ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ವೆಬ್ ಸೈಟ್ ಬಿಡುಗಡೆ- National level ram fight poster website launched

 SUDDILIVE || SHIVAMOGGA

ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ವೆಬ್ ಸೈಟ್ ಬಿಡುಗಡೆ- National level ram fight poster website launched    

Ram, fight

ಕೋಟೆ ಮಾರಿಕಾಂಬ ಜಾತ್ರ ಮಹೋತ್ಸದ ಅಂಗವಾಗಿ ರಾಷ್ಟ್ರಮಟ್ಟದ ಟಗರು ಕಾಳಗ ಫೆ.15 ರಂದು ನಡೆಯಲಿದೆ. ಈ ಟಗರು ಕಾಳಗದ ಹಿನ್ನಲೆಯಲ್ಲಿ ವೆಬ್ ಸೈಟ್, ಲಾಂಚನಬಿಡುಗಡೆ ಮತ್ತು ಸಾಮಾಜಿಕ ಜಾಲತಾಣವನ್ನ ಇಂದು ನಮ್ಮೂರ ಬಳಗದ ವತಿಯಿಂದ ಬಿಡುಗಡೆ ಮಾಡಲಾಗಿದೆ. 

ಕೋಟೆ ಮಾರಿಕಾಂಬ ಜಾತ್ರ ಮಹೋತ್ಸವವು ಫೆ.23 ರಿಂದ ನಡೆಯಲಿದೆ. ಅದರ ಅಂಗವಾಗಿ ರಾಷ್ಟ್ರಮಟ್ಟದ ಟಗರು ಕಾಳದಲ್ಲಿ ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು, 6 ಹಲ್ಲಿನ ಟಗರು ಮತ್ತು 8 ಹಲ್ಲಿನ ಟಗರುಗಳ ಕಾಳಗ ನಡೆಯಲಿದೆ. ಇವುಗಳಲ್ಲಿ ಗೆದ್ದ ಟಗರುಗಳಿಗೆ ಸಂಗೊಳ್ಳಿ ರಾಯಣ್ಣ, ವೀರ ಶಿವಪ್ಪ ನಾಯಕ, ವೀರ ಭಗೀರಥ ಮತ್ತು ವೀರ ಸಿಂಧೂರ ಲಕ್ಷ್ಮಣ ಎಂಬ ಬಿರುದು ಮತ್ತು 8 ಹಲ್ಲಿಗೆ  ಮೊದಲ ಬಹುಮಾನ 1 ಲಕ್ಷ ರೂ.ಗಳನ್ನ, 6 ಹಲ್ಲಿಗೆ 66,666, ನಾಲ್ಕು ಹಲ್ಲಿಗೆ 44,444,  ಎರಡನೇ ಬಹುಮಾನವಾಗಿ 22, 222 ರೂ. ನೀಡಲಾಗುತ್ತಿದೆ 


ಒಟ್ಟು250-300 ಕುರಿಗಳ ಕಾಳಗ ನಡೆಯುವ ನಿರೀಕ್ಷೆಯಿದೆ. ಮೊದಲಿಗೆ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿ ನಂತರ ನಮ್ಮೂರ ಬಳಗದವತಿಯಿಂದ ವೆಬ್ ಸೈಟ್ ಪೋಸ್ಟರ್ ಹಾಗೂ ಇತರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಾರಿಕಾಂಬ ದೇವಿ ಜಾತ್ರ ಸಮಿತಿಯ ಎಸ್ಕೆ ಮರಿಯಪ್ಪ ನೇತೃತ್ವದಲ್ಲಿ ಕಾರ್ಯಕ್ರಮವನ್ನ ಉದ್ಘಾಟಿಸಲಾಯಿತು. 

ನಂತರ ಮಾತನಾಡಿದ ನಮ್ಮೂರ ಬಳಗದ ಕೆ.ರಂಗನಾಥ್, ಇದು ಅತಿ ದೊಡ್ಡ ಕಾಳಗವಾಗಿದ್ದು ಟಗರುಗಳಿಗೆ ನೀಡುತ್ತಿರುವ ಅತಿ ದೊಡ್ಡಮಟ್ಟದ ಬಹುಮಾನದ ಕಾಳಗ ಎನಿಸಿಕೊಂಡಿದೆ. ಫೆ.15 ರಂದು ಫ್ರೀಡಂ ಪಾರ್ಕ್ ನಲ್ಲಿ ಕಾಳಗ ನಡೆಯಲಿದೆ. ಸಾವರ್ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾಳಗವನ್ನ ಪ್ರೋತ್ಸವಹಿಸುವಂತೆ ಕೋರಿದರು. ಇದೇ ವೇಳೆ ವಿವಿಧ ಹಲ್ಲುಗಳ ಟಗರನ್ನ ಹಿಡಿದುಕೊಂಡು ಬಂದಿದ್ದು ವಿಶೇಷವಾಗಿತ್ತು. 

National level ram fight poster website launched

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close