ಕಾಮ್ರೆಡ್ ಡಿಸಿ ಮಾಯಣ್ಣ ಇನ್ನಿಲ್ಲ-Comrade DC Mayanna is no more.

SUDDILIVE || SHIVAMOGGA

ಕಾಮ್ರೆಡ್ ಡಿಸಿ ಮಾಯಣ್ಣ ಇನ್ನಿಲ್ಲ-Comrade DC Mayanna is no more.   

Comrade, Mayanna

ಭದ್ರಾವತಿಯ ಹಿರಿಯ ಕಾರ್ಮಿಕ ಹೋರಾಟಗಾರರಾದ ಶ್ರೀಯುತ ಕಾಮ್ರೆಡ್ ಡಿಸಿ ಮಾಯಣ್ಣನವರು ಇಂದು ಬೆಳಿಗ್ಗೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. 

ಮಾಯಣ್ಣರವರು ಬೆಂಗಳೂರಿನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಒಂದು ವಾರದ ಹಿಂದೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.  ಇಂದು ಬೆಳಿಗ್ಗೆಇನ ಜಾವ 2.30 ರ ಸಮಯದಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಮೃತರ ಕಣ್ಣುಗಳನ್ನ ದಾನಮಾಡಲಾಗಿದೆ. 

ಇಂದು ಬೆಳಿಗ್ಗೆ 5-30 ರ ವೇಳೆಗೆ ಶಂಕರ ಕಣ್ಣಿನ ಆಸ್ಪತ್ರೆಯವರು ಮಾಯಣ್ಣನವರ ಕಣ್ಣು ಸಂಗ್ರಹಿಸಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿದೆ.  9,30 ಕ್ಕೆ ಸರ್ಕಾರಿ ಆಸ್ಪತ್ರೆಯಿಂದ ಸಾರ್ವಜನಿಕವಾಗಿ ಮೆರವಣಿಗೆ ಮೂಲಕ ಬೊಮ್ಮನ್ ಕಟ್ಟೆಯಲ್ಲಿರುವ  ಮಾಯಣ್ಣನವರ ತೋಟದಲ್ಲಿ ಅವರ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲಾಯಿತು.

ಬೊಮ್ಮನ್ ಕಟ್ಟೆಗೆ ಕರೆದೊಯ್ಯುವಾಗ VISL ಎದುರು ಅವರ ಮೃತದೇಹಕ್ಕೆ ಪುಷ್ಪ ಗುಚ್ಚ ಅರ್ಪಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close