ಜನವರಿ 22 ಮತ್ತು 23 ರಂದು ವಿದ್ಯುತ್ ವ್ಯತ್ಯಯ- Power outage on January 22nd and 23rd

SUDDILIVE || SHIVAMOGGA

ಜನವರಿ 22 ಮತ್ತು 23 ರಂದು ವಿದ್ಯುತ್ ವ್ಯತ್ಯಯ- Power outage on January 22nd and 23rd  

Power, Outage

ಶಿವಮೊಗ್ಗದಲ್ಲಿ ನಗರದ ಕೆಲವೆಡೆ ಜನವರಿ 22ಮತ್ತು 23 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ 2 ರ ವ್ಯಾಪ್ತಿಯಲ್ಲಿ ಜ. 22 ರಂದು ಬೆಳಗ್ಗೆ 10.00 ರಿಂದ ಮ 2.00 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.  

ವೀರಭದ್ರೇಶ್ವರ ಟಾಕೀಸ್ ನಿಂದ ಡಿ.ವಿ.ಎಸ್ ಕಾಲೇಜ್ ವರೆಗೆ ವಿದ್ಯುತ್ ಕಂಬ ತೆರವು ಕಾಮಗಾರಿ ಹಮ್ಮಿಕೊಂಡಿದ್ದು, ಸರ್ ಎಂ.ವಿ.ರಸ್ತೆ, ಲೂರ್ದುನಗರ, ಕಾನ್ವೆಂಟ್ ರಸ್ತೆ, ವೀರಭದ್ರೇಶ್ವರ ಟಾಕೀಸ್ ಹತ್ತಿರ, ಬಿ.ಹೆಚ್.ರಸ್ತೆ, ಗಾಂಧಿ ಪಾರ್ಕ್ ಮತ್ತು ಮಹಾನಗರ ಪಾಲಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಜನವರಿ 23

ಶಿವಮೊಗ್ಗ ಸಂತೇಕಡೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ  ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಜ. 23 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಉಂಬ್ಳೇಬೈಲು, ಲಕ್ಕಿನಕೊಪ್ಪ, ಮತ್ತೂರು ಕುಡಿಯುವ ನೀರಿನ ಘಟಕ, ಸಂತೇಕಡೂರು, ಗಣಿದಾಳು ಮತ್ತು ವಿಮಾನ ನಿಲ್ದಾಣ ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೆಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು, ಸಿದ್ದಮಾಜಿ ಹೊಸೂರು, ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Power outage on January 23

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close