ವಾರದೊಳಗೆ ಅರ್ಜಿ ವಿಲೆಗೆ ಗಡುವು, ನೌಕರರ ಸಮವಸ್ತ್ರಕ್ಕೆ ಲೋಕಾಯುಕ್ತರ ಸೂಕ್ತ ನಿರ್ದೇಶನ-Deadline for disposal of applications within a week, Lokayukta's appropriate direction for uniforms for corporation employees

 SUDDILIVE || SHIVAMOGGA

ವಾರದೊಳಗೆ ಅರ್ಜಿ ವಿಲೆಗೆ ಗಡುವು, ನೌಕರರ ಸಮವಸ್ತ್ರಕ್ಕೆ ಲೋಕಾಯುಕ್ತರ ಸೂಕ್ತ ನಿರ್ದೇಶನ-Deadline for disposal of applications within a week, Lokayukta's appropriate direction for uniforms for corporation employees    

Deadline, disposal


ಶಿವಮೊಗ್ಗ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಮೂರು ತಂಡಗಳ ದಿಡೀರ್  ಭೇಟಿ. ಕಡತ ಪರಿಶೀಲನೆ ನಡೆಸಿದ್ದಾರೆ. ಜನರಲ್ ವಿಸಿಟ್ ಹಿನ್ನಲೆಯಲ್ಲಿ ಪಾಲಿಕೆಯ ಕಂದಾಯ ವಿಭಾಗದಲ್ಲಿ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. 

ಕಂದಾಯ ನೌಕರರ ಜೀನ್ಸ್ ಪ್ಯಾಂಟ್ ಕಲರ್ ಫುಲ್ ಶರ್ಟ್, ಕಿವಿ ಓಲೆಗೆ ಲೋಕಾಯುಕ್ತ ಪೊಲೀಸರು ತಾಕೀತು ಮಾಡಿದ್ದಾರೆ. ಸಮವಸ್ತ್ರ ಧರಿಸಿ ಐಡಿ ಹಾಕಿಕೊಂಡು ಬರಲು ಮೊದಲು ತಾಕೀತು ಮಾಡಿದ್ದಾರೆ. 


ಫೌತಿ ಖಾತೆ, ಖಾತೆ ಬದಲಾವಣೆ ಹೀಗೆ ಹಲವಾರು ಅರ್ಜಿಗಳನ್ನ ವಿಲೇ ಮಾಡುವ ಬಗ್ಗೆ ಲೋಕಾಯುಕ್ತರು ಪ್ರಶ್ನಿಸಿದ್ದಾರೆ. ನೌಕರರೊಬ್ಬರು ಅರ್ಜಿದಾರರಿಗೆ ಕರೆ ಮಾಡಿ ತಿಳಿಸಿದ್ದೇನೆ ಎಂದಾಗ ಸ್ವತಃ ಲೋಕಾಯುಕ್ತ ಎಸ್ಪಿ ಕೆಂಡಮಂಡಲರಾಗಿದ್ದಾರೆ. ಕರೆ ಮಾಡಲು ನಿನಗೆ ಯಾವ ಅಧಿಕಾರವಿದೆ. ಆಯುಕ್ತರ ಹೆಸರಿನಲ್ಲಿ ಹಿಂಬರಹ ಕೊಡಲು ಯಾಕೆ ಅಗಲಿಲ್ಲ. 47 ಖಾತೆ ಬದಲಾವಣೆ ಅರ್ಜಿಯಲ್ಲಿ 12 ಅರ್ಜಿ ಯಾಕೆ ವಿಲೇ ಆಗಿದೆ ಎಂದು ಕೆಂಡಮಂಡಲರಾದರು. 

ಅರ್ಜಿದಾರರು ಖಾತೆ ಬದಲಾವಣೆಗೆ  ಮೇ ತಿಂಗಳು 2025 ನೇ ಇಸವಿಯಲ್ಲಿ ಹಾಕಿದ್ದರೂ ಖಾತೆ ಬದಲಾವಣೆಯಾಕೆ ಆಗಿಲ್ಲ? ಫೌತಿ ಖಾತೆಗೆ ನವೆಂಬರ್ ತಿಂಗಳಲ್ಲಿ ಅರ್ಜಿ ಹಾಕಿದರೂ ವಿಲೇ ಆಗದ ವಿರುದ್ಧ ಲೋಕಾಯುಕ್ತರು ನೌಕರರ ಚಳಿಜ್ವರ ಬಿಡಿಸಿದ್ದಾರೆ. ಒಂದು ವಾರದ ಒಳಗೆ ಎಲ್ಲಾ ಅರ್ಜಿಗಳು ವಿಲೇ ಆಗಬೇಕೆಂದು ತಾಕೀತು ಮಾಡಿದರು. 

Deadline for disposal of applications within a week, Lokayukta's appropriate direction for uniforms for corporation employees

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close