ಮನರೇಗಾ ಹೆಸರು ಮರುಸ್ಥಾಪಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಿಂದ ಗಾಂಧಿ ಪದರತಿಮೆ ಎದುರು ಬೃಹತ್ ಪ್ರತಿಭಟನೆ-Congress holds massive protest in front of Gandhi Padathime demanding restoration of MNREGA name

SUDDILIVE || SHIVAMOGGA

ಮನರೇಗಾ ಹೆಸರು ಮರುಸ್ಥಾಪಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಿಂದ ಗಾಂಧಿ ಪದರತಿಮೆ ಎದುರು ಬೃಹತ್ ಪ್ರತಿಭಟನೆ-Congress holds massive protest in front of Gandhi Padathime demanding restoration of MNREGA name    

Congress, protest


ಮನ್ರೇಗಾ ಹೆಸರನ್ನು ವಿಬಿಜಿ ರಾಮ ಜಿ ಎಂದು ಹೆಸರಿಸಿದ ಕೇಂದ್ರ ಸರ್ಕಾರದ ತೀರ್ಮಾನವನ್ನ ವಿರೋಧಿಸಿ ರಾಷ್ಟ್ರಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಜಿಲ್ಲಾ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ನಡೆಸಿದೆ.

ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ 500 ಮಂಜುನಾಥ್ ಸೂಡ್ಯಾಧ್ಯಕ್ಷ ಎಚ್ಎಸ್ ಸುಂದರೇಶ್, ಹಾಪ್ ಕಾಮ್ಸ್ ನ ವಿಜಯ ಕುಮಾರ್, ಜವಳಿ ನಿಗಮದ ಚೇತನ್ ಗೌಡ,  ಮಾಜಿ ಕಾರ್ಪರೇಟರ್ ಗಳಾದ ಎಚ್ ಸಿ ಯೋಗೇಶ್, ಯಮುನಾರಂಗೇಗೌಡ, ರಂಗೇಗೌಡ,  ಅರ್ಚನ ನಿರಂಜನ್ ಮೊದಲಾದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಈ ಹೋರಾಟವು ರಾಮನ ಹೆಸರಿನ ವಿರುದ್ಧವಲ್ಲ, ಬದಲಾಗಿ ಯೋಜನೆಯ ಬದಲಾವಣೆಯಿಂದ ಜನ ಸಾಮಾನ್ಯರಿಗೆ ಎದುರಾಗುವ ಗಂಭೀರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುವಂತೆ ಸಲಹೆಗಳು ಕೇಳಿಬಂದಿದ್ದರೂ, ಕಾನೂನು ಹೋರಾಟಕ್ಕೂ ಮುನ್ನ ಜನರಿಗೆ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವೆಂದು ಕಾಂಗ್ರೆಸ್ ನಿರ್ಧರಿಸಿತ್ತು.


ವಿಬಿಜಿ ರಾಮ್ ಜಿ ಯೋಜನೆಯಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ. ಕನಿಷ್ಠ ವೇತನದ ರಕ್ಷಣೆಯಿಲ್ಲ, ಕಾರ್ಮಿಕರ ಶೋಷಣೆ ಮತ್ತು ಒತ್ತಡ ಹೆಚ್ಚಳವಾಗಿದೆ. ಉದ್ಯೋಗದಲ್ಲಿ ಪಾಲುದಾರಿಕೆ ಇಳಿಕೆ, ದಲಿತ ಮತ್ತು ಆದಿವಾಸಿಗಳ ಕುಟುಂಬದ ಮೇಲೆ ಅಧಿಕ ಒತ್ತಡ, ಬಲವಂತದ ವಲಸೆ, ಗ್ರಾಮೀಣ ಜೀವನೋಪಾಯಗಳ ಕುಸಿತ,

ಪಂಚಾಯತಿಗಳು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ಸೀಮಿತಗೊಳ್ಳಲಿವೆ. ಸ್ಥಳೀಯ ಕಾಮಗಾರಿಗಳನ್ನ ನಿರ್ಧರಿಸುವ ಪಂಚಾಯಿತಿಗಳ ಅಧಿಕಾರ ಮೊಟಕಾಗಲಿದೆ. ನರೇಗಾವನ್ನ ಮರಳಿಸಿ ಉದ್ಯೋಗದ ಹಕ್ಕು ಉಳಿಸಿ, ಗ್ರಾಮಗಳ ಸ್ವಯಂ ಆಡಳಿತದ ಹಕ್ಕನ್ನ ಮರುಸ್ಥಾಪಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Congress holds massive protest in front of Gandhi Padathime demanding restoration of MNREGA name

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close