ವಿಬಿಜಿ ರಾಮ್ ಜಿ ಹೆಸರನ್ನ ವಿಸ್ತಾರವಾಗಿ ಹೇಳಲು ಸಚಿವರು ತಬ್ಬಿಬ್ಬು- Ministers hesitate to elaborate on VBG Ram Ji's name

 SUDDILIVE || SHIVAMOGGA

ವಿಬಿಜಿ ರಾಮ್ ಜಿ ಹೆಸರನ್ನ ವಿಸ್ತಾರವಾಗಿ ಹೇಳಲು ಸಚಿವರು ತಬ್ಬಿಬ್ಬು- Ministers hesitate to elaborate on VBG Ram Ji's name   

Minister, eloborate


ಮಹಾತ್ಮಗಾಂಧಿ ಹೆಸರನ್ನ ನರೇಗಾದಿಂದ ತೆಗೆದುಹಾಕಿದ್ದಲ್ಲದೆ, ದೇಶದಿಂದಲೇ ಓಡಿಸುವ ಯೋಜನೆಯನ್ನ ಕೇಂದ್ರದ ಬಿಜೆಪಿ ಮಾಡಿದೆ ಎಂದು ಶಿಕ್ಷಣಸಚಿವ ಮಧು ಬಂಗಾರಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಹಕ್ಕನ್ನೇ ನೀಡದಿದ್ದರೆ ಭಿಕ್ಷುಕರಾಗುತ್ತಿದ್ವಿ. ಮನಮೋಹನ ಸಿಂಗ್ ಪಿಎಂ ಆಗಿದ್ದಾಗ ಮನರೇಗಾದಿಂದ ಜಾರಿಗೊಳಿಸಲಾಗಿತ್ತು. ಬಡವರ ಪರವಾಗಿ ರೈಟು ಎಜುಕೇಷನ್, ಆಹಾರ ಭದ್ರತೆ, ಕೆಲಸದ ಗ್ಯಾರೆಂಟಿಯನ್ನ ಕಾಂಗ್ರೆಸ್ ನೀಡಿದೆ. ಕೆರೆ, ಕಾಲೋನಿ, ತೋಟ ಅಭಿವೃದ್ಧಿಯನ್ನ ಮಾಡಲಾಗಿದೆ.ಯಾರು ಈ ದೇಶಕ್ಕೆ ಸ್ವಿಸ್ ಬ್ಯಾಂಕ್ ನಿಂದ ಹಣ ತರುವ, ವರ್ಷಕ್ಕೆ ಎರಡು ಲಕ್ಷ ಉದ್ಯೋಗ ಸೃಷ್ಠಿ ಮಾಡಿರುವ ಕೇಂದ್ರ ಸರ್ಕಾರ ಮೂರು ಬಾರಿ ದೇಶವನ್ನ ಆಡಳಿತ ನಡೆಸಿದ್ದಾರೆ ಎಂದು ದೂರಿದರು. 

ದುಡಿಯುವ  ಕೈಗೆ ಕೆಲಸ ಕೊಡುವ ಕನಸನ್ನ ಗಾಂಧೀಜಿ ಕಂಡಿದ್ದರು. ಇತರೆ ರಾಷ್ಟ್ರಗಳಲ್ಲಿ ಪ್ರತಿಮೆಯನ್ನ‌ ಹೊಂದಿದದ್ದ ಗಾಂಧೀಜಿಯನ್ನೇ ಎನ್ ಡಿಎ ಸರ್ಕಾರ ದೇಶದಿಂದ ಹೊರಹಾಕುವ ಯೋಜನೆ ನಡೆಸಿದ್ದರು. ಜೆಡಿಎಸ್ ನಲ್ಲಿದ್ದಾಗ 2013-14 ನೇ ಇಸವಿಯಲ್ಲಿ ಮಾವುಲಿ ಗ್ರಾಮದ ಕೆರೆ ಹೂಳೆತ್ತಿದ್ದ ಉದಾಹರಣೆಯನ್ನ ಸಚಿವರು ನೀಡಿದ್ದರು. 

