ಹರಿಪ್ರಸಾದ್ ಬಂಧನಕ್ಕೆ ಬಿಜೆಪಿ ಬಿಗಿಪಟ್ಟು-BJP reacts strongly to Hariprasad's arrest

 SUDDILIVE || SHIVAMOGGA

ಹರಿಪ್ರಸಾದ್ ಬಂಧನಕ್ಕೆ ಬಿಜೆಪಿ ಬಿಗಿಪಟ್ಟು-BJP reacts strongly to Hariprasad's arrest    

Bjp, reacts


ವಿಧಾನ ಮಂಡಲದ ವಿಶೇಷ ಅಧಿವೇಶನದ ವೇಳೆ ಮಾನ್ಯ ರಾಜ್ಯಪಾಲರ ವಿರುದ್ದ ಅವಮಾನಕಾರಿ ಕೈ ಸೂಚನೆ ತೋರಿಸಿ ಅಧಿವೇಶನದಲ್ಲಿ ಹಸಭ್ಯವಾಗಿ ವರ್ತಿಸಿದನ್ನ ವಿರೋಧಿಸಿ ಇಂದು ಬಿಜೆಪಿ ಯುವ ಮೋರ್ಚಾ ಹಾಗೂ ನಗರ ಘಟಕ ಎಸ್ಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದೆ. 

ಇತ್ತೀಚೆಗೆ ಕರ್ನಾಟಕ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಪಾಲರ ಕಡೆಗೆ ಕೈ ತೋರಿಸುವ ಮೂಲಕ ಅವಮಾನಕಾರಿ, ಅಸಭ್ಯ ಹಾಗೂ ಶಿಸ್ತುಬಾಹ್ಯ ವರ್ತನೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪಕ್ಷ ಆರೋಪಿಸಿದೆ. 

ರಾಜ್ಯಪಾಲರು ರಾಜ್ಯದ ಸಂವಿಧಾನಾತ್ಮಕ ಮುಖ್ಯಸ್ಥರಾಗಿದ್ದು, ಸದನದೊಳಗೆ ಅವರ ವಿರುದ್ಧ ಈ ರೀತಿಯ ಕೈ ಸೂಚನೆ ತೋರಿಸುವುದು ಭಾರತದ ಸಂವಿಧಾನ. ವಿಧಾನಮಂಡಲದ ಶಿಸ್ತು, ಸಂಪ್ರದಾಯ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಮಾಡಿದ ಗಂಭೀರ ಅಪಮಾನವಾಗಿದೆ. ಈ ಕೃತ್ಯವು ಸಂವಿಧಾನಾತ್ಮಕ ಹುದ್ದೆಯ ಗೌರವವನ್ನು ಕುಂದಿಸುವುದರ ಜೊತೆಗೆ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಪಕ್ಷ ಆರೋಪಿಸಿದೆ

ಕೃತ್ಯವು ಪ್ರಾಥಮಿಕವಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳು 1530, 504, 505(1)(೪), 506 ಹಾಗೂ 34 ರ ಅಡಿಯಲ್ಲಿ ಅಪರಾಧಕ್ಕೆ ಒಳಪಟ್ಟಿರುವುದಾಗಿ ಕಂಡುಬರುತ್ತದೆ.ಆದ್ದರಿಂದ, ಬಿಜೆಪಿ ಯುವ ಮೋರ್ಚಾ. ಶಿವಮೊಗ್ಗ, ನಗರ ಘಟಕ ಗೂಂಡಾ ವರ್ತನೆ ತೋರಿದ ಹರಿಪ್ರಸಾದ್ ಅವರ ರಾಜೀನಾಮೆ ನೀಡಿದೆ. 

ಬಿಜೆಪಿ ನಗರ ಅಧಕ್ಷ ಮೋಹನ್ ರೆಡ್ಡಿ, ಮಾಜಿ ಕಾರ್ಪೊರೇಟರ್ ಸುರೇಖಾಮುರುಳಿಧರ್ ಶಾಂತ ಸುರೇಂದ್ರ ರಾಹುಲ್ ಬಿದರಿ ಮೊದಲಾದವರು ಭಾಗಿಯಾಗಿದ್ದರು  ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

BJP reacts strongly to Hariprasad's arrest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close