ಪ್ರತ್ಯೇಕ ಜಿಲ್ಲಾಸ್ಪತ್ರೆ ನಿರ್ಮಾಣ ಮತ್ತು ಬಾಬುಜಗಜೀವನ್ ರಾಮ್ ಭವನಕ್ಕೆ ಕಾಂಪೌಂಡ್ ಮತ್ತು ಇತರೇ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಡಿಎಸ್ಎಸ್ ಆಗ್ರಹ- DSS demands release of funds

 SUDDILIVE || SHIVAMOGGA

ಪ್ರತ್ಯೇಕ ಜಿಲ್ಲಾಸ್ಪತ್ರೆ ನಿರ್ಮಾಣ ಮತ್ತು  ಬಾಬುಜಗಜೀವನ್ ರಾಮ್ ಭವನಕ್ಕೆ ಕಾಂಪೌಂಡ್ ಮತ್ತು ಇತರೇ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಡಿಎಸ್ಎಸ್ ಆಗ್ರಹ- DSS demands release of funds for construction of separate district hospital, compound for Babujagjivan Ram Bhavan and other works    

Dss, demands


ಕುವೆಂಪು ನಗರದಲ್ಲಿ ೨.೪೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಾಬುಜಗಜೀವನ್ ರಾಮ್ ಭವನಕ್ಕೆ ಕಾಂಪೌಂಡ್ ಮತ್ತು ಇತರೇ ಕಾಮಗಾರಿಗಳಿಗಾಗಿ ಕೂಡಲೇ ೫೦ ಲಕ್ಷ ರೂ. ಬಿಡುಗಡೆ ಮಾಡಿ ಕೂಡಲೇ ಲೋಕಾರ್ಪಣೆಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜಗಜೀವನ್ ರಾಂ ಭವನ ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳೇ ಕಳೆದಿದ್ದು, ಭವನ ಉದ್ಘಾಟನೆಗೊಳ್ಳದಿರುವುದರಿಂದ ಅಲ್ಲಿ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದ್ದೂ ಅಲ್ಲದೆ, ಗಿಡಗಂಟಿಗಳು ಬೆಳೆದು ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ. ಇನ್ನುಳಿದ ಕಾಮಗಾರಿಗಳಿಗಾಗಿ ೫೦ ಲಕ್ಷ ರೂ. ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

೧೯೩೨ರಲ್ಲಿ ಮೈಸೂರು ಸಂಸ್ಥಾನದ ಶ್ರೀ ಕೃಷ್ಣರಾಜ ಒಡೆಯರ್ ಅವರು ಶಿವಮೊಗ್ಗದಲ್ಲಿ ೫೦ ಹಾಸಿಗೆಯುಳ್ಳ ಮೆಗ್ಗಾನ್ ಆಸ್ಪತ್ರೆ ಸ್ಥಾಪಿಸಿದ್ದರು. ಈಗ ಅದು ೨೦೦೭ರಲ್ಲಿ ಜಿಲ್ಲಾ ಬೋಧನಾ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಸುಮಾರು ೧೫೦೦ಕ್ಕೂ ಹೆಚ್ಚು ರೋಗಿಗಳು ಮೆಗ್ಗಾನ್ ಆಸ್ಪತ್ರೆಗೆ ಬರುತ್ತಾರೆ. ಹಿಂದೆ ಹೇಗಿದೆ ಹಾಗೆಯೇ ಕಟ್ಟಡದಲ್ಲಿದೆ.  ಇದು ಸಾಕಾಗುತ್ತಿಲ್ಲ. ಆದ್ದರಿಂದ  ಶಿವಮೊಗ್ಗ ನಗರಕ್ಕೆ ೧೦ ಎಕರೆ ಜಾಗದಲ್ಲಿ ೫೦೦ ಹಾಸಿಗೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡಬೇಕೆಂದು  ಒತ್ತಾಯಿಸಿದರು.

ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮಂಜೂರು ಮಾಡಬೇಕು. ವಿವಿಯ ಆರಂಭವಾಗಿ ೨೫ ವರ್ಷ ಕಳೆದರೂ ಎಸ್ಸಿ, ಎಸ್ಟಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇಲ್ಲದೇ ಅನಾನುಕೂಲವಾಗಿದೆ. ದಿರುವುದರಿಂದ ಕೂಡಲೇ ವಿವಿ ಕ್ಯಾಂಪಸ್ ಒಳಗೆ ಹಾಸ್ಟೆಲ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ವತಿಯಿಂದ ೧೦ ವರ್ಷಗಳ ಕಾಲ ಹೋರಾಟ ನಡೆಸಿದ ಪರಿಣಾಮ ಸರ್ಕಾರ ೨೦೧೪ರಲ್ಲಿ ಆಲ್ಕೋಳ ಸರ್ಕಲ್‌ಗೆ ಪ್ರೊ.ಬಿ.ಕೃಷ್ಣಪ್ಪ ಸರ್ಕಲ್ ಎಂದು ನಾಮಕರಣ ಮಾಡಿದೆ ಹಾಗೂ ವೃತ್ತ ಅಭಿವೃದ್ಧಿಗೆ ೧.೨೦ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು.  ವೃತ್ತ ಉದ್ಘಾಟನೆಗೊಂಡು ೮ ವರ್ಷಗಳಾದರೂ ಮಹಾನಗರಪಾಲಿಕೆಯಾಗಲೀ ಅಥವಾ ಸ್ಮಾರ್ಟ್‌ಸಿಟಿ ಯೋಜನೆಯಡಿಲ್ಲಾಗಲೀ ಯಾವುದೇ ಅಭಿವೃದ್ಧಿ ಕಾಮಗಾರಿ ಇದುವರೆಗೂ ಆಗಿಲ್ಲ. ಈಗಿರುವ ಪ್ರೊ.ಬಿ.ಕೃಷ್ಣಪ್ಪ ಸರ್ಕಲ್, ಸರ್ಕಲ್ ರೂಪದಲ್ಲಿರದೆ ಝಡ್ ಆಕೃತಿಯಲ್ಲಿದೆ. ಈ ಜಾಗವನ್ನು ಕೆಲವರು ಒತ್ತುವರಿ ಮಾಡಿ ಮನೆ ಮತ್ತು ಮಳಿಗೆ ಹಾಗೂ ದೇವಸ್ಥಾನ ಕಟ್ಟಿಕೊಂಡಿದ್ದಾರೆ. ಕೂಡಲೇ ಈ ವೃತ್ತವನ್ನು ವೃತ್ತಾಕಾರವಾಗಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.

ಈ ಮೇಲ್ಕಂಡ ಸಮಸ್ಯೆಗಳನ್ನಿಟ್ಟುಕೊಂಡು ಫೆ.೨ನೇ ವಾರದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಸರ್ಕಾರದ ಗಮನಸೆಳೆಯಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಶಿವಬಸಪ್ಪ, ಎಂ.ಏಳುಕೋಟಿ, ಎಂ.ರವಿ ಹರಿಗೆ, ಮನ್ಸೂರ್, ಕೃಷ್ಣಪ್ಪ, ಎ.ಅರ್ಜುನ್, ಬಸವರಾಜ್, ರಾಜಶೇಖರ, ಚೇತನ್ ಇನ್ನಿತರರು ಉಪಸ್ಥಿತರಿದ್ದರು.

DSS demands release of funds

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close