ಚಿತ್ರದುರ್ಗದ ಬಳಿ ಸೀಬರ್ಡ್ ಬಸ್ ಕಂಟೇನರ್ ಗೆ ಡಿಕ್ಕಿ 9 ಮಂದಿ ಸಜೀವ ದಹನ- 9 people burnt alive after Seabird bus collides with container near Chitradurga

 SUDDILIVE || CHITRADURGA

ಚಿತ್ರದುರ್ಗದ ಬಳಿ ಸೀಬರ್ಡ್ ಬಸ್ ಕಂಟೇನರ್ ಗೆ ಡಿಕ್ಕಿ 9 ಮಂದಿ ಸಜೀವ ದಹನ-9 people burnt alive after Seabird bus collides with container near Chitradurga

Seabird, accident

Seabird, accident


ಕಂಟೇನರ್‌ ಲಾರಿ ಡಿಕ್ಕಿ ಹೊಡೆದು ಸೀಬರ್ಡ್‌ ಕಂಪನಿಯ ಬಸ್‌  ಹೊತ್ತಿ ಉರಿದಿದೆ. ಬಸ್ಸು ಬೆಂಗಳೂರಿನಿಂದ  ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿತ್ತು. ಘಟನೆಯಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊರ್ಲತ್ತು ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಂಟೇನರ್‌ ಲಾರಿ ಡಿವೈಡರ್‌ ಹಾರಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಬಸ್‌ ಹೊರಟಿತ್ತು. ರಾತ್ರಿ 2 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 36 ಸೀಟುಗಳಿದ್ದವು.  ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡಿಕೊಂಡಿದ್ದರು. ಈ ಪೈಕಿ 25 ಪ್ರಯಾಣಿಕರು ಗೋಕರ್ಣಕ್ಕೆ ತೆರಳುತ್ತಿದ್ದರು. ಕುಮಟಾಗೆ ಇಬ್ಬರು, ಶಿವಮೊಗ್ಗಕ್ಕೆ ಇಬ್ಬರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಐಜಿಪಿ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.


ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಐಜಿಪಿ ರವಿಕಾಂತೇಗೌಡ, ಲಾರಿಯು ಬಸ್ಸಿನ ಡಿಸೇಲ್‌ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದ ಬಂದಿದೆ. ಈವರೆಗೆ ನಮಗೆ 9 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಎಂಟು ಮಂದಿ ಬಸ್ಸಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಕಂಟೇನರ್‌ ಲಾರಿಯ ಚಾಲಕ ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೈಕಿ 12 ಮಂದಿ ಹಿರಿಯೂರು, 9 ಮಂದಿ ಶಿರಾ, ಮೂವರು ತುಮಕೂರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.

ಒಬ್ಬ ಪ್ರಯಾಣಿಕರಿಗೆ ಗಂಭೀರವಾಗಿ ಸುಟ್ಟ ಗಾಯವಾಗಿದೆ. ಆದ್ದರಿಂದ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲು ಸಿದ್ದತೆಯಾಗುತ್ತಿದೆ. ಉಳಿದೆಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಾಲಕ, ನಿರ್ವಾಹಕ ಸೇರಿ ಬಸ್ಸಿನಲ್ಲಿ ಒಟ್ಟು 28 ಮಂದಿ ಇದ್ದರು. ಅದರಲ್ಲಿ ಒಂದು ಮಗು ಸೇರಿ 9 ಮಂದಿ ಸಾವನ್ನಪ್ಪಿರಬಹುದು ಎಂದು ಈತನಕ ಮಾಹಿತಿ ಇದೆ. ಮೃತದೇಹಗಳನ್ನು ಪರಿಶೀಲಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಡಿಎನ್‌ಎ ಪರೀಕ್ಷೆಗೆ ಸಾಕ್ಷಿ ಸಂಗ್ರಹಿಸಲಾಗುತ್ತದೆ. ಬೆಂಗಳೂರಿನಿಂದಲು ತಜ್ಞರ ತಂಡ ಆಗಮಿಸಿದೆ ಎಂದರು.

ಶಿವಮೊಗ್ಗದ ವಾದಿ-ಎ-ಹುದಾ ನಿವಾಸಿಗಳ ಮೊಬೈಲ್ ಸ್ವಿಚ್ ಆಫ್

ಶಿವಮೊಗ್ಗ ವಾದಿ-ಎ-ಹುದಾ ನಿವಾಸಿಗಳು ಈ ಬಸ್ ನಲ್ಲಿ ಪ್ರಯಾಣಿಸುತ್ತಿರುವುದಾಗಿ ತಿಳಿದು ಬಂದಿದೆ. ಆದರೆ ಇವರ ಫೊನ್ ಸ್ವಿಚ್ ಆಪ್ ಬರುತ್ತಿದೆ ಎನ್ನಲಾಗಿದೆ. ಉಮ್ರಾ ಯಾತ್ರೆಗೆ ತೆರಳಿ ವಾಪಾಸ್ ಶಿವಮೊಗ್ಗಕ್ಕೆ ಇದೇ ಬಸ್ ನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಮುಸ್ರತ್ ಉನ್ನೀಸಾ ಮತ್ತು ಸಯ್ಯದ್ ಜಮೀರ್ ಇವರ ಸ್ವಿಚ್ ಆಫ್ ಬಂದಿದೆ. ಇವರು ಸುರಕ್ಷಿತವಾಗಿ ಶಿವಮೊಗ್ಗಕ್ಕೆ ಬಂದಿದ್ದಾರಾ ಅಥವಾ ಘಟನೆಯಲ್ಲಿ ಸಿಲುಕಿಕೊಂಡಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಬೇಕಿತ್ತು. 

9 people burnt alive after Seabird bus collides with container near Chitradurga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close