ಇಂತಹ ಕಾರ್ಯಕ್ರಮವನ್ನ ಬಿಟ್ಟು ಗಾಂಧೀಜಿ ಹೆಸರನ್ನೇ ತೆಗೆಯಲು ಮುಂದಾಗಿದ್ದಾರೆ. ದೇಶದಲ್ಲಿ ಶ್ರೀಮಂತರ ಸಾಲ ಮನ್ನವಾಗಿದೆ. ಬಡವರ ಸಾಲ ಮನ್ನವಾಗಿತ್ತಾ ಎಂದು ಪ್ರಶ್ನಿಸಿದ ಸಚಿವರು ಮನಮೋಹನ್ ಸಿಂಗ್  ಪಿಎಂ ಆಗಿದ್ದಾಗ 77 ಸಾವಿರ ಕೋಟಿ ಬಡವರ ಸಾಲ ಮನ್ನ ಮಾಡಿದ್ದಾರೆ ಎಂದರು. 

ಗಾಂಧೀಜಿಯವರು ರಾಮನ ಭಕ್ತರಾಗಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಅವರು ಗೋಡ್ಸೆ ಗುಂಡಿಗೆ ಹೇರಾಮ್ ಎಂದು ಸತ್ತಿದ್ದಾರೆ. ಹೇರಾಮ್ ಎಂಬುದು ದುಸ್ಥಿತಿಗೆ ತಲುಪಿಸಿದವರು ಬಿಜೆಪಿಯವರು. ಅವರು ರಾಮನನ್ನ ತರುತ್ತಾರೆ. ಕೃಷ್ಣನನ್ನ ತರುತ್ತಾರೆ. ಆದರೆ ಕಾಂಗ್ರೆಸ್ ರಾಮ ಕೃಷ್ಣ ರಹೀಮ ಮತ್ತು ಜೀಸಸ್ ನನ್ನ ಹೃದಯದಲ್ಲಿ ಪೂಜಿಸುವವರು ಎಂದು ಟಾಂಗ್ ನೀಡಿದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷರಾದವರು ಗ್ರಾಮಪಂಚಾಯಿತಿಗೆ ಸಿಎಂ ಇದ್ದಂತೆ. ಅಂತಹ ಗ್ರಾಮ ಪಂಚಾಯಿತಿಯನ್ನ ನಾಶ ಮಾಡುವ ಉದ್ದೇಶ ಬಿಜೆಪಿಯವರದ್ದು, ಕೋವಿಡ್ ವೇಳೆ ಜನರನ್ನ ಬದುಕಿಸಿದ್ದು ನರೇಗಾ ಆಗಿತ್ತು. ದುಡಿಯುವ ಕೈಗೆ ಕೆಲಸವಿಲ್ಲವೆಂದರೆ ಜನ ದಂಗೆ ಏಳುವ ಸಾಧ್ಯತೆಯಿದೆ. ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸಚಿವರು ಭವಿಷ್ಯ ನುಡಿದಿದ್ದಾರೆ. 

ರಾಜ್ಯ ಸರ್ಕಾರ 40% ಹಣ ನೀಡಲು ಕಾನೂನು ಮಾಡಲಾಗಿದೆ. ರಾಜ್ಯದ ತೆರೆಗೆಯನ್ನ ಹೆಚ್ಚು ಪ್ರಮಾಣದಲ್ಲಿ ಪಡೆದ ಕೇಂದ್ರ ಸರ್ಕಾರ ಮತ್ತೆ ಹಣ ಕೊಡಲು ವಿಬಿಜಿ ರಾಮ್ ಜಿ ಹೆಸರಲ್ಲಿ ತರಲಾಗುತ್ತಿದೆ. ಇದನ್ನ ನಾನು ಖಂಡಿಸುವೆ ಎಂದು ದೂರಿದರು. 

