ದೇವಸ್ಥಾನ ಕಳ್ಳರ ಬಂಧನ-Arrest of temple thieves

 SUDDILIVE || BHADRAVATHI

ದೇವಸ್ಥಾನ ಕಳ್ಳರ ಬಂಧನ-Arrest of temple thieves    



ಮಕರ ಸಂಕ್ರಮಣ ದಿನದಂದೇ ಭದ್ರಾವತಿಯ ಭದ್ರ ಕಾಲೋನಿಯಲ್ಲಿರುವ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು ಕಳ್ಳತನದ ಆರೋಪಿಗಳನ್ನ ಹೊಸಮನೆ ಪೊಲೀಸರು ಹೆಡೆಮಯರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

 ಗ್ರಾಮದ ವಾಸಿ ಹಾಗೂ ಶ್ರೀರಾಮಾಂಜನೇಯ ದೇವಸ್ಥಾನದ ಅಧಕ್ಯರಾದ ಆರ್ ಮುದಿಯಳಗನ್ ರವರು ದೇವಸ್ಥಾನದಲ್ಲಿ ಸೀತಾರಾಮ ಭಟ್ಟ ಎಂಬುವರು ಈಗ್ಗೆ 25 ವರ್ಷದಿಂದ ಪೂಜೆ ಮಾಡಿಕೊಂಡು ಬಂದಿರುತ್ತಾರೆ, ಸೀತಾರಾಮ ಭಟ್ಟರು ದಿನಾಂಕ: 14/01/2026 ರಂದು ದೇವಸ್ಥಾನದಲ್ಲಿ ಪೂಜೆ ಮುಗಿಸಿ ರಾತ್ರಿ 8-00 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದು, ಮರುದಿನ ಬಾಗಿಲು ತೆಗೆಯಲು ಹೋದಾಗ ದೇವಸ್ಥಾನದ ಬೀಗ ಒಡೆದು ದೇವರ ಮೂರ್ತಿಯ ಮೇಲಿದ್ದ ಅಂದಾಜು 12,000/- ರೂ ಬೆಲೆ ಬಾಳುವ ಒಂದೂವರೆ ಗ್ರಾಂ ತೂಕದ ಬಂಗಾರದ ತಾಳಿ ಮತ್ತು ಅಂದಾಜು 20,000/- ರೂ ಬೆಲೆ ಬಾಳುವ ಸುಮಾರು 200 ಗ್ರಾಂ ತೂಕದ ಬೆಳ್ಳಿ ಛತ್ರಿ, ಅಂದಾಜು 10,000/- ರೂ ಬೆಲೆ ಬಾಳುವ ತಲಾ 50 ಗ್ರಾಂ ತೂಕದ 02 ಬೆಳ್ಳಿ ಲೋಟಗಳನ್ನು ಮತ್ತು ದೇವಸ್ಥಾನಕ್ಕೆ ಅಳವಡಿಸಿದ್ದ ಸುಮಾರು 6,000/- ರೂ ಬೆಳೆ ಬಾಳುವ ಡಿವಿಆರ್ ನ್ನು ಹಾಗೂ ದೇವಸ್ಥಾನದ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು 10,000/- ರೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಹೊಸಮನೆಗೆ ದೂರು ನೀಡಿದ್ದರು. 

ಸದರಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ಎಸ್ಪಿ ನಿಖಿಲ್ ಬಿ, ಅಡಿಷನಲ್ ಎಸ್ಪಿ ಕಾರ್ಯಪ್ಪ ಎ ಜಿ, ಹಾಗೂ  ರಮೇಶ್ ಕುಮಾರ್ ಬಿರವರ ಮಾರ್ಗದರ್ಶನದಲ್ಲಿ, ಭದ್ರಾವತಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ  ಪ್ರಕಾಶ್ ರಾಥೋಡ್ ರವರ ಮೇಲ್ವಿಚಾರಣೆಯಲ್ಲಿ, ಸಿಪಿಐ ಶ್ರೀಮತಿ ನಾಗಮ್ಮರವರು, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಪಿಎಸ್ಐರವರಾದ ಸಿದ್ದಪ್ಪ ಎಂ ಪಿ ಮತ್ತು ಸಿಬ್ಬಂದಿಗಳಾದ ಶ್ರೀ ಆದರ್ಶ ಶೆಟ್ಟಿ ಹೆಷ್ ಸಿ 55, ಶ್ರೀ ತೇಜಕುಮಾರ ಸಿಪಿಸಿ 1345 ಶ್ರೀ ಲೋಹಿತ್ ಸಿಪಿಸಿ 1612 ರವರು ಹಾಗೂ ಶಿವಮೊಗ್ಗ ಜಿಲ್ಲಾ ಫಿಂಗರ್ ಪ್ರಿಂಟ್ ತಂಡ ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿಯವರಾದ ಶ್ರೀ ಇಂದ್ರೇಶ್, ಶ್ರೀ ಗುರು ರವರ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು ದಿನಾಂಕ: 21/01/2026 ರಂದು ಭದ್ರಾವತಿಯ ದೊಣಬಘಟ್ಟ ನಿವಾಸಿಯಾದ ಆರೋಪಿ ವೆಂಕಟೇಶ @ ಕೆಮ್ಮಣ್ಣುಗುಂಡಿ, (58)  ಮತ್ತೋರ್ವ ಪರಶುರಾಮ(20)ವರ್ಷ ಇವರನ್ನ ಬಂಧಿಸಲಾಗಿದೆ.‌ ಇವರಿಂದ ಅಂದಾಜು ಮೌಲ್ಯ 13,000/- ರೂ ಮೌಲ್ಯದ 1 ಗ್ರಾಂ 3 ಮಿಲಿ ತೂಕದ ಬಂಗಾರದ ತಾಳಿ, 8160 ರೂ ನಗದು ಹಣ ಹಾಗೂ 6000 ಮೌಲ್ಯದ ಡಿವಿಆರ್ ಬಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. 

Arrest of temple thieves

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close