ರಾಜೀವ್ ಗೌಡರನ್ನ ಬಂಧಿಸಿ-ಮಂಜುಳ ಆಗ್ರಹ- Arrest Rajiv Gowda - Manjula demands

 SUDDILIVE || SHIVAMOGGA

ರಾಜೀವ್ ಗೌಡರನ್ನ ಬಂಧಿಸಿ-ಮಂಜುಳ ಆಗ್ರಹ- Arrest Rajiv Gowda - Manjula demands   

Arrest, rajivgowda

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡರ ವಿರುದ್ಧ ಅವ್ಯಚ್ಯ ಶಬ್ದಗಳಿಂದ ಬೈದಿರುವ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರನ್ನ ಕೂಡಲೇ ಬಂಧಿಸುವಂತೆ ರಾಜ್ಯ ಬಿಜೆಪಿ ಮಹಿಳ ಘಟಕದ ಅಧ್ಯಕ್ಷೆ ಮಂಜುಳ ತಿಳಿಸಿದರು.

ಶಿವಮೊಗ್ಗದ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ತನ್ನ ಪುಡಾರಿಗಳ ಕೈಯಲ್ಲಿ ಕಾನೂನು ಕೊಟ್ಟಂಗಿದೆ. ಸಣ್ಣ ಸಣ್ಣ ವಿಷಯಕ್ಕೆ ಮೂಗು ತೂರಿಸುವ ರಾಜ್ಯ ಮಹಿಳ ಆಯೋಗ ಮಹಿಳಾ ಅಧಿಕಾರಿಗಳಿಗೆ ಅವಮಾನಿಸಿದರೂ ಸುಮ್ಮನೆ ಕುಳಿತಿರುವುದೇಕೆ. ಎಸ್ಪಿಗೆ ಯಾಕೆ  ಸೂಚನೆಕೊಡಲಲ್ಲ. ಸೆಲೆಕ್ಟಿವ್ ಆಗಿರುವುದಕ್ಕೆ ನೀವು ಕಾಂಗ್ರೆಸ್ ಏಜೆಂಟಾ ಎಂದು ಪ್ರಶ್ನಿಸಿದರು. 

ಶಿಡ್ಲುಘಟ್ಟದಲ್ಲಿ ರಾಜೀವ್ ಗೌಡ ಕಟ್ಟಿದ ಬ್ಯಾನರ್ ನಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಯುಂಟಾಗಿತ್ತು. ಅದರಲ್ಲಿ ಒಂದು ಬ್ಯಾನರ್ ನ್ನ  ಅಧಿಕಾರಿಗಳು ಸಾರ್ವಜನಿಕ ದೂರಿನ ಆಧಾರದ ಮೇಲೆ  ತೆಗೆಸಿದ್ದಕ್ಕೆ ರಾಜೀವ್ ಗೌಡ ಗೂಂಡಾಯಿಸಂನ್ನ ತೋರಿದ್ದಾನೆ. ಆತನ ವಿರುದ್ಧ ಎರಡು ಎಫ್ ಐಆರ್  ದೂರುದಾಖಲಾದರೂ ಅರೆಸ್ಟ್ ಮಾಡಲಿಲ್ಲ ಏಕೆ ಎಂದು ಅವರು ಆಗ್ರಹಿಸಿದರು. ಬಿಜೆಪಿ ಇಂದು ಎಸ್ಪಿಯವರನ್ನ‌ಭೇಟಿ ಮಾಡಬೇಕಿತ್ತು. ಇಂದು ಎಸ್ಪಿ ಇಲ್ಲದ ಕಾರಣ ಬಿಜೆಪಿ ನಾಳೆ ಭೇಟಿ ಮಾಡಲಿದೆ.  

ಆತನನ್ನ ಬಂಧಿಸುವ ವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಆತ ಅಧಿಕಾರಿಗೆ ಕ್ಷಮೆ ಕೇಳಿಸಲಾಗಿದೆ. ಇದು ಕ್ಷಮೆ ಕೇಳಲು ಅರ್ಹವಾದ ವಿಷಯವಲ್ಲ. ಉದ್ದೇಶ ಪೂರಕವಾಗಿ ನೀನು ಯಾವಳು ಎಂದು ಧಮ್ಕಿ ಹಾಕಲಾಗಿದೆ. ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯನವರು ಅರಸುವರ ಅವಧಿಯನ್ನ ಹಿಂದಿಕ್ಕಿರುವ ಬಗ್ಗೆ ಸಂಭ್ರಮಿಸಿದೆ. 

ಆದರೆ ಇವರ ಅವಧಿಯಲ್ಲೇ ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿಯ ಮೇಲೆ ಹಲ್ಲೆ, ಅಮೃತಾ ಗೌಡರನ್ನ ನಿಂದಿಸಿದ ಪ್ರಕರಣ,  ಯಲ್ಲಾಪುರದಲ್ಲಿ ಹಿಂದೂಗಳ ಹತ್ಯೆ ಮತ್ತು ಭದ್ರಾವತಿಯ ಶಾಸಕರ ಪುತ್ರ ಅಧಿಕಾರಿಗಳ ವಿರುದ್ಧ  ನಡೆಸಿದ ಗೂಂಡಾ ವರ್ತನೆ ಕಾಂಗ್ರೆಸ್ ನ ಸಿದ್ದರಾಮಯ್ಯ ನೇತೃತ್ವದ  ಏಳು ವರ್ಷದ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು. 

Arrest Rajiv Gowda - Manjula demands

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close