ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದ ಯುವಕರಿಂದ ಪೌರಕಾರ್ಮಿಕನ ಮೇಲೆ ಹಲ್ಲೆ- A civil servant was attacked by youths speaking in Urdu

 SUDDILIVE || SHIVAMOGGA

ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದ ಯುವಕರಿಂದ ಪೌರಕಾರ್ಮಿಕನ ಮೇಲೆ ಹಲ್ಲೆ- A civil servant was attacked by youths speaking in Urdu    

Civil, servant


ಉರ್ದು ಭಾಷೆಯಲ್ಲಿ ಮಾತನಾಡುವ ಯುವಕರು ಬೈಕ್ ನಲ್ಲಿ ಬಂದು ಹೊರಗುತ್ತಿಗೆ ಪೌರಕಾರ್ಮಿಕರನ್ನ ಕ್ಷುಲ್ಲಕ ಕಾರಣಕ್ಕೆ ಥಳಿಸಿರುವ ಘಟನೆ ನಿನ್ನೆ ಬೆಳಿಗ್ಗೆ ಲಕ್ಷ್ಮಿ ಚಲನಚಿತ್ರ ಮಂದಿರದ ಕೆಳಗಿನ ಹೊಸಮನೆಯ RNR ಶಾಮಿಯಾನ ರಸ್ತೆಯಲ್ಲಿ ನಡೆದಿದೆ. 

ಕಳೆದೆರಡು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇರೆಗೆ ಪೌರ ಕಾರ್ಮಿಕ ಕೆಲಸ ಮಾಡುತ್ತಿದ್ದ ಅಂಜನಿ ಎಂಬ 53 ವರ್ಷ ವಯಸ್ಸಿನವರು ಬೆಳಿಗ್ಗೆ ಕರ್ತವ್ಯದಲ್ಲಿ ತೊಡಗಿದ್ದಾಗ ಬೈಕ್ ನಲ್ಲಿ ಬಂದ ನಾಲ್ವರು  ಸುಅರು 18 ವರ್ಷದಿಂದ 20 ವರ್ಷದ ಯುವಕರು ಚಮ್ಕಾಯಿಸಿದ್ದಾರೆ. 

ಸರ್ರನೆ ಅಂಜನಿಯವರ ಪಕ್ಕದಲ್ಲಿಯೇ ಬೈಕ್ ಚಲಿಸಿಕೊಂಡು ಬಂದ ಯುವಕರು ಸೌಂಡ್ ಬಾಕ್ಸ್ ನಲ್ಲಿ ಹಾಡನ್ನ ಹಾಕಿಕೊಂಡು ಹೋದ ಪರಿಣಾಮ ಒಮ್ಮಲೆ ಶಾಕ್ ಆದ ಪೌರಕಾರ್ಮಿಕ ಗಾಬರಿಯಿಂದ ಏಯ್ ಎಂದ ಅಂಜನಿಗೆ ಅಪರಿಚಿತ ಯುವಕರು ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. 

ಅಲ್ಲೇ ಸ್ವಲ್ಪ ದೂರದಲ್ಲಿಯೇ ರವಿಕಿರಣ್ ನಿಮ್ಮ ತಂದೆಯಂತಹ ವಯಸ್ಸಾಗಿದೆ ಅವರಿಗೆ ಬೈಯ್ತೀರಾ ಎಂದು ಬುದ್ದಿಹೇಳಿದ್ದಕ್ಕೆ ಯುವಕರು ಮತ್ತೆ 53 ವರ್ಷದ ಅಂಜನಿಯ ಬಳಿ ಬಂದು ನಮಗೆ ಬೈಯ್ತೀರಾ ಎಂದು ಹಲ್ಲೆ ನಡೆಸಿದ್ದಾರೆ. ಬಾಯಿ, ತುಟಿಗೆ ತಗುಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. 

ಇದನ್ನ ಕಂಡು ಇತರೆ ಪೌರಕಾರ್ಮಿಕರು ಜಗಳ ಬಿಡಿಸಲು ಮುಂದಾದಾಗ ಯುವಕರು ಪರಾರಿಯಾಗಿದ್ದಾರೆ. ಉರ್ದು ಭಾಷೆ ಮಾತನಾಡುತ್ತಿದ್ದ ಯುವಕರು ಕ್ಷುಲ್ಲಕ ಕಾರಣಕ್ಕೆ ಪೌರಕಾರ್ಮಿಕನ ಜೊತೆ ಜಗಳ ತೆಗೆದು ಹಲ್ಲೆ ನಡೆಸಿದ್ದು ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. 

A civil servant was attacked by youths speaking in Urdu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close