ಕೊನೆಗೂ ಉಳಿದೆರಡು ಶವ ಪತ್ತೆ, ಯಶಸ್ವಿ ಐದು ದಿನಗಳ ಕಾರ್ಯಾಚರಣೆ ನಡೆಸಿದ ಈಶ್ವರ್ ಮಲ್ಪೆ ತಂಡಕ್ಕೆ ಅಭಿನಂದನೆ- Congratulations to the Ishwar Malpe team for a successful five-day operation

SUDDILIVE || BHADRAVATHI

ಕೊನೆಗೂ ಉಳಿದೆರಡು ಶವ ಪತ್ತೆ, ಯಶಸ್ವಿ ಐದು ದಿನಗಳ ಕಾರ್ಯಾಚರಣೆ ನಡೆಸಿದ ಈಶ್ವರ್ ಮಲ್ಪೆ ತಂಡಕ್ಕೆ ಅಭಿನಂದನೆ-  Congratulations to the Ishwar Malpe team for a successful five-day , finally finding the remaining two bodies      



ಭದ್ರಾವತಿ ಅರೆಬಿಳಚಿ ಗ್ರಾಮದಲ್ಲಿ ಭದ್ರಾ ನಾಲೆಯಲ್ಲಿ ತೇಲಿ ಹೋಗಿ ಸಾವನ್ನಪ್ಪಿದ್ದ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿದೆ. ಯಶಸ್ವಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಈಶ್ವರ್ ಮಲ್ಪೆ ತಂಡಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. 

ಭದ್ರಾ ನಾಲೆ ಆಳಕ್ಕಿಳಿದು ಶವಗಳ ಶೋಧ ಕಾರ್ಯ ನಡೆಸಿದ್ದ ತಂಡ ದುಖಃದ ನಡುವೆಯೂ ಶವಗಳನ್ನು ಹುಡುಕಿ ಹೊರ ತೆಗೆದಿದ್ದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಇಂದು ಮಧ್ಯಾಹ್ನ ಮತ್ತೆರೆಡು ಶವ ಹುಡುಕಿ ಹೊರತೆಗೆದಿದ್ದ ಈಶ್ವರ್ ಮಲ್ಪೆ ತಂಡಕ್ಕೆ ಗ್ರಾಮಾಂತರ ಶಾಸಕಿ ಶಾರದಾ ಪುರ್ಯ ನಾಯಕ್ ಪುತ್ರ ದೀಪಕ್ ಅಭಿನಂದಿಸಿದ್ದಾರೆ. 


ಮೊದಲನೇ ದಿನ ಕಾರ್ಯಾಚರಣೆ ನಡೆಸಿದಾಗ ಯಾವ ಫಲಿತಾಂಶವು ದೊರೆತಿರಲಿಲ್ಲ. ಈಶ್ವರ್ ಮಲ್ಪೆ ಬಂದ ನಂತರ  ರವಿ, ಮರುದಿನ ನೀಲಮ್ಮ ಇಂದು ಅಳಿಯ ಪರಶುರಾಮ್ ಮತ್ತು ಮಗಳು ಶ್ವೇತಾ ಶವವಾಗಿ ಪತ್ತೆಯಾಗಿದ್ದಾರೆ.‌

ಕಳೆದೈದು ದಿನಗಳಿಂದ ಹಗಲಿರುಳು ಶ್ರಮಿಸಿದ್ದಕ್ಕೆ ಶ್ಲಾಘನಿಸಲಾಗಿದೆ. ಗ್ರಾಮಸ್ಥರ ಪರವಾಗಿ ಮುಖಂಡರಿಂದ ಅಭಿನಂದಿಸಲಾಗಿದೆ. ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಗ್ರಾಮಾಂತರ ತಾಲೂಕು ಅಧ್ಯಕ್ಷ ಸತೀಶ್ ಉಪಸ್ಥಿತಿತರಿದ್ದರು.

Congratulations to the Ishwar Malpe team for a successful five-day operation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close