ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್-Accused Andar absconded without appearing in court

SUDDILIVE || SHIVAMOGGA

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್-Accused Andar absconded without appearing in court  

Accused, andar


4 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಘನ ನ್ಯಾಯಾಲಯಕ್ಕೆ ಹಾಜರಾಗದ 26 ವರ್ಷದ ಆರೋಪಿಯನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 03 ಕಳ್ಳತನ ಪ್ರಕರಣಗಳು ಮತ್ತು ವಿನೋಬನಗರ ಪೊಲೀಸ್ ಠಾಣೆಯ 01  ಕಳ್ಳತನ ಪ್ರಕರಣ ಸೇರಿ ಒಟ್ಟು 04 ಪ್ರಕರಣಗಳಲ್ಲಿ ಆರೋಪಿಯಾದ ಮೆಹದಿ ನಗರದ ನಿವಾಸಿ ಮೊಹಮ್ಮದ್ ಕರೀಂ, (26)ಯನ್ನ ಬಂಧಿಸಲಾಗಿದೆ.  

ಈತನು ಕಳೆದ 05 ವರ್ಷಗಳಿಂದ ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಆರೋಪಿತನ ವಿರುದ್ಧ ಘನ 3ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗವು ದಸ್ತಗಿರಿ ವಾರೆಂಟ್ ಅನ್ನು ಜಾರಿ ಮಾಡಿರುತ್ತದೆ.  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ ಕಾಂಡಿಕೆ ರವರ ನೇತೃತ್ವದ ಪ್ರೋಸೆಸ್ ಸಿಬ್ಬಂದಿಗಳಾದ ದಿವಾಕರ್ ಸಿ.ಹೆಚ್.ಸಿ- 311 ಮತ್ತು ವೀರೇಶ, ಸಿ.ಹೆಚ್.ಸಿ – 463  ರವರುಗಳ ತಂಡವು ಆರೋಪಿಯನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

Accused Andar absconded without appearing in court

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close