ಬ್ಯಾನರ್ ನಲ್ಲೇ ಮುಳುಗಿಸಲಾಗಿದೆ.  ದರ್ಶನ್ ಅವರ 25 ಅಡಿ ಕಟೌಟ್ ನಿರ್ಮಿಸಲಾಗಿದೆ. ಸಂಜೆ ಕಟೌಟ್ ಕೂರಿಸಲು ಸಿದ್ದತೆಯೂ ನಡೆದಿದೆ. ಅದನ್ನ ಸಂಭ್ರಮಾಚರಣೆಯ ರೀತಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.


ಇದರ ಬೆನ್ನಲ್ಲೇ ಇಂದು ಸಂಜೆ ದರ್ಶನ್ ಅಭಿಮಾನಿಗಳು ವೀರಭದ್ರ ಚಲನ ಚಿತ್ರ ಮಂದಿರದಲ್ಲಿ ಸಂಭ್ರಮಾಚರಣೆ ನಡೆಸಿ ಕೇಕ್ ಕತ್ತರಿಸಲಿದ್ದಾರೆ. ಡಿಜೆ ಡೊಳ್ಳು ಕುಣಿತ, ಬೈಕ್ ರ‌್ಯಾಲಿ ನಡೆಯಲಿದೆ.  ಒಟ್ಟಿನಲ್ಲಿ ಡಿ ಬಾಸ್ ಫ್ಯಾನ್ಸ್ ತಮ್ಮ‌ನೆಚ್ಚಿನ ನಟನ ಸಿನಿಮಾ ಬಿಡುಗಡೆಗೆ ಹಬ್ಬದ ವಾತಾವರಣವನ್ನೇ ಶಿವಮೊಗ್ಗದಲ್ಲಿ ನಿರ್ಮಿಸಿದ್ದಾರೆ. 

Fans celebrate the release of Devil movie in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close