ನೂತನ ಬಸ್ ನಿಲ್ದಾಣಕ್ಕಾಗಿ ಅಹೋರಾತ್ರಿ ಧರಣಿ- All-night sit-in for new bus stand

 SUDDILIVE || NAGARA

ನೂತನ ಬಸ್ ನಿಲ್ದಾಣಕ್ಕಾಗಿ ಅಹೋರಾತ್ರಿ ಧರಣಿ- All-night sit-in for new bus stand      

New, busstand

ನಗರದಲ್ಲಿ ಹಾಳುಬಿದ್ದಿರುವ ಬಸ್ ನಿಲ್ದಾಣವನ್ನ ತೆಗೆದು ನೂತನ ಬಸ್ ನಿಲ್ದಾಣ ನಿರ್ಮಿಸುವಂತೆ ಆಗ್ರಹಿಸಿ ಬಿಜೆಪಿಯ ನಗರ ಹೋಬಳಿಯ ಯುವಕರು ಅಹೋರಾತ್ರಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ  ನೂತನ ಬಸ್ ನಿಲ್ದಾಣದ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು ಸ್ಥಳಿಯ ಗ್ರಾಮ ಪಂಚಾಯತ್ ಆ ಸಂದರ್ಭದಲ್ಲಿ ಕೆಲ ಪಂಚಾಯತ್ ಸದಸ್ಯರ ವೈಯಕ್ತಿಕ ಹಿತಾಸಕ್ತಿಯಿಂದ Noc ಕೊಡದೆ ಅಕ್ರಮವೆಸಿಗಿದೆ ಎಂದು ಪಕ್ಷ ಆರೋಪಿಸಿದೆ.

ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ಕೊಡಬೇಕು ಹಾಗೂ ಈಗಿರುವ ಪಾಳುಬಿದ್ದ ಬಸ್ ನಿಲ್ದಾಣ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯರೀತಿಯಲ್ಲಿ ಇಲ್ಲ ಎಂಬುದು ಮೇಲ್ನೊಟಕ್ಕೆ ಅನಿಸುತ್ತದೆ ಮುಂದೆ ಇದು ಕುಸಿದು ಬಿದ್ದರೆ ಜನ ಸಾಮಾನ್ಯರ ಜೀವಕ್ಕೆ ಯಾರು ಹೊಣೆ ಅನ್ನುವುದನ್ನು ಅಧಿಕಾರಿಗಳು ತಿಳಿಸಬೇಕು. ಸರ್ಕಾರ ಕೂಡಲೆ ನೂತನ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಸಲಾಗಿದೆ.

ಪ್ರತಿಭಟನೆಯಲ್ಲಿ ನಗರ ನಿತಿನ್, ರಾಜೇಶ್ ಹಿರಿಮನೆ, ಶ್ರಿಕಾಂತ್ ದುಬಾರತಟ್ಟಿ, ಕೃಷ್ಣಮೂರ್ತಿ, ಉಮೇಶ್, ಸಂತೋಷ ಚಿಕ್ಕಪೇಟೆ, ರಮೇಶ್ ಚಿಕ್ಕಪೇಟೆ, ದೇವರಾಜ್, ವಿನಾಯಕ್ ಚಕ್ಕಾರು, ಕೀರ್ತಿ, ಅನಿಲ್, ಅನಿಲ್ ದುಬಾರತಟ್ಟಿ, ನಾಗೇಶ್ ಭಾಗವಹಿಸಿದ್ದರು. 

All-night sit-in for new bus stand 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close