ಡಿಸಿಆರ್ ಇ ಡಿವೈಎಸ್ಪಿಯನ್ನ ಅಮಾನತ್ತುಗೊಳಿಸುವಂತೆ ಡಿಎಸ್ಎಸ್ ಬೃಹತ್ ಪ್ರತಿಭಟನೆ-DSS holds massive protest demanding suspension of DCRE DySP

SUDDILIVE || SHIVAMOGGA

ಡಿಸಿಆರ್ ಇ ಡಿವೈಎಸ್ಪಿಯನ್ನ ಅಮಾನತ್ತುಗೊಳಿಸುವಂತೆ ಡಿಎಸ್ಎಸ್ ಬೃಹತ್ ಪ್ರತಿಭಟನೆ-DSS holds massive protest demanding suspension of DCRE DySP    

DSS, DCRE

DSS, DCRE

ಶಿವಮೊಗ್ಗ ನಗರದಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (DCRE) ಡಿವೈಎಸ್ಪಿ ನಾಗರಾಜ್ ರವರ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಚಾಲಕರಾದ ಹರಮಘಟ್ಟ ರಂಗಪ್ಪ ಅವರ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆದಿದೆ

ದೌರ್ಜನ್ಯ ಕ್ಕೊಳಗಾದ ತುಳಿತಕ್ಕೊಳಗಾದ ದಬ್ಬಾಳಿಕೆಗೊಳಗಾದ ದಮನಿತರು ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದರೆ ಅವರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಡಿವೈಎಸ್ಪಿ ನಾಗರಾಜ್ ಮಾಡುತ್ತಿದ್ದು ನೆಪಮಾತ್ರಕ್ಕೆ ದೂರು ದಾಖಲಿಸಿ ಕೊಂಡು ನಂತರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸುತ್ತಿರುವ ಅಧಿಕಾರಿಯನ್ನು ಅಮಾನತು ಗೊಳಿಸಬೇಕೆಂದು ಸಂಘಟನೆ ಮಹಾನಗರ ಪಾಲಿಕೆಯಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹೂವಿನ ಹಾರ ಸಲ್ಲಿಸಿ ನಂತರ ಪಾಲಿಕೆಯಿಂದ ಕೋಟೆ ಪೊಲೀಸ್ ಠಾಣೆ ಎಲ್ಲಿರುವ ಜಾರಿ ನಿರ್ದೇಶನದ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದೆ.


ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2025 ನವಂಬರ್ ರಂದು ನಡೆದಿರುವ ಕಿಟ್ಟದಹಳ್ಳಿಯಲ್ಲಿ ಕೂಡ್ಲಿಗಿರಿ ಟಿ ಚಂದ್ರಶೇಖರ್ ಅವರ ಮನೆಗೆ ಬಂದ ದಲಿತ ಸಂಘರ್ಷ ಸಮಿತಿಯ ಸದಸ್ಯರು ಅಂಬೇಡ್ಕರ್ ಪ್ರತಿಮೆಗೆ ರೂ. 1 ಲಕ್ಷ ರೂ.ಹಣದ ಬೇಡಿಕೆ ಇಟ್ಟಿದ್ದರು ಈ ಕುರಿತು ಶಿಕಾರಿಪುರ ರೂರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಇದೇ ತಿಂಗಳು ಜನವರಿ 8 ನೇ ತಾರೀಖಿನಂದು ಗಾಜುನೂರಿನಲ್ಲಿ ಸ್ನೇಹ ಬಾರ್ ವಿರುದ್ಧ ಕೆಲ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಇವರಿಗೆ ರಕ್ಷಣೆ ನೀಡದೆ ಎದುರಾಳಿಗಳ ಜೊತೆ ಶಾಮೀಲಾಗಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ಆರೋಪಿಗಳನ್ನು ಬಂಧಿಸುವ ಕರ್ತವ್ಯವನ್ನು ನಡೆಸದೆ ದೂರು ನೀಡುವ ಸಂತ್ರಸ್ತರೆಯನ್ನು ಬೈದು ಸರ್ಕಾರದ ಹಣಕ್ಕಾಗಿ ನೀವು ದೌರ್ಜನ್ಯದ ಪ್ರಕರಣ ದಾಖಲಿಸುತ್ತಿದ್ದೀರಿ ಎಂದು ಗದರಿಸುವ ಮೂಲಕ ಕರ್ತವ್ಯ ಲೋಪವಿಸುತ್ತಿರುವ ಡಿವೈಎಸ್ಪಿಯನ್ನ ತಕ್ಷಣವೇ ಡಿಸಿಆರ್‌ಇ ಠಾಣೆಗೆ ವರ್ಗಾವಣೆ ಮಾಡಬೇಕು

ದೌರ್ಜನ್ ನಡೆಸಿದ ಆರೋಪಿಗಳ ಜೊತೆ ಡಿವೈಎಸ್ಪಿ ಯವರು ಮೊಬೈಲ್ ಮೂಲಕ ಸಂಭಾಷಣೆ ನಡೆಸಿದ್ದು ಅವರ ಮೊಬೈಲ್ ತನಿಖೆಯನ್ನು ಮಾಡಬೇಕು ಡಿಸಿಆರ್‌ಇ ಠಾಣೆಯಲ್ಲಿ ದಲಿತರ ಮಹಾಸಭೆಯನ್ನು ಏರ್ಪಡಿಸಿ ಕುಂದುಕೊರತೆಯನ್ನು ಆಲಿಸುವ ಕೆಲಸವನ್ನು ಸರ್ಕಾರ ಆದೇಶಿಸಬೇಕು. ಪ್ರತಿ ದೂರುದಾರರು ದೂರು ನೀಡಿದಾಗ ಅವರೊಂದಿಗೆ ಸ್ಥಳಕ್ಕೆ ಹೋಗಿ ತನಿಖೆ ಮಾಡಿ ನೈಜತೆಯನ್ನು ಕಂಡುಹಿಡಿದು ಆರೋಪಿಗಳಿಗೆ ಶಿಕ್ಷೆ ಆಗುವಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. 

ದೌರ್ಜನಕ್ಕೆ ಒಳಗಾದ ವ್ಯಕ್ತಿ ದೂರು ನೀಡಿದಾಗ ಮೊಬೈಲ್ನಲ್ಲಿ ಅವರ ಫೋಟೋ ತೆಗೆದು ಎದುರಾಳಿಯ ಮೊಬೈಲ್ ಗೆ ವಾಟ್ಸಪ್ ಮಾಡಿರುವ ಠಾಣೆ ಸಿಬ್ಬಂದಿಗಳನ್ನು ಕಂಡುಹಿಡಿದು ಅವರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಜಿಲ್ಲಾ ಕೇಂದ್ರದಲ್ಲಿರುವ ಡಿಸಿಆರ್‌ಇ ಕಚೇರಿಯನ್ನು ಆಯಾ ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿಗಳ ವ್ಯಾಪ್ತಿಗೆ ವಹಿಸಬೇಕು.

ಹಲವಾರು ಪ್ರಕರಣಗಳಲ್ಲಿ ಈಗಾಗಲೇ ಡಿವೈಎಸ್ಪಿ ಅವರು ನ್ಯಾಯಲಯಕ್ಕೆ ಸಲ್ಲಿಸಿರುವ ಬಿ ವರದಿಯನ್ನು ಮರುತನಿಖೆಗೆ ಆದೇಶಿಸಬೇಕು ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.

DSS holds massive protest demanding suspension of DCRE DySP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close