ಕರಡಿ ದಾಳಿ, ವ್ಯಕ್ತಿ ಆಸ್ಪತ್ರೆಗೆ ದಾಖಲು- Bear attack, man hospitalized

 SUDDILIVE || SHIVAMOGGA

ಕರಡಿ ದಾಳಿ, ವ್ಯಕ್ತಿ ಆಸ್ಪತ್ರೆಗೆ ದಾಖಲು- Bear attack, man hospitalized   

Bear, attack


ಶಿಕಾರಿಪುರ ತಾಲೂಕಿನ ಹಾರೆಗೊಪ್ಪ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಕರಡಿ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗ್ರಾಮದ ಸೋಮ್ಲಾ ನಾಯಕ್(58) ಎಂಬುವವರು ತಮ್ಮ ಜಮೀನಿನಲ್ಲಿ ಮುಂಜಾನೆ ಮೋಟ‌ರ್ ಹಾಕಲು ಹೋದಾಗ ಹಿಂದಿನಿಂದ ಬಂದ ಕರಡಿ ದಿಢೀರ್ ದಾಳಿ ನಡೆಸಿದೆ.

ಈ ಹಿನ್ನಲೆಯಲ್ಲಿ ಕುತ್ತಿಗೆ, ಬೆನ್ನು, ಹೊಟ್ಟೆಯ ಭಾಗದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕಿರುಚಾಟಕ್ಕೆ ಕರಡಿ ಓಡಿ ಹೋಗಿದೆ ಎಂದು ಗಾಯಾಳು ತಿಳಿಸಿದ್ದಾರೆ. ಪ್ರಾಣಪಾಯದಿಂದ ಸೋಮ್ಲಾ ನಾಯಕ್‌ ಸ್ಥಳದಿಂದ ಓಡಿ ಬಂದು ಹಾರೆಗೊಪ್ಪದ ಬಸ್‌ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸಾರ್ವಜನಿಕರು ಶಿಕಾರಿಪುರದ ಸಾರ್ವಜನಿಕ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.


ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಫಾರೆಸ್ಟ್ ಅಧಿಕಾರಿ ಡಿ ಆರ್ ಎಫ್ ಓ ಹರೀಶ್ ಸಜ್ಜಪ್ಪ ಮಾಹಿತಿ ಸಂಗ್ರಹಿಸಿ ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರ ಕೊಡಿಸುವ ಕುರಿತು ಭರವಸೆ ನೀಡಿದ್ದಾರೆ ಮತ್ತು ಇದೇ ಸಂದರ್ಭ ಆ ಭಾಗದಲ್ಲಿ ಮತ್ತೆ ಕರಡಿ ಕಂಡ ಪ್ರಸಂಗ ಬಂದಲ್ಲಿ ಸೆರೆ ಹಿಡಿಯಲು ಬೋನ್ ಗಳನ್ನು ಇಡಲಾಗುವುದು ಎಂದು ತಿಳಿಸಿದರು.

Bear attack, man hospitalized

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close