ಬೋನಿಗೆ ಬಿದ್ದ ಚಿರತೆ-Leopard trapped in a trap

 SUDDILIVE || BHADRAVATHI

ಬೋನಿಗೆ ಬಿದ್ದ ಚಿರತೆ-Leopard trapped in a trap 

Leopard, trap
ಸಾಂಧರ್ಭಿಕ ಚಿತ್ರ

ಭದ್ರಾವತಿಯ ಹಿರಿಯೂರು ಗ್ರಾಮದಲ್ಲಿ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ. ಬೋನಿನಲ್ಲಿ ನಾಯಿಯಿಟ್ಟು ಚಿರತೆಯನ್ನ ಬೋನಿಗೆ ಬೀಳಿಸಲಾಗಿದೆ. 

ಭದ್ರಾವತಿಯ ಹಿರಿಯೂರು ಗ್ರಾಮದಲ್ಲಿ ಸಾಕು ನಾಯಿಗಳನ್ನ ಹಿಡಿದು ಭಕ್ಷಿಸುತ್ತಿದ್ದ 2-3 ವರ್ಷದ ಚಿರತೆ ಹಾವಳಿಗೆ ಗ್ರಾನಸ್ಥರು ರೋಸಿಹೋಗಿದ್ದರು. ಇದರಿಂದ ಭದ್ರಾವತಿ ಅರಣ್ಯ ವನ್ಯಜೀವಿ ವಿಭಾಗಕ್ಕೆ ಗ್ರಾಮಸ್ಥರು ದೂರು ನೀಡಿದ್ದರು. 

ದೂರಿನ ಆಧಾರದ ಮೇರೆಗೆ 15 ದಿನಗಳಿಂದ ಬೋನು ಇಡಲಾಗಿತ್ತು. ಆದರೆ ನಿನ್ನೆ ಚಿರತೆ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನ ಅರಣ್ಯ ಇಲಾಖೆಯವರು ರಕ್ಷಿಸಿ ನಿನ್ನೆ ರಾತ್ರಿಯ ಸಮಯದಲ್ಲಿ ಮತ್ತೆ ಕಾಡಿಗೆ ಬಿಡಲಾಗಿದೆ. 

Leopard trapped in a trap

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close