ಬಿಜೆಪಿಗರಿಗೆ ನಾಚಿಕೆ ಇದೆಯಾ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್- Are BJP people ashamed? - Minister Lakshmi Hebbalkar

SUDDILIVE || SHIVAMOGGA

ಬಿಜೆಪಿಗರಿಗೆ ನಾಚಿಕೆ ಇದೆಯಾ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್- Are BJP people ashamed? - Minister Lakshmi Hebbalkar     

BJP, ashamed

ಕೇಂದ್ರದಲ್ಲಿ ಮನ್ರೇಗಾ ಹೆಸರು ಬದಲಾವಣೆ ವಿಚಾರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ನರೇಗಾ ಎಂದರೇ ಹಳ್ಳಿಗರ ಒಂದು ಜೀವನಾಡಿ, ಕಳೆದ ೨೦ ವರ್ಷದಿಂದ ನರೇಗಾ ಹಳ್ಳಿಗರ ಜೀವನದಲ್ಲಿ ಆಸರೆ ಆದ ಯೋಜನೆ. ಅದನ್ನ ಬದಲಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಶಿವಮೊಗ್ಗದಲ್ಲಿ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ ಸಚಿವೆ. ಇವತ್ತು ನರೇಗ ಒಂದೇ ಹೆಸರು ಬದಲಾವಣೆ ಮಾಡಲಿಲ್ಲ. ಗ್ರಾಮಸ್ವರಾಜ್ಯ ಮಹಾತ್ಮ ಗಾಂಧಿ ಯವರ ಕನಸಾಗಿತ್ತು ಹಾಗಗಾಗಿ ಗಾಂಧಿಯವರ ಹೆಸರು ಇಟ್ಟಿದ್ದು. ಗ್ರಾಮಸ್ವರಾಜ್ಯದ ಆಶಯಕ್ಕೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ ಎಂದು ದೂರಿದರು. 

ಬಿಜೆಪಿಯವರು ಆ ಯೋಜನೆಯಲ್ಲಿ ಬಹಳಷ್ಟು ಬದಲಾವಣೆ ತಂದಿದ್ದಾರೆ. ಕೇಂದ್ರದವರು ಯೋಜನೆ ಬದಲಾವಣೆ ಮಾಡಲು ರಾಜ್ಯಗಳ ಜೊತೆ ಚರ್ಚೆ ಮಾಡಬೇಕು. ತರಾತುರಿಯಲ್ಲಿ ಕೇಂದ್ರ ಬದಲಾವಣೆ ತರಲು ಮುಂದಾಗಿದೆ. ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬದಲಾವಣೆ ತರಲಾಗುತ್ತಿದೆ ಎಂದರು. 

ಇದರಿಂದ ಗ್ರಾಮ ಪಂಚಾಯತಿ ಹಕ್ಕನ್ನು ಕಸಿದುಕೊಂಡಿದ್ದಾರೆ. ಹಳ್ಳಿಗಳ ಕೆಲಸವನ್ನು ಡೆಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಯೊಜನೆ ಮಾಡಿದ್ದಾರೆ. ಹಾಗಾಗಿ ನಾವು ಕಾಂಗ್ರೆಸ್ ಪಕ್ಷದವರು ಆರು ಕೋಟಿ ಕುಟುಂಬಗಳ ಪರವಾಗಿ ಒಂದು ಪ್ರತಿಭಟನೆ ಮಾಡುತ್ತಿದ್ದೇವೆ. ಹಣ ದುರುಪಯೋಗ ಆಗುತ್ತಿದೆ ಎಂದು ಕಂಡು ಹಿಡಿಯಲು ೧೨ ವರ್ಷ ಬೇಕಾಯ್ತಾ ಎಂದು ದೂರಿದರು. 

ನಾಚಿಗೆ ಆಗ ಬೇಕು ಬಿಜೆಪಿಯವರಿಗೆ, ಇಷ್ಟು ದಿನ ಕತ್ತೆ ಕಾಯುತ್ತಿದ್ದರ ಬಿಜೆಪಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವೆ ಬೆಳಗಾವಿ ಗಡಿಯಲ್ಲಿ ೨೦೦೦ ಬೆಲೆಯ ನೋಟುಗಳು ಸಿಕ್ಕಿವೆ. ಮಹಾರಾಷ್ಟ್ರ, ಗೋವ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಆಗಿದೆ. ಬೆಳಗಾವಿ ಪೊಲೀಸರು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದು ದೂರಿದರು. 

ಕಾಂಗ್ರೆಸ್ ಗೆ ಸೇರಿದ್ದು ಎಂದು ಯಾಕೆ ಇವಾಗ್ಲೆ ತೀರ್ಮಾನ ಕ್ಕೆ ಬರ್ತೀರಾ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ಯಾಕೆ ನೋಡುತ್ತಾರೆ. ಗುಜರಾತ್ ನಿಂದ ಬಂದಿದೆ ಎಂದರೇ ಅಲ್ಲಿ ಯಾವ ಸರ್ಕಾರ ಇದೆ. ಬಿಜೆಪಿಗರ ಕಥೆ ಇದು. ಕಾಂಗ್ರೆಸ್ ಭ್ರಷ್ಟಾಚಾರಿಗಳು ಎಂದು ಹೇಳಲು ಬಿಜೆಪಿಯವರಿಗೆ ನೈತಿಕತೆ ಇದೀಯಾ ಎಂದು ಪ್ರಶ್ನಿಸಿದರು. ಇಡೀ ದೇಶದ ಆಸ್ತಿಯನ್ನು ಅದಾನಿ ಹಾಗೂ ಅಂಬಾನಿ ಗೆ ಬರೆದುಕೊಟ್ಟವರು ಎಂದು ದೂರಿದರು. 

ಬಂಡವಾಳ ಶಾಯಿಗಳ ೨೩ ಲಕ್ಷ ಕೋಟಿ ಸಾಲ ಮನ್ನ ಮಾಡಿದವರು ಬಿಜೆಪಿ ಯವರು. ಕರ್ನಾಟಕದಲ್ಲಿ ೪೦% ಕಮೀಷನ್ ತಿಂದವರು ಬಿಜೆಪಿಯವರು. ಎಷ್ಟೋ ಕೇಸ್ ಗಳಲ್ಲಿ ಮುಖ್ಯಮಂತ್ರಿ ಗಳೇ ಜೈಲಿಗೆ ಹೋಗಿ ಬಂದವರು. ಈ ರೀತಿ ನಮ್ಮ ಬಗ್ಗೆ ಹೇಳುವುದಕ್ಕೆ ಬಿಜೆಪಿಗೆ ನೈತಿಕತೆ ಇದೇಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Are BJP people ashamed? - Minister Lakshmi Hebbalkar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close