ದಿಡೀರನೆ ಶಿವನಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ- Suddenly, a human chain was formed at Shivani Circle and protested

SUDDILIVE || BHADRAVATHI

ದಿಡೀರನೆ ಶಿವನಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ- Suddenly, a human chain was formed at Shivani Circle and protested 

Human, chain

ಭದ್ರಾವತಿಯಿಂದ ತರೀಕೆರೆಗೆ ತೆರಳುವ ರಸ್ತೆಯಲ್ಲಿರುವ ಶಿವನಿ ಕ್ರಾಸ್ ಎಂಬ ಹೆಸರಿನ ಬದಲಿಗೆ ನಗರಸಭೆಯಿಂದ ಕಳೆದೆರಡು ದಿನಗಳ ಹಿಂದೆ ಮದರ್ ತೆರೇಸಾ ಎಂಬ ನಾಮಫಲಕವನ್ನು ಅನಾವರಣಗೊಳಿಸಿರುವುದನ್ನು ಖಂಡಿಸಿ ಶಿವನಿ ರಸ್ತೆ ಉದ್ದಮ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಗುಡ್ಡದ ಕೆಂಚಮ್ಮ ದೇವಸ್ಥಾನದ ರಸ್ತೆಯ ವೃತ್ತದ ಸಾರ್ವಜನಿಕರು ಸೋಮವಾರ ದಿಡೀರನೆ ಶಿವನಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ  ರಸ್ತೆ ತಡೆ ನಡೆಸಿ ನಗರಸಭೆಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಪೌರಾಯುಕ್ತರಿಗೆ ನಾಮಫಲಕವನ್ನು ತೆರವುಗೊಳಿಸುವಂತೆ ಮನವಿಯನ್ನು ನೀಡಿದರು 

 ಕಳೆದ 50 60 ವರ್ಷಗಳಿಂದ ಶಿವನಿ ಕ್ರಾಸ್ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದ ವೃತಕ್ಕೆ ಕಳೆದೆರಡು ದಿನಗಳ ಹಿಂದೆ ನಗರಸಭೆಯವರು ಸ್ಥಳೀಯ ಸಾರ್ವಜನಿಕರಿಂದ ಮಾಹಿತಿ ಪಡೆಯದೆ, ನಾಮಫಲಕವನ್ನು ಅಳವಡಿಸಿರುವುದು ಖಂಡನೀಯ ಎಂದರಲ್ಲದೆ ಆ ಭಾಗದ ಸುತ್ತಮುತ್ತಲು ಯಾವುದೇ ಚರ್ಚ್ ಗಳು ಇಲ್ಲದಿರುವುದು ಅಥವಾ ಕ್ರೈಸ್ತ ಸಮುದಾಯಕ್ಕೆ ಸೇರಿದ ಮನೆಗಳು ಇಲ್ಲದಿರುವುದು ಹೀಗಿದ್ದು ನಗರಸಭೆಯವರು ದಿಢೀರನೆ ತೀರ್ಮಾನ ತೆಗೆದುಕೊಂಡು ಮದರ್ ತೆರೆಸಾ  ರಸ್ತೆ ಎಂದು ನಾಮಫಲಕವನ್ನು ಅನಾವರಣಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.



ಮನವಿಯನ್ನು ಸ್ವೀಕರಿಸಿದ ಪೌರಾಯುಕ್ತರು ನಗರಸಭೆಯಿಂದ ನಡೆಯುವ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಗೆ ತರುವುದಾಗಿ ಭರವಸೆ ನೀಡಿದರು  ಪ್ರತಿಭಟನೆಯಲ್ಲಿ ಚಂದ್ರು ಭಾನುಪ್ರಕಾಶ್ ವೇಲು ಮುನಿರಾಜ್ ಗುರೂಜಿ ಧನುಷ್ ಫೋಕಸ್ ಮಂಜು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Suddenly, a human chain was formed at Shivani Circle and protested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close