ತಬ್ಬಿಬ್ಬು

ಬಿವಿಜಿ ರಾಮ್ ಜಿ (ವಿಕಸಿತ್ ಭಾರತ್-ಗ್ಯಾರೆಂಟಿ ಫಾರ್ ರೋಜ್ ಗಾರ್ ಅಂಡ್  ಅಜೀವಿಕ್ ಮಿಷನ್ (Gramin) ಹೆಸರಿನ ವಿಸ್ತರಣೆ ಬಗ್ಗೆ ಮಾಧ್ಯಮದವರು ಕೇಳಿದಾಗ ಸಚಿವರು ತಬ್ಬಿಬ್ಬಾದರು. 60 ಸಾವಿರ ಕೋಟಿ ಹಣ ಕೊರತೆಇದೆ. ರಾಜ್ಯ ಸರ್ಕಾರ 40% ಹಣ ಹಾಕಲು ಆಗಿನ ಹಣಕಾಸಿನ ಸಚಿವ ಪಿ.ಚಿದಂಬರಂ ಹೇಳಿದ್ದಾಗ ಕಾಂಗ್ರೆಸ್ ಆಕ್ಷೇಪಿಸದೆ ಈಗ ಪ್ರೆಸ್ ಮುಂದೆ ಬಂದಿದ್ದೀರಿ ಎಂದ ಮಾಧ್ಯಮಗಳ ಪ್ರಶ್ನೆಗೂ ಸಚಿವರ ಉತ್ತರ ಬೇರೆರೀತಿ ಇದ್ದಿತ್ತು. 

ಮನರೇಗಾ ಹೆಸರಿನಲ್ಲಿ ಗಾಂಧೀಜಿ ಹೆಸರು ತೆಗೆದಿರುವ ಬಗ್ಗೆ ಗ್ರಾಪಂ ಮಟ್ಟದಿಂದ ಕಾಂಗ್ರೆಸ್ ಹೋರಾಡಲಿದೆ. ಗ್ರಾಪಂಗೆ ಹಣ ಬಾರದಿದ್ದರೆ ಹೇಗೆ? ರಾಮನ ಹೆಸರಿನ ವಿರುದ್ಧ  ಕಾಂಗ್ರೆಸ್ ಹೋರಾಡುತ್ತಿಲ್ಲ. ಈ ಬಗ್ಗೆ ಸುಪ್ರೀಂ‌ಕೋರ್ಟ್ ಗೆ ಹೋಗಲು ಅಡ್ವಕೇಟ್ ಜನರಲ್ ಜೊತೆ ಮಾತನಾಡಲು ರಾಜ್ಯ ಸರ್ಕಾರದ ಸಚಿವ ಸಂಪುಟ ಸಿಎಂಗೆ ಅಧಿಕಾರ ನೀಡಿದೆ ಎಂದರು.

ಕ್ರಮ ಕೈಗೊಳ್ಳಲಾಗುವುದು

ಕೇರಳದಲ್ಲಿ ಕನ್ನಡ ಮಾಧ್ಯಮಗಳ ಶಾಲೆಯಲ್ಲೂ ಮಲ್ಯಾಳಂ ಭಾಷೆ ತರಲು ಕೇರಳ ಸರ್ಕಾರಕ್ಕೆ ಸಿಎಸ್ ವರದಿ ಪಡೆದು ಸಿಎಂ ಕೇರಳ ಸರ್ಕಾರಕ್ಕೆ ಕಳುಹಿಸಲಿದೆ. ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ಲೀಜ್ ಔಟ್ ಆಗಿರುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 

ತೀರ್ಥಹಳ್ಳಿ ಸಮಸ್ಯೆ ಬಗೆಹರಿಸಲಾಗುವುದು

ತೀರ್ಥಹಳ್ಳಿಯಲ್ಲಿ  ಕಿಮ್ಮನೆ ಅಭಿಮಾನಿಗಳು ಪಕ್ಷ ವಿರೋಧಿ ಚಟುವಟಿಕೆ ಮಾಡುವರ ವಿರುದ್ಧ ಕ್ರಮ ಜರುಗಿಸಲು ಗಡುವು ನೀಡಿರುವ ಬಗ್ಗೆ ಮಾತನಾಡಿದ ಸಚಿವರು ಜಿಲ್ಲಾಧ್ಯಕ್ಷರು ಸರಿಪಡಿಸಲಿದ್ದಾರೆ ಎಂದು ಭರವಸೆ ನೀಡಿದರು.  

Ministers hesitate to elaborate on VBG Ram Ji's name 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close