ಪುರುದಾಳಿನಲ್ಲಿ ಗಜರಾಜನ ಹಾವಳಿ- The plague of Gajaraja in Purudal

SUDDILIVE || SHIVAMOGGA

ಪುರುದಾಳಿನಲ್ಲಿ ಗಜರಾಜನ ಹಾವಳಿ- The plague of Gajaraja in Purudal     

Plague, gajaraja

ಪುರದಾಳು ಗ್ರಾಮದಲ್ಲಿ ಮತ್ತೆ ಕಾಡಾನೆಗಳ ದಾಳಿ, ನಿನ್ನೆ ರಾತ್ರಿ ಸಮಯದಲ್ಲಿ  ಪುರದಾಳು ಗ್ರಾಮದ ವಸಂತ್ ಕುಮಾರ್,ಅನಂತಪ್ಪ, ವೀರಪ್ಪ ಮತ್ತು ಚಂದ್ರಮ್ಮ ರವರ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಸುಮಾರು 35ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಹಾಗೂ ಬಾಳೆ ತೋಟವನ್ನು ನಾಶಪಡಿಸಿವೆ.

ಪದೇ ಪದೇ ಆನೆ ದಾಳಿ ನಡೆಯುತ್ತಿದ್ದು ರೈತರ ಬೆಳೆ ಕೈ ತಪ್ಪುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ರೈತರು ಇಡಿ ಶಾಪ ಹಾಕುತ್ತಿದ್ದಾರೆ, ಕಾಡನೇ ದಾಳಿ ತಪ್ಪಿಸಿ ರೈತರ ಬೆಳೆ ರಕ್ಸಿಸುವಂತೆ  ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಕಾಡನೇ ದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, 

ಈ ಕೂಡಲೇ ಆನೆ ದಾಳಿ ತಡೆಯಲು ಸೋಲಾರ್ ಫೆನ್ಫ್ಸಿಂಗ್ ಅಳವಡಿಸುವುದರ ಜೊತೆಗೆ ರೈತರಿಗೆ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಎಸ್ ಹೆಬ್ಬೂರ್ ಅಗ್ರಹಿಸಿದ್ದಾರೆ.

The plague of Gajaraja in Purudal

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close