ನಾಳೆ ಅಬ್ಬರಿಸಲಿದೆಯಾ ಮಾರ್ಕ್? Will the mark be unveiled tomorrow?

SUDDILIVE || SHIVAMOGGA

ನಾಳೆ ಅಬ್ಬರಿಸಲಿದೆಯಾ ಮಾರ್ಕ್? Will the mark be unveiled tomorrow?  

Mark, unveiled


ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ನಾಳೆ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದ್ದು ಈಗಾಗಲೇ ಅವರ ಅಭಿಮಾನಿ ಬಳಗ ಹಬ್ಬದ ವಾತಾವರಣವನ್ನೇ ಮಲ್ಲಿಕಾರ್ಜುನ ಚಲನಚಿತ್ರ ಮಂದಿರ ದಲ್ಲಿ ನಿರ್ಮಿಸಿದ್ದಾರೆ

ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು ಈಗಾಗಲೇ ರಾಮಣ್ಣ ಶೆಟ್ಟಿ ಪಾರ್ಕಿನಿಂದ 25 ಅಡಿ ಎತ್ತರದ ಸುದೀಪ್ ಅವರ ಪಿಒಪಿಯಲ್ಲಿ ನಿರ್ಮಿಸಿರುವ ಪ್ರತಿಮೆಯನ್ನು ಹೊತ್ತುಕೊಂಡು ಮೆರವಣಿಗೆ ಮೂಲಕ ಮಲ್ಲಿಕಾರ್ಜುನ ಚಲನಚಿತ್ರ ಮಂದಿರದ ಬಳಿ ತರಲಾಗಿದೆ. ಇಲ್ಲಿ ಎರಡು ತಂಡಗಳು ನಾಳೆಯ ನೆಚ್ಚಿನ ನಟ ಸುದೀಪ ಅವರ ಚಲನಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಒಂದು ತಂಡ ಕಿಚ್ಚ ಸುದೀಪ್ ಪ್ರತಿಮೆಯನ್ನು ಹೊತ್ತು ತಂದರೆ ಮತ್ತೊಂದು ತಂಡ ಚಲನಚಿತ್ರ ಮಂದಿರದಲ್ಲಿಯೇ ಡಿಜೆ ಹಾಡುಗಳನ್ನು ಹಾಕಿ ಸಂಭ್ರಮಾಚರಣೆಯಲ್ಲಿ ತೊಡಗಿದೆ.

ಈಗಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಲ್ಲಿಕಾರ್ಜುನ ಚಲನಚಿತ್ರ ಮಂದಿರದ ಬಳಿ ಫ್ಲೆಕ್ಸ್ ಬ್ಯಾನರ್ ಗಳನ್ನ ನಿರ್ಮಿಸಿ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ನಾಳೆ ಫ್ಯಾನ್ಸ್ ಶೋವನ್ನ ಚಲನಚಿತ್ರ ಮಂದಿರದಲ್ಲಿ ಬೆಳಿಗ್ಗೆ 6-30 ಕ್ಕೆ ಇಟ್ಟುಕೊಳ್ಳಲಾಗಿದೆ. ಪಟಾಕಿ ಸಿಡಿಸಿ ಸುದೀಪ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸುದೀಪ್ ಸಿನಿಮಾ ಬಿಡುಗಡೆಯ ಕಾತುರದಲ್ಲಿದ್ದಾರೆ. 

ಮಾರ್ಕ್ ನಟ ಸುದೀಪ ಅಭಿನಯದ 47ನೇ ಸಿನಿಮಾ ಆಗಿದೆ ಚಿತ್ರದಲ್ಲಿ ಅಜಯ್ ಮಾರ್ಕಂಡೇ ಎಂಬ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಮ್ಯಾಕ್ಸ್ ಚಲನಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ ಸತ್ಯ ಜ್ಯೋತಿ ಫಿಲಂ ಸಿನಿಮಾ ವನ್ನು ನಿರ್ಮಾಣ ಮಾಡುತ್ತಿದೆ ನಟಿಸಿದ್ದಾರೆ ಈಗಾಗಲೇ ಸಿನಿಮಾದ ಟ್ರಯಲ್ ಭರ್ಜರಿಯಾಗಿ ಸೌಂಡ್ ಮಾಡಿದೆ.

Will the mark be unveiled tomorrow?